ಶಾಕಿಂಗ್ ನ್ಯೂಸ್: ಮುಂಬೈಯಿಂದ ಗೋರಖ್‌ಪುರಕ್ಕೆ ಹೊರಟ ಶ್ರಮಿಕ್ ರೈಲು ತಲುಪಿದ್ದೆಲ್ಲಿಗೆ?

ಮುಂಬಯಿಯಿಂದ ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ತೆರಳಿದ ರೈಲು ಒಡಿಶಾ ತಲುಪಿರುವ ನಿರ್ಲಕ್ಷದ ಬಗ್ಗೆ ವರದಿ.

Updated: May 23, 2020 , 02:15 PM IST
ಶಾಕಿಂಗ್ ನ್ಯೂಸ್: ಮುಂಬೈಯಿಂದ ಗೋರಖ್‌ಪುರಕ್ಕೆ ಹೊರಟ ಶ್ರಮಿಕ್ ರೈಲು ತಲುಪಿದ್ದೆಲ್ಲಿಗೆ?

ರೂರ್ಕೆಲಾ:  ಎರಡು ತಿಂಗಳುಗಳಿಂದ ಲಾಕ್‌ಡೌನ್‌ನ ಅಂತ್ಯವನ್ನು ಹುಡುಕುತ್ತಿರುವ ವಲಸೆ ಕಾರ್ಮಿಕರಿಗೆ (Migrant workers) ತಮ್ಮ ಗ್ರಾಮಗಳನ್ನು ಸೇರಲು ಇನ್ನೂ ಕಾಲ ಕೂಡಿ ಬಂದಿಲ್ಲವೇನೋ... ದೇಶಾದ್ಯಂತ  ಲಾಕ್‌ಡೌನ್‌ (Lockdown) ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕೆಲವರು ಕಾಲ್ನಡಿಗೆಯಲ್ಲಿ, ಬಸ್ಸುಗಳು, ಟ್ರಕ್ಗಳು ​​ಅಥವಾ ಇತರ ಮಾರ್ಗಗಳಿಂದ ತಮ್ಮ ಮನೆಗಳನ್ನು ತಲುಪಿದರು. ಏತನ್ಮಧ್ಯೆ ಕಾರ್ಮಿಕರ ದುಃಸ್ಥಿತಿಯ ಬಗ್ಗೆ ಕರುಣೆ ತೋರಿ, ಕಾರ್ಮಿಕ ವಿಶೇಷ ರೈಲುಗಳನ್ನು ಓಡಿಸಲು ಸರ್ಕಾರ ಯೋಚಿಸಿತು. ಇದು ನಗರಗಳಲ್ಲಿ ಸಿಕ್ಕಿಬಿದ್ದ ಕಾರ್ಮಿಕರಲ್ಲಿ ಭರವಸೆಯನ್ನು ಹುಟ್ಟುಹಾಕಿತು ಮತ್ತು ಈಗ ಅವರು ಸುರಕ್ಷಿತವಾಗಿ ತಮ್ಮ ಮನೆಗೆ ತಲುಪುತ್ತಾರೆ ಎಂಬ ನಿಟ್ಟುಸಿರು ಬಿಟ್ಟರು.

ಆದರೆ ಮುಂಬಯಿಯಿಂದ ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ತೆರಳಿದ ರೈಲು ಒಡಿಶಾ ತಲುಪಿರುವ ನಿರ್ಲಕ್ಷದ ಬಗ್ಗೆ ವರದಿಯಾಗಿದ್ದು ಎಂದು ಮೊದಲೇ ಕಂಗೆಟ್ಟಿದ್ದ ಕಾರ್ಮಿಕರಿಗೆ ಮುಂದೇನು ಮಾಡುವುದು ಎಂದು ಯೋಚಿಸುವಂತೆ ಮಾಡಿದೆ. ವಾಸ್ತವವಾಗಿ ಮುಂಬೈಯಿಂದ ರೈಲಿನಲ್ಲಿ ಕುಳಿತ ಜನರು ಇಂದು ಬೆಳಿಗ್ಗೆ ಮನೆಗೆ ಹೋಗಲು ತಯಾರಾದಾಗ ಅವರು ಗೋರಖ್‌ಪುರದಲ್ಲ ಒಡಿಶಾದಲ್ಲಿದ್ದರು. 

ಮೇ 21 ರಂದು ಮುಂಬೈನ ವಾಸೈ ನಿಲ್ದಾಣದಿಂದ ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ಹೊರಟಿದ್ದ ರೈಲು ಬೇರೆ ಮಾರ್ಗದಲ್ಲಿ ಒಡಿಶಾದ ರೂರ್ಕೆಲಾ ತಲುಪಿದೆ. ಕೋಪಗೊಂಡ ಪ್ರಯಾಣಿಕರು ರೈಲ್ವೆಯಿಂದ ಈ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಅಲ್ಲಿದ್ದ ಅಧಿಕಾರಿಗಳು, ಸ್ವಲ್ಪ ತೊಂದರೆಯಿಂದಾಗಿ ರೈಲಿನ ಚಾಲಕ ದಾರಿ ತಪ್ಪಿದ್ದಾನೆ ಎಂದು ಹೇಳಿದ್ದಾರೆ.

ಈ ಇಡೀ ವಿಷಯದಲ್ಲಿ ರೈಲ್ವೆ ಚಾಲಕನ ದೋಷವಿಲ್ಲ ಎಂದು ಚಾಲಕನನ್ನು ಸಮರ್ಥಿಸಿಕೊಂಡಿರುವ ರೈಲ್ವೆ ಅಧಿಕಾರಿಗಳು ಗಮ್ಯಸ್ಥಾನದಲ್ಲಿನ ಬದಲಾವಣೆಯನ್ನು ವಿನ್ಯಾಸದಿಂದ ಮಾಡಲಾಗಿದೆ ಎಂದಿದ್ದಾರೆ. ವಿಪರ್ಯಾಸವೆಂದರೆ ಅಲ್ಲಿದ್ದ ಪ್ರಯಾಣಿಕರಿಗೆ ಮಾರ್ಗ ಬದಲಾವಣೆಯ ಅರಿವೇ ಇರಲಿಲ್ಲ.  ಮಾರ್ಗ ಬದಲಾವಣೆ ಮೊದಲೇ ನಿರ್ಧರಿಸಿದ್ದರೆ ರೈಲ್ವೆ ಇಲಾಖೆಯು ಈ ಬಗ್ಗೆ ಪ್ರಯಾಣಿಕರಿಗೆ ಮೊದಲೇ ಏಕೆ ಮಾಹಿತಿ ಒದಗಿಸಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಈ ಕುರಿತಂತೆ ರೈಲ್ವೆ ಪ್ರಕರಣ ದಾಖಲಿಸಿಕೊಂಡಿದ್ದು ಈ ನಿರ್ಲಕ್ಷಕ್ಕೆ ಯಾರು ಹೊಣೆ ಎಂಬುದನ್ನು ತನಿಖೆ ನಡೆಸುತ್ತಿದೆ.

ಅದೇನೇ ಇರಲಿ ಮುಂಬೈನಿಂದ ತಮ್ಮ ತವರಿಗೆ ತೆರಳಲು ಕಾಯುತ್ತಿದ್ದ ಪ್ರವಾಸಿಗರು, ಈ ವಲಸೆ ಕಾರ್ಮಿಕರು ಪ್ರಸ್ತುತ ಮುಂಬೈ ತೊರೆದ ನಂತರ ಒಡಿಶಾದಲ್ಲಿ ಸಿಲುಕಿಕೊಂಡಿದ್ದಾರೆ. ಅವರ ಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ.