ಅಯೋಧ್ಯೆ ವಿವಾದ: 10 ನೇ ದಿನಕ್ಕೆ ಕಾಲಿಟ್ಟ ಸುಪ್ರೀಂಕೋರ್ಟ್ ವಿಚಾರಣೆ

ರಾಮ್ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದ 10 ನೇ ದಿನದ ಸುಪ್ರೀಂ ಕೋರ್ಟ್ ವಿಚಾರಣೆ ಗುರುವಾರ ಪ್ರಾರಂಭವಾಗಿದೆ, ವಿವಾದಿತ ಸ್ಥಳದಲ್ಲಿ ಪೂಜಿಸುವ ಹಕ್ಕುಗಳನ್ನು ಜಾರಿಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಕುರಿತು ಕೋರ್ಟ್ ವಿಚಾರಣೆ ನಡೆಸುತ್ತಿದೆ.

Last Updated : Aug 22, 2019, 02:23 PM IST
ಅಯೋಧ್ಯೆ ವಿವಾದ: 10 ನೇ ದಿನಕ್ಕೆ ಕಾಲಿಟ್ಟ ಸುಪ್ರೀಂಕೋರ್ಟ್ ವಿಚಾರಣೆ title=

ನವದೆಹಲಿ: ರಾಮ್ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದ 10 ನೇ ದಿನದ ಸುಪ್ರೀಂ ಕೋರ್ಟ್ ವಿಚಾರಣೆ ಗುರುವಾರ ಪ್ರಾರಂಭವಾಗಿದೆ, ವಿವಾದಿತ ಸ್ಥಳದಲ್ಲಿ ಪೂಜಿಸುವ ಹಕ್ಕುಗಳನ್ನು ಜಾರಿಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಕುರಿತು ಕೋರ್ಟ್ ವಿಚಾರಣೆ ನಡೆಸುತ್ತಿದೆ.

ಈಗ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐದು ನ್ಯಾಯಾಧೀಶರ ಪೀಠವು ಶೀರ್ಷಿಕೆ ವಿವಾದದ ವಿಚಾರಣೆ ನಡೆಸುತ್ತಿದೆ. ಮೂಲ ದಾವೆದಾರರಲ್ಲಿ ಒಬ್ಬರಾದ ಗೋಪಾಲ್ ಸಿಂಗ್ ವಿಶಾರದ ಪರ ಹಾಜರಾದ ಹಿರಿಯ ವಕೀಲ ರಂಜಿತ್ ಕುಮಾರ್ ಅವರು ನ್ಯಾಯಪೀಠದ ಮುಂದೆ ವಾದಗಳನ್ನು ಪ್ರಾರಂಭಿಸಿದರು. 

ಅಯೋಧ್ಯೆಯಲ್ಲಿನ 2.77 ಎಕರೆ ಭೂಮಿಯನ್ನು ಮೂರು ಪಕ್ಷಗಳ ನಡುವೆ ಸಮಾನವಾಗಿ ವಿಭಜಿಸಬೇಕು ಎಂದು ಹೇಳಿದ್ದ 2010 ರ ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಹದಿನಾಲ್ಕು ಮೇಲ್ಮನವಿ ಸಲ್ಲಿಸಲಾಗಿದೆ. ಇದರಲ್ಲಿ ಈಗ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖರಾ ಮತ್ತು ರಾಮ್ ಲಲ್ಲಾ ಪ್ರಮುಖ ಪಕ್ಷಗಳಾಗಿವೆ. 

ಬಾಬರಿ ಮಸೀದಿಯನ್ನು ಹಿಂದೂ ಬಲಪಂಥೀಯ ಕಾರ್ಯಕರ್ತರು 1992 ರ ಡಿಸೆಂಬರ್ 6 ರಂದು ಅಯೋಧ್ಯೆಯಲ್ಲಿ ನೆಲಸಮ ಮಾಡಿದ್ದರಿಂದಾಗಿ, ಇದು ಸುದೀರ್ಘ ಕಾನೂನು ಹೋರಾಟಕ್ಕೆ ಕಾರಣವಾಯಿತು.

Trending News