/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

ನವದೆಹಲಿ: ಜಾಗತಿಕ ಪಿಡುಗಾಗಿ ಪರಿಪರಿಯಾಗಿ ಕಾಡುತ್ತಿರುವ ಕೊರೊನಾವೈರಸ್ (Coronavirus)   ಅನ್ನು ಕೊನೆಗಾಣಿಸಲು ಭಾರತ ಹಲವಾರು ರೀತಿಯ ಕಸರತ್ತು ನಡೆಸುತ್ತಿದೆ. ಆದರೆ ದಿನದಿಂದ ದಿನಕ್ಕೆ ‌ಕಡಿಮೆ ಆಗಬೇಕಿದ್ದ ಕೊರೋನಾ ವೈರಸ್ ಪೀಡಿತರ ಸಂಖ್ಯೆ ದುಪ್ಪಟ್ಟಾಗುತ್ತಿದೆ‌. ಹೀಗೆ ಮುಂದುವರೆದು ಈಗ ದೇಶದ ಕೊರೊನಾ ವೈರಸ್ ಪೀಡಿತರ ಸಂಖ್ಯೆ ಲಕ್ಷವನ್ನೂ ದಾಟಿದೆ.

ಭಾರತ ದಿನೇ‌ದಿನೆ ಕೊರೋನಾ ವೈರಸ್   ಕೋವಿಡ್-19 (Covid-19)    ಹರಡುವಿಕೆ ವಿಷಯದಲ್ಲಿ ಇಂಥ ಕಹಿ ಸುದ್ದಿಗಳನ್ನೇ ಉಣಬಡಿಸುತ್ತಿದೆ. ಈಗಾಗಲೇ ಕೊರೋನಾ ಹರಡುವಿಕೆ ವಿಷಯದಲ್ಲಿ ಚೀನಾವನ್ನು ಮೀರಿಸಿದೆ. ಈಗ ದೇಶದ ಕೊರೊನಾ ವೈರಸ್ ಪೀಡಿತರ ಸಂಖ್ಯೆ ಲಕ್ಷವನ್ನೂ ದಾಟಿದೆ.

ಹಿಂದೆ ಮೇ 10ರಂದು 4,213  ಪ್ರಕರಣಗಳು ಕಂಡುಬಂದಿದ್ದವು‌. ದಿನವೊಂದರಲ್ಲಿ ಕಂಡುಬಂದ ಅತಿಹೆಚ್ಚು ಪ್ರಕರಣಗಳಾಗಿದ್ದವು. ಬಳಿಕ ಕಳೆದ ಭಾನುವಾರ ಒಂದೇ ದಿನ 5,242 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಸೋಮವಾರ ಒಂದೇ ದಿನ 4,159 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದ ಕೊರೊನಾ ಸೋಂಕು ಪೀಡಿತರ ಸಂಖ್ಯೆ 1,00,328ಕ್ಕೆ ಏರಿಕೆಯಾಗಿದೆ. ಅಲ್ಲದೆ ದೇಶದಲ್ಲಿ ಈವರೆಗೆ ಕೊರೊನಾದಿಂದ ಸತ್ತವರ ಸಂಖ್ಯೆ 3,156ಕ್ಕೆ ಏರಿಕೆಯಾಗಿದೆ.

ಇಂದಿನಿಂದ ರಾಜ್ಯದಲ್ಲಿ ಬಸ್ ಸಂಚಾರ ಆರಂಭ, ಅಂಗಡಿ ತೆರೆಯುವುದಕ್ಕೂ ಅವಕಾಶ

ಪ್ರತಿದಿನ ಭಾರತದ ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸುವ ಮಾಹಿತಿಗಳನ್ನು ನೋಡುತ್ತಿದ್ದರೆ ಭಾರತ ಸಾಗುತ್ತಿರುವ ಹಾದಿಯ ಸ್ಪಷ್ಟ ಚಿತ್ರಣ ಸಿಗಲಿದೆ. ಮೇ 6ರಿಂದ ದೇಶದಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ದಿನವೊಂದರಲ್ಲಿ ಮೂರು ಸಾವಿರ ಮೀರಲು ಆರಂಭಿಸಿತು. ಅಲ್ಲಿಂದ ಇಲ್ಲಿಯವರೆಗೆ ಕೆಳಮುಖವಾಗಿಲ್ಲ. ಬೇಕಿದ್ದರೆ ಈ ಅಂಕಿಅಂಶಗಳನ್ನು ನೋಡಿ...

ದಿನಾಂಕವಾರು ಪತ್ತೆಯಾದ ಕೊರೋನಾ ಪ್ರಕರಣಗಳ ಸಂಖ್ಯೆ
ಮೇ 6ರಂದು 3,561,
ಮೇ 7ರಂದು 3,390,
ಮೇ 8ರಂದು 3,320,
ಮೇ 9ರಂದು 3,277,
ಮೇ 10ರಂದು 4,213,
ಮೇ 11ರಂದು 3,064,
ಮೇ 12ರಂದು 3,525,
ಮೇ 13ರಂದು 3,722,
ಮೇ 14ರಂದು 3,967,
ಮೇ 15ರಂದು 3,970,
ಮೇ 16ರಂದು 4,987,
ಮೇ 17ರಂದು 5,242,
ಮೇ 18ರಂದು 4,159.

ಮೇಲಿನ ಅಂಕಿ ಅಂಶಗಳ ಪ್ರಕಾರ ನಿರಂತರವಾಗಿ ಕೊರೊನಾ ವೈರಸ್ ಹರಡುವಿಕೆ ಏರುಮುಖವಾಗಿ ಸಾಗುತ್ತಿರುವುದು ಸ್ಪಷ್ಟವಾಗಿ ಗೊತ್ತಾಗಲಿದೆ. ಮೇ 16ರಂದು 4,987 ಪ್ರಕರಣಗಳು, ಮೇ 17ರಂದು 5,242 ಪ್ರಕರಣಗಳು ಮತ್ತು ಮೇ 18ರಂದು 4,159 ಹೊಸ ಪ್ರಕರಣಗಳು ವರದಿಯಾಗಿದ್ದು ಭಾರತದಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ ಲಕ್ಷದ ಗಡಿ ದಾಟಿದೆ.

ಕೋವಿಡ್‌ ಅನುಭವ ಭಾರತವನ್ನು ಅಗ್ರಮಾನ್ಯ ರಾಷ್ಟ್ರವನ್ನಾಗಿಸಲಿದೆ: ಡಿಸಿಎಂ ಅಶ್ವತ್ಥನಾರಾಯಣ

ಜಾಗತಿಕ ಪಿಡುಗಾಗಿರುವ ಕೊರೋನಾವನ್ನು ನಿಯಂತ್ರಿಸಬೇಕು ಎಂದು ಲಾಕ್ಡೌನ್ ಜಾರಿಗೊಳಿಸಲಾಯಿತು. ಲಾಕ್ಡೌನ್ ನಡುವೆಯೇ ದೇಶದ ಕೊರೋನಾ ಪೀಡಿತರ ಸಂಖ್ಯೆ ಲಕ್ಷದ ಗಡಿ ದಾಟಿದೆ. ಈಗ ಲಾಕ್ಡೌನ್ ನಿಯಮಾವಳಿಗಳಲ್ಲಿ ಬಹಳಷ್ಟು ಸಡಿಲಿಕೆ ತರಲಾಗಿದೆ. ಹಾಗಾಗಿ ಕೊರೋನಾ ವೈರಸ್ ಹರಡುವಿಕೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳು ದಟ್ಟವಾಗಿವೆ.

Section: 
English Title: 
The number of coronavirus cases in the country crosses the lakh
News Source: 
Home Title: 

ಲಕ್ಷ ದಾಟಿದ ದೇಶದ ಕೊರೊನಾ ವೈರಸ್ ಪೀಡಿತರ ಸಂಖ್ಯೆ

ಲಕ್ಷ ದಾಟಿದ ದೇಶದ ಕೊರೊನಾ ವೈರಸ್ ಪೀಡಿತರ ಸಂಖ್ಯೆ
Author No use : 
Yashaswini V
Yes
Is Blog?: 
No
Tags: 
Facebook Instant Article: 
Yes
Mobile Title: 
ಲಕ್ಷ ದಾಟಿದ ದೇಶದ ಕೊರೊನಾ ವೈರಸ್ ಪೀಡಿತರ ಸಂಖ್ಯೆ
Yashaswini V
Publish Later: 
Yes
Publish At: 
Tuesday, May 19, 2020 - 07:55
Created By: 
Yashaswini V
Updated By: 
Yashaswini V