ಎಚ್​ಎಎಲ್​ ನೌಕರರೊಂದಿಗೆ ರಾಹುಲ್ ಸಂವಾದ ಯಾವ ಪುರುಷಾರ್ಥಕ್ಕೆ? ಶೋಭಾ ಕರಂದ್ಲಾಜೆ

ಈಗಾಗಲೇ ರೆಫೇಲ್ ವಿಮಾನಗಳ ಖರೀದಿ ಬಗ್ಗೆ ಸಂಸತ್ ನಲ್ಲಿ ಸ್ಪಷ್ಟನೆ ಕೊಟ್ಟಿದ್ದೇವೆ. ಆದರೂ ಕೂಡ ಅವರು ರಫೇಲ್ ವಿಮಾನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡ್ತಿದ್ದಾರೆ- ಶೋಭಾ ಕರಂದ್ಲಾಜೆ ಟೀಕೆ

Last Updated : Oct 13, 2018, 01:54 PM IST
ಎಚ್​ಎಎಲ್​ ನೌಕರರೊಂದಿಗೆ ರಾಹುಲ್ ಸಂವಾದ ಯಾವ ಪುರುಷಾರ್ಥಕ್ಕೆ? ಶೋಭಾ ಕರಂದ್ಲಾಜೆ title=

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯಾವ ಪುರುಷಾರ್ಥಕ್ಕೆ ಎಚ್ಎಎಲ್ ನೌಕರರೊಂದಿಗೆ ಸಂವಾದ ನಡೆಸುತ್ತಾರೋ ಗೊತ್ತಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಿನ್ಸ್ಕ್ ​​ಸ್ಕ್ವೇರ್​​​ನಲ್ಲಿ ಇಂದು ಮಧ್ಯಾಹ್ನ ನಡೆಯಲಿರುವ ರಾಹುಲ್ ಗಾಂಧಿ​ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು, ಯಾವ ಪುರುಷಾರ್ಥಕ್ಕಾಗಿ ಈ ಕಾರ್ಯಕ್ರಮ ಗೊತ್ತಿಲ್ಲ. ಯುಪಿಎ ಆಡಳಿತಾವಧಿಯಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ. ಸೈನಿಕರಿಗೆ ಅಗತ್ಯ ಸಾಮಾಗ್ರಿಗಳನ್ನು ಒದಗಿಸಲು ಕಾಂಗ್ರೆಸ್ ವಿಫಲವಾಗಿದೆ. ಆದರೆ ನಾವು ಭದ್ರತೆಗೆ ಲಘು ಯುದ್ಧ ವಿಮಾನ ಖರೀದಿಸಿದರೆ ಕಾಂಗ್ರೆಸ್ ಆರೋಪ ಮಾಡುತ್ತಿದೆ ಎಂದು ಟೀಕಿಸಿದರು. 

'ರಫೇಲ್' ಲಡಾಯಿ: ಎಚ್‌ಎಎಲ್‌ ಸಿಬ್ಬಂದಿ ಜತೆ ಇಂದು ರಾಹುಲ್ ಸಂವಾದ

'ರಾಹುಲ್ ಗಾಂಧಿ ಹೋದ ಕಡೆಯಲ್ಲಾ ರಫೇಲ್ ಯುದ್ಧ ವಿಮಾನ ಖರೀದಿ ಬಗ್ಗೆ ಒಂದೊಂದು ಸುಳ್ಳು ಮಾಹಿತಿ ಕೊಡುತ್ತಿದ್ದಾರೆ'. ಐದು ದಶಕಕ್ಕೂ ಹೆಚ್ಚು ಕಾಲ ದೇಶ ಆಳಿದ ಕಾಂಗ್ರೆಸ್ ದೇಶಕ್ಕೆ ಅಗತ್ಯ ಯುದ್ಧ ಸಾಮಗ್ರಿ ಖರೀದಿಸಲಿಲ್ಲ. ರಾತ್ರಿ ಗಸ್ತು ಕಾಯುವ ಸೈನಿಕರಿಗೆ ಬಳಸಲು ಕನ್ನಡಕವನ್ನು ಖರೀದಿಸಲಿಲ್ಲ. ಯುಪಿಎ ಸರ್ಕಾರದ ಅವಧಿಯಲ್ಲೇ ರಫೇಲ್ ಯುದ್ಧ ವಿಮಾನವನ್ನು ಖರೀದಿಸಬಹುದಿತ್ತಲ್ಲವೇ' ಎಂದು ಪ್ರಶ್ನಿಸಿದರು.

ಈಗಾಗಲೇ ರೆಫೇಲ್ ವಿಮಾನಗಳ ಖರೀದಿ ಬಗ್ಗೆ ಸಂಸತ್ ನಲ್ಲಿ ಸ್ಪಷ್ಟನೆ ಕೊಟ್ಟಿದ್ದೇವೆ. ಆದರೂ ಕೂಡ ಅವರು ರಫೇಲ್ ವಿಮಾನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಶೋಭಾ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.

ಯುಪಿಎ ಆಡಳಿತಾವಧಿಯಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ. ಸೈನಿಕರಿಗೆ ಅಗತ್ಯ ಸಾಮಾಗ್ರಿಗಳನ್ನು ಒದಗಿಸಲು ಕಾಂಗ್ರೆಸ್ ವಿಫಲವಾಗಿದೆ. ಆದರೆ ನಾವು ಭದ್ರತೆಗೆ ಲಘು ಯುದ್ಧ ವಿಮಾನ ಖರೀದಿಸಿದರೆ ಕಾಂಗ್ರೆಸ್ ಆರೋಪ ಮಾಡುತ್ತಿದೆ. ಈ ಸಂವಾದದ ಮೂಲಕ ರಾಹುಲ್​ ಗಾಂಧಿ ರಾಜಕೀಯ ಮಾಡುತ್ತಿದ್ದಾರೆ. ಮಿನ್ಸ್ಕ್ ​ಸ್ಕ್ವೇರ್​​​​ನಲ್ಲಿ ಯಾವುದೇ ಸಂವಾದಕ್ಕೆ ಅವಕಾಶ ಕೊಡಬಾರದು ಎಂದು ಅವರು ಹೇಳಿದರು. 

Trending News