ಪಾಕಿಸ್ತಾನ: ಮೊಟ್ಟಮೊದಲ ಸಿವಿಲ್ ಜಡ್ಜ್ ಆಗಿ ಇತಿಹಾಸ ರಚಿಸಿದ ಹಿಂದೂ ಯುವತಿ

ಗ್ರಾಮೀಣ ಪ್ರದೇಶದಿಂದ ಬಂದರೂ ಸಹ ತನ್ನ ಕಠಿಣ ಪರಿಶ್ರಮ ಹಾಗೂ ಸಾಧನೆಯ ಮೂಲಕ ಸುಮನ್ ತನ್ನ ಹಾಗೂ ತನ್ನ ಕುಟುಂಬ ಸದಸ್ಯರ ಕನಸನ್ನು ನನಸಾಗಿಸಿದ್ದಾರೆ.

Last Updated : Feb 2, 2020, 01:09 PM IST
ಪಾಕಿಸ್ತಾನ: ಮೊಟ್ಟಮೊದಲ ಸಿವಿಲ್ ಜಡ್ಜ್ ಆಗಿ ಇತಿಹಾಸ ರಚಿಸಿದ ಹಿಂದೂ ಯುವತಿ title=

ಕರಾಚಿ: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಸುಮನ್ ಪವನ್ ಬೋಡಾನಿ ತನ್ನ ಸಮುದಾಯದ ಮೊಟ್ಟಮೊದಲ ಜಡ್ಜ್ ಆಗಿ ನೇಮಕಗೊಂಡಿದ್ದಾರೆ. ಸುಮನ್ ಸಿಂಧ್ ಪ್ರಾಂತ್ಯಕ್ಕೆ ಸೇರಿರುವ ಶಹದಾದ್ ಕೊಟ್ ನಿವಾಸಿಯಾಗಿದ್ದಾರೆ. ಸಿವಿಲ್ ಜಡ್ಜ್ ಗಳ ಶ್ರೇಯಾಂಕ ಪಟ್ಟಿಯಲ್ಲಿ ಸುಮನ್ 54ನೇ ಸ್ಥಾನ ಪಡೆದುಕೊಂಡಿದ್ದಾರೆ. ಗ್ರಾಮೀಣ ಪ್ರದೇಶದಿಂದ ಬಂದರೂ ಸಹ ತನ್ನ ಕಠಿಣ ಪರಿಶ್ರಮ ಹಾಗೂ ಸಾಧನೆಯ ಮೂಲಕ ಸುಮನ್ ತನ್ನ ಹಾಗೂ ತನ್ನ ಕುಟುಂಬ ಸದಸ್ಯರ ಕನಸನ್ನು ನನಸಾಗಿಸಿದ್ದಾರೆ.

ಹೈದ್ರಾಬಾದ್ ನಲ್ಲಿ LLB ಪದವಿ ಪಡೆದಿರುವ ಸುಮನ್ ಬಳಿಕ LLM ಪದವಿ ಪಡೆಯಲು ಸುಮನ್ ಕರಾಚಿಗೆ ತೆರಳಿದ್ದಾರೆ. ಅಲ್ಲಿನ ಶಹೀದ್ ಜುಲ್ಫಿಕರ್ ಅಲಿ ಭುಟ್ಟೋ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಟೆಕ್ನಾಲಾಜಿನಲ್ಲಿ ತಮ್ಮ LLM ಪದವಿ ಮುಗಿಸಿದ್ದಾರೆ. ಬಳಿಕ ಲಾ ಸಂಸ್ಥೆಯೊಂದರಲ್ಲಿ ಎರಡು ವರ್ಷ ಪ್ರ್ಯಾಕ್ಟಿಸ್ ನಡೆಸಿದ್ದಾರೆ.

ಪಾಕಿಸ್ತಾನದಲ್ಲಿ ಹಿಂದೂ ಸಮುದಾಯ ಅಲ್ಪಸಂಖ್ಯಾತ ಸಮುದಾಯವಾಗಿದ್ದು, ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.2ರಷ್ಟು ಹಿಂದೂ ಸಮುದಾಯದ ಜನರಿದ್ದಾರೆ. ಹಿಂದೂ ಸಮುದಾಯದಿಂದ ಜಸ್ಟಿಸ್ ರಾಣಾ ಭಗವಾನ್ ದಾಸ್ ಮೊದಲ ಜಡ್ಜ್ ಆಗಿದ್ದರು. ಅವರು ಕಾರ್ಯನಿರ್ವಾಹಕ ಮುಖ್ಯ ನ್ಯಾಯಮೂರ್ತಿಗಳಾಗಿ ಕೂಡ ಸೇವೆ ಸಲ್ಲಿಸಿದ್ದರು.

Trending News