ಪ್ರಯಾಗರಾಜ್-ಆನಂದ್ ವಿಹಾರ್ ನಡುವೆ ವಿಶೇಷ ರೈಲು ಸಂಚಾರ

ಜುಲೈ 5ರಂದು ರಾತ್ರಿ 8.30ಕ್ಕೆ ಸಂಖ್ಯೆ 04117 ಪ್ರಯಾಗರಾಜ್-ಆನಂದ್ ವಿಹಾರ್ ಟರ್ಮಿನಲ್ ಸೂಪರ್ ಫಾಸ್ಟ್ ವಿಶೇಷ ರೈಲು ಪ್ರಯಾಗರಾಜ್ ನಿಂದ ಹೊರಡಲಿದೆ.

Last Updated : Jul 3, 2019, 06:59 PM IST
ಪ್ರಯಾಗರಾಜ್-ಆನಂದ್ ವಿಹಾರ್ ನಡುವೆ ವಿಶೇಷ ರೈಲು ಸಂಚಾರ title=

ನವದೆಹಲಿ: ರೈಲು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪ್ರಯಾಗರಾಜ್ ಮತ್ತು ದೆಹಲಿಯ ಆನಂದ್ ವಿಹಾರ್ ಟರ್ಮಿನಲ್ ನಡುವೆ ವಿಶೇಷ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ನಿರ್ಧರಿಸಿದೆ. ಅದರಂತೆ ಜುಲೈ 5ರಂದು ರಾತ್ರಿ 8.30ಕ್ಕೆ ಸಂಖ್ಯೆ 04117 ಪ್ರಯಾಗರಾಜ್-ಆನಂದ್ ವಿಹಾರ್ ಟರ್ಮಿನಲ್ ಸೂಪರ್ ಫಾಸ್ಟ್ ವಿಶೇಷ ರೈಲು ಪ್ರಯಾಗರಾಜ್ ನಿಂದ ಹೊರಡಲಿದೆ.

ರೈಲ್ವೆ ಮೂಲಗಳ ಪ್ರಕಾರ, ಈ ರೈಲು ಮರುದಿನ ಬೆಳಿಗ್ಗೆ 6 ಗಂಟೆಗೆ ಆನಂದ್ ವಿಹಾರ್ ಟರ್ಮಿನಲ್ ತಲುಪಲಿದೆ. ಮತ್ತೆ ಆನಂದ್ ವಿಹಾರ್ ಟರ್ಮಿನಲ್ ನಿಂದ ಜುಲೈ 6 ರಂದು ಬೆಳಿಗ್ಗೆ 7.50 ಕ್ಕೆ ಹೊರಟು ಆ ದಿನ ಸಂಜೆ 5.20 ಕ್ಕೆ ಪ್ರಯಾಗರಾಜ್'ಗೆ ಹಿಂತಿರುಗಲಿದೆ.

ಈ ರೈಲಿನಲ್ಲಿ  2 ಶ್ರೇಣಿಯ 2 ಹವಾನಿಯಂತ್ರಿತ ಬೋಗಿಗಳು, 3 ಶ್ರೇಣಿಯ 5 ಹವಾನಿಯಂತ್ರಿತ ಬೋಗಿಗಳು ಮತ್ತು ಸ್ಲೀಪರ್ ವರ್ಗದ 7 ಮತ್ತು ಸಾಮಾನ್ಯ ವರ್ಗದ 4 ಬೋಗಿಗಳೊಂದಿಗೆ ಎರಡನೇ ದರ್ಜೆಯ ಮತ್ತು ಲಗೇಜ್ ಭೋಗಿ ಸಹ ಇರಲಿದೆ.  ಈ ರೈಲು ಮಾರ್ಗದಲ್ಲಿ ಫತೇಪುರ್, ಕಾನ್ಪುರ್ ಸೆಂಟ್ರಲ್, ಆಲಿಗಢ ಮತ್ತು ಘಾಜಿಯಾಬಾದ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

Trending News