ರಿವೇಂಜ್‌ಗಾಗಿ ನಡೀತು ಪಂಜಾಬಿ ಗಾಯಕನ ಬರ್ಬರ ಹತ್ಯೆ..!?

ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರ ಹತ್ಯೆಯು ವಿಕ್ರಮಜಿತ್ ಅಲಿಯಾಸ್ ವಿಕ್ಕಿ ಮಿದ್ದುಖೇರಾ ಅವರ ಹತ್ಯೆಯ ರಿವೇಂಜ್‌ ಆಗಿರಬಹುದು ಎಂದು ದೆಹಲಿ ಪೊಲೀಸರು ಶಂಕಿಸಿದ್ದಾರೆ.

Written by - CHAITAN MAVUR | Last Updated : May 30, 2022, 03:28 PM IST
  • ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರ ಹತ್ಯೆ
    ವಿಕ್ಕಿ ಮಿದ್ದುಖೇರಾ ಕೊಲೆ ರಿವೇಂಜ್‌ಗಾಗಿ ಗಾಯಕನ ಬರ್ಬರ ಹತ್ಯೆ!?
    ಹತ್ಯೆಯ ಹೊಣೆ ಹೊತ್ತ ಕೆನಡಾದ ಗ್ಯಾಂಗಸ್ಟರ್‌ ಗೋಲ್ಡಿ ಬ್ರಾರ್
ರಿವೇಂಜ್‌ಗಾಗಿ ನಡೀತು ಪಂಜಾಬಿ ಗಾಯಕನ ಬರ್ಬರ ಹತ್ಯೆ..!? title=

ಪಂಜಾಬ್‌: ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರ ಹತ್ಯೆಯು ವಿಕ್ರಮಜಿತ್ ಅಲಿಯಾಸ್ ವಿಕ್ಕಿ ಮಿದ್ದುಖೇರಾ ಅವರ ಹತ್ಯೆಯ ರಿವೇಂಜ್‌ ಆಗಿರಬಹುದು ಎಂದು ದೆಹಲಿ ಪೊಲೀಸರು ಶಂಕಿಸಿದ್ದಾರೆ. ದೆಹಲಿ ಪೊಲೀಸ್ ವಿಶೇಷ ಸೆಲ್ ಪ್ರಕಾರ ಮೂಸ್ ವಾಲಾ ಮತ್ತು ಅವರ ಮ್ಯಾನೇಜರ್ ಇಬ್ಬರೂ ಕಳೆದ ವರ್ಷ ಆಗಸ್ಟ್‌ನಲ್ಲಿ ವಿಕ್ಕಿ ಹತ್ಯೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. ಈ ಕೇಸ್‌ಗಾಗಿ ದೆಹಲಿ ಪೊಲೀಸ್ ವಿಶೇಷ ಸೆಲ್ ಇತ್ತೀಚೆಗೆ ಕುಖ್ಯಾತ ದರೋಡೆಕೋರ ನೀರಜ್ ಬವಾನಿಯಾ ಮತ್ತು ಟಿಲ್ಲು ತಾಜ್‌ಪುರಿಯ ನಂಟಿನ ಬಗ್ಗೆ ಮಾಹಿತಿ ಕಲೆ ಹಾಕಿತ್ತು. ಬವಾನಿಯಾ ಮತ್ತು ತಾಜ್‌ಪುರಿಯವರು ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ದರೋಡೆಕೋರರಾದ ​​ಕೌಶಲ್ ಚೌಧರಿ, ದೇವಿಂದರ್ ಭಂಬಿಯಾ ಮತ್ತು ಲಕ್ಕಿ ಪಟಿಯಲ್ ಅವರೊಂದಿಗೆ ತಂಡವನ್ನು ಕಟ್ಟಿದ್ದರು. 

ಇದನ್ನೂ ಓದಿ:ಅಯೋಧ್ಯೆ ನಂತರ ಕಾಶಿ, ಮಥುರಾ ಜಾಗೃತಗೊಳ್ಳುತ್ತಿರುವಂತೆ ಕಾಣುತ್ತಿದೆ: ಯೋಗಿ ಆದಿತ್ಯನಾಥ್

ವಿಕ್ಕಿ ಹತ್ಯೆ ಕೇಸ್‌ ಬೆನ್ನಟ್ಟಿದ್ದ ದೆಹಲಿ ಪೊಲೀಸರು ಈ ಐದು ಸದಸ್ಯರ ಗ್ಯಾಂಗ್‌ನ ಸುಮಾರು ಹನ್ನೆರಡು ದುಷ್ಕರ್ಮಿಗಳನ್ನು ಬಂಧಿಸಿದ್ದರು. ಬಂಧಿತರನ್ನು ಶಾರ್ಪ್ ಶೂಟರ್ ಸಜ್ಜನ್ ಸಿಂಗ್ ಅಲಿಯಾಸ್ ಭೋಲು, ಅನಿಲ್ ಕುಮಾರ್ ಅಲಿಯಾಸ್ ಲತ್ ಮತ್ತು ಅಜಯ್ ಕುಮಾರ್ ಅಲಿಯಾಸ್ ಸನ್ನಿ ಕೌಶಲ್ ಎಂದು ಗುರುತಿಸಲಾಗಿದೆ. ಈ ಆರೋಪಿಗಳ ವಿಚಾರಣೆ ವೇಳೆ ಬಂಧಿತ ಮೂವರು ವಿಕ್ಕಿ ಕೊಲೆ ಪ್ರಕರಣದಲ್ಲಿ ಮೂಸ್ ವಾಲಾ ಮತ್ತು ಆತನ ಮ್ಯಾನೇಜರ್ ಭಾಗಿಯಾಗಿರುವ ಬಗ್ಗೆ ಬಹಿರಂಗಪಡಿಸಿದ್ದರು ಎನ್ನಲಾಗಿದೆ. 

ಯಾರು ಈ ಕೊಲೆಯಾದ ವಿಕ್ಕಿ!

ಪೊಲೀಸ್‌ ಮಾಹಿತಿಗಳ ಪ್ರಕಾರ ವಿಕ್ಕಿ ಮತ್ತು ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಆಪ್ತ ಸ್ನೇಹಿತರಾಗಿದ್ದರು. ಸದ್ಯ ಬಿಷ್ಣೋಯ್ ವಿವಿಧ ಅಪರಾಧಗಳಲ್ಲಿ 2017 ರಿಂದ ರಾಜಸ್ಥಾನದ ಭರತ್‌ಪುರದ ಜೈಲಿನಲ್ಲಿದ್ದಾನೆ. ವಿಕ್ಕಿ ಕೊಲೆ ಕೇಸ್‌ ಪೊಲೀಸರು ಮೂಸೆವಾಲಾ ಮೇಲೆ ಮತ್ತು ಆತನ ಮ್ಯಾನೇಜರ್‌ ಮೇಲೆ ಸರಿಯಾದ ಕ್ರಮ ಕೈಗೊಳ್ಳಲ್ಲಿಲ್ಲ. ಹೀಗಾಗಿ ಸಿಧು ಮೂಸೆ ವಾಲಾ ಮೇಲೆ ದಾಳಿ ಮಾಡಿರುವುದು ನಾವೇ ಎಂದು ಗ್ಯಾಂಗ್‍ಸ್ಟರ್ ಲಾರೆನ್ಸ್ ಬಿಷ್ಣೋಯ್‍ ಸಹವರ್ತಿ, ಕೆನಡಾ ಮೂಲದ ಗ್ಯಾಂಗಸ್ಟರ್‌ ಗೋಲ್ಡಿ ಬ್ರಾರ್,  ತನ್ನ ಫೇಸ್‌ಬುಕ್ ಪೇಜ್‌ ಪೋಸ್ಟ್‌ನಲ್ಲಿ ಗಾಯಕ ಮೂಸ್ ವಾಲಾ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ.

ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್ ಸಿಧು ಮೂಸ್ ವಾಲಾ ಹತ್ಯೆಯಲ್ಲಿ ಭಾಗಿಯಾಗಿದೆ ಎಂದು ಪಂಜಾಬ್ ಪೊಲೀಸ್ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ ಎಂದು ಪಂಜಾಬ್ ಡಿಜಿಪಿ ಹೇಳಿದ್ದಾರೆ. ಮೂಸ್ ವಾಲಾ ಅವರು ಖಾಸಗಿ ಬುಲೆಟ್ ಪ್ರೂಫ್ ಕಾರು ಮತ್ತು ಇಬ್ಬರು ಪೊಲೀಸ್ ಕಮಾಂಡೋಗಳನ್ನು ಹೊಂದಿದ್ದರು. ಆದ್ರೆ ಶೂಟೌಟ್‌ ವೇಳೆ ಯಾರೂ ಗಾಯಕನ ಜೊತೆಯಲ್ಲಿ ಇರಲಿಲ್ಲ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ಹತ್ಯೆಯಲ್ಲಿ ಭಾಗಿಯಾಗಿದೆ. ಅದೃಷ್ಟವಶಾತ್, ಗ್ಯಾಂಗ್‌ನ ಸದಸ್ಯ ಕೆನಡಾದಿಂದ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾನೆ. ಮೂರು ಶಸ್ತ್ರಾಸ್ತ್ರಗಳನ್ನು ಬಳಸಲಾಗಿದೆ ಅಂತಲೂ ಸುದ್ದಿಗೋಷ್ಠಿ ವೇಳೆ ತಿಳಿಸಿದ್ದಾರೆ ಎಂದು ಎಎನ್‌ಐ  ವರದಿ ಮಾಡಿದೆ. 

ಇದನ್ನೂ ಓದಿ:ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News