ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯ ಸುಳಿವು ನೀಡಿದ ಕೇಂದ್ರ ಸರ್ಕಾರ

     

Last Updated : Mar 9, 2018, 02:36 PM IST
ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯ ಸುಳಿವು ನೀಡಿದ ಕೇಂದ್ರ ಸರ್ಕಾರ title=

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸುಪ್ರಿಂಕೋರ್ಟ್ ಆದೇಶ ನೀಡಿರುವ ಹಿನ್ನಲೆಯಲ್ಲಿ  ಇಂದು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಕರೆದಿದ್ದ ಕಾವೇರಿ ಕಣಿವೆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಸಭೆಯಲ್ಲಿ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವ ಸುಳಿವನ್ನು ನೀಡಿದೆ.

ಈ ಕುರಿತಾಗಿ ಮುಖ್ಯ ಕಾರ್ಯದರ್ಶಿಗಳ ಸಭೆಯ ನಂತರ ಮಾತನಾಡಿದ ಕೇಂದ್ರ ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಉಪೇಂದ್ರ ಸಿಂಗ್ "ಸ್ಕೀಂ ಮತ್ತು ಕಾವೇರಿ ನಿರ್ವಹಣಾ ಮಂಡಳಿ ನಡುವೆ ವ್ಯಾತ್ಯಾಸವಿಲ್ಲ ಆದ್ದರಿಂದ ನೀರಿನ ನಿರ್ವಹಣೆಗಾಗಿ ಸ್ಕೀಂ ರಚನೆ ಮಾಡಲೇಬೇಕಿದೆ,ಇದಕ್ಕೆ  ಸುಪ್ರೀಂ ಕೋರ್ಟ್ ಕೂಡ ಒಪ್ಪಿಗೆ ನೀಡಿದೆ ಆದ್ದರಿಂದ  ಅದರ ಸ್ವರೂಪದ ಕುರಿತು ಇಂದಿನ ಸಭೆಯಲ್ಲಿ ಎಲ್ಲಾ ರಾಜ್ಯಗಳ ಶಿಫ್ಹಾರಸು ಕೇಳಿದ್ದೇವೆ  ಎಂದು ತಿಳಿಸಿದರು. 

ಈ ಮೂಲಕ ಪರೋಕ್ಷವಾಗಿ ಮಂಡಳಿ ಸ್ವರೂಪದ ಸ್ಕೀಂ ರಚಿಸುವ ಸುಳಿವನ್ನು ಕೇಂದ್ರ ಸರ್ಕಾರ ನೀಡಿದೆ. 

Trending News