'ಬಿಲೆನಿಯರ್' ಇಶಾ ಅಂಬಾನಿ ಬಳಿ ಆಸ್ತಿ ಎಷ್ಟಿದೆ ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರ!

ಫೋರ್ಬ್ಸ್ನ ಅತಿದೊಡ್ಡ ಬಿಲಿಯನೇರ್ ವ್ಯವಹಾರ ಮಹಿಳಾ ಪಟ್ಟಿಯಲ್ಲಿ ಇಶಾ ಅಂಬಾನಿ ಹೆಸರನ್ನು ಸೇರಿಸಲಾಯಿತು. 2018 ರಲ್ಲಿ, ಫೋರ್ಬ್ಸ್ ಉತ್ತರಾಧಿಕಾರಿಗಳ ಪಟ್ಟಿಯಲ್ಲಿ ಅವರು ಎರಡನೆಯ ಸ್ಥಾನದಲ್ಲಿದ್ದಾರೆ.  

Last Updated : Sep 25, 2018, 11:36 AM IST
'ಬಿಲೆನಿಯರ್' ಇಶಾ ಅಂಬಾನಿ ಬಳಿ ಆಸ್ತಿ ಎಷ್ಟಿದೆ ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರ! title=

ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಏಕೈಕ ಪುತ್ರಿ ಇಶಾ ಅಂಬಾನಿ ಅವರ ನಿಶ್ಚಿತಾರ್ಥವು ಆನಂದ್ ಪಿರಮಲ್ ಅವರ ಜೊತೆ ನೆರವೇರಿದೆ. ಇಶಾ-ಆನಂದ್, ಇಟಲಿಯಲ್ಲಿ ಉಂಗುರ ಬದಲಿಸಿಕೊಂಡಿದ್ದಾರೆ. ವರ್ಷದ ಅಂತ್ಯದ ವೇಳೆಗೆ ಇಶಾ ಅಂಬಾನಿ ಮದುವೆಯಾಗಲಿದ್ದಾರೆ. ಕುಟುಂಬದ ನಿಕಟ ಸಂಬಂಧಿಗಳೊಂದಿಗೆ ಇಶಾ ಸ್ವತಃ ತನ್ನ ಮದುವೆಯನ್ನು ವಿಶೇಷ ಮಾಡಲು ಸ್ಥಳವನ್ನು ಅನ್ವೇಷಿಸುತ್ತಿದ್ದಾರೆ. ಇಶಾಳ ಮದುವೆ ಮೊದಲಿನ ಆಚರಣೆಗಳು ಉದಯಪುರದಲ್ಲಿ ನಡೆಯಲಿದೆ. ಇದಕ್ಕಾಗಿ ಸ್ಥಳವನ್ನು ನಿಗದಿಪಡಿಸಲಾಗಿದೆ. ಡಿಸೆಂಬರ್ನಲ್ಲಿ, ಅಂಬಾನಿ ಕುಟುಂಬದ ಮಗಳು ಮುಂಬೈನಲ್ಲಿ ನಡೆಯಲಿದೆ.

ಅತಿ ಚಿಕ್ಕ ಬಿಲಿಯನೇರ್ ಮಹಿಳೆ:
ಏಷ್ಯಾದ 12 ಅತ್ಯಂತ ಶಕ್ತಿಯುತ ಉದ್ಯಮ ಮಹಿಳೆಯರ ಪಟ್ಟಿಯಲ್ಲಿ, ಇಶಾ ಅಂಬಾನಿ ನಿಜ ಜೀವನದಲ್ಲಿ ರಾಜಕುಮಾರಿಯರಿಗಿಂತ ಕಡಿಮೆಯೇನಿಲ್ಲ. ವಿಶೇಷವಾದ ವಿಷಯವೆಂದರೆ ಇಶಾ ಸ್ವತಃ ಒಂದು ವಿಭಿನ್ನ ಸ್ಥಾನವನ್ನು ಹೊಂದಿದ್ದು, ವಯಸ್ಸಿನಲ್ಲೇ ಚಿಕ್ಕವಳಾಗಿದ್ದರೂ ಇಶಾ, ಮುಕೇಶ್ ಮತ್ತು ನಿತಾ ಅಂಬಾನಿ ಅವರ ಪುತ್ರಿಯಾಗಿ ಅಲ್ಲ, ಆದರೆ ಅವಳ ಸ್ವಂತ  ಕಠಿಣ ಪರಿಶ್ರಮದಿಂದ 2015 ರಲ್ಲಿ, ಫೋರ್ಬ್ಸ್ನ ಅತಿದೊಡ್ಡ ಬಿಲಿಯನೇರ್ ಉದ್ಯಮಿ ಮಹಿಳಾ ಪಟ್ಟಿಯಲ್ಲಿ ಇಶಾ ಅಂಬಾನಿ ಎರಡನೇ ಸ್ಥಾನ ಪಡೆದಿದ್ದಾರೆ. ಅದೇ ಸಮಯದಲ್ಲಿ, 2018 ರಲ್ಲಿ, ಫೋರ್ಬ್ಸ್ ಉತ್ತರಾಧಿಕಾರಿಗಳ ಪಟ್ಟಿಯಲ್ಲಿ ಎರಡನೆಯ ಸ್ಥಾನದಲ್ಲಿದ್ದಾರೆ.

4710 ಕೋಟಿಗಳ ಒಡತಿ:
ಇಶಾ ಅಂಬಾನಿ ಶೀಘ್ರದಲ್ಲೇ ಪಿರಮಾಲ್ ವಂಶದ ಉತ್ತರಾಧಿಕಾರಿ ಆನಂದ್ ಪಿರಮಾಲ್ ಅವರ ಕೈಹಿಡಿಯಲಿದ್ದಾರೆ.  ಪ್ರಸ್ತುತ ಇಶಾ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ನ ಹಲವಾರು ಕಂಪನಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಶಾ ಅಂಬಾನಿ ಪ್ರತಿ ವರ್ಷ ಸುಮಾರು 4710 ಕೋಟಿ ರೂ. ಸಂಪಾದನೆ ಹೊಂದಿದ್ದಾರೆ. 16 ವರ್ಷ ವಯಸ್ಸಿನಲ್ಲೇ ಇಶ್ರಾ ರಿಲಯನ್ಸ್ ಇಂಡಸ್ಟ್ರೀಸ್ನಲ್ಲಿ $ 80 ಮಿಲಿಯನ್ ಷೇರುಗಳ ಮಾಲೀಕರಾದರು.

ಎರಡು ಕಂಪನಿಗಳ ನಿರ್ದೇಶಕರು:
ಇಶಾ ಅಂಬಾನಿ ಯಶಸ್ವಿ ಮಹಿಳಾ ಉದ್ಯಮಿಯಾಗಿದ್ದಾರೆ. 1991 ರಲ್ಲಿ ಜನಿಸಿದ ಇಶಾ ಮತ್ತು ಅವಳ ಸಹೋದರ ಆಕಾಶ್ ಟ್ವಿನ್ಸ್. ಇಶಾ ರಿಲಯನ್ಸ್ ಟೆಲಿಕಾಂ ಮತ್ತು ರಿಲಯನ್ಸ್ ರೀಟೇಲ್ ಕಂಪನಿಗಳ ನಿರ್ದೇಶಕರಾಗಿದ್ದಾರೆ. ಇಶಾರವರು ಧೀರುಭಾಯಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಅಧ್ಯಯನ ಮಾಡಿದರು. ಇದರ ನಂತರ, 2013 ರಲ್ಲಿ, ಯೇಲ್ ಯೂನಿವರ್ಸಿಟಿಯಿಂದ ಸೈಕಾಲಜಿ ಮತ್ತು ಏಶಿಯನ್ ಸ್ಟಡೀಸ್ನಲ್ಲಿ ಪದವಿ ಪಡೆದರು.

16 ನೇ ವಯಸ್ಸಿನಲ್ಲಿ ಉತ್ತರಾಧಿಕಾರಿ:
ಪದವಿ ಪಡೆದ ನಂತರ, ಇಶಾ ಅಮೆರಿಕದ ಗ್ಲೋಬಲ್ ಕನ್ಸಲ್ಟೆನ್ಸಿ ಸಂಸ್ಥೆಯ ಮ್ಯಾಕಿನ್ಸೆ ಯಲ್ಲಿ ಕೆಲಸ ಮಾಡಿದರು. ಇಲ್ಲಿ ಅವರು ವ್ಯವಹಾರ ವಿಶ್ಲೇಷಕರಾಗಿದ್ದರು. ಅದರ ನಂತರ ಅವರು ರಿಲಯನ್ಸ್ ಜಿಯೋ ಮತ್ತು ರಿಲಯನ್ಸ್ ರೀಟೇಲ್ ನ ನಿರ್ದೇಶಕರಾದರು. 2008 ರಲ್ಲಿ ಫೋರ್ಬ್ಸ್ ಪಟ್ಟಿಯಲ್ಲಿ ಅತ್ಯಂತ ಶ್ರೀಮಂತ ಉತ್ತರಾಧಿಕಾರಿಗಳ ಪಟ್ಟಿಯಲ್ಲಿ, 16 ನೇ ವಯಸ್ಸಿನಲ್ಲಿ ಇಶಾ ಹೆಸರಿಸಲಾಯಿತು. ಇದಲ್ಲದೆ, 2015 ರಲ್ಲಿ, ಏಷಿಯಾದ 12 ಅತ್ಯಂತ ಶಕ್ತಿಯುತ ಮಹಿಳಾ ಉದ್ಯಮಿಯರ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಲಾಯಿತು. ಇಶಾ ಅವರ ವೈಯಕ್ತಿಕ ಜೀವನ ಬಹಳ ಮರೆಯಾಗಿದೆ. ಇಶಾ ಮೇಲ್ವಿಚಾರಣೆಯಡಿಯಲ್ಲಿ, ಜಿಯೋ ಪ್ರಾರಂಭವಾದ ಎರಡು ವರ್ಷಗಳಲ್ಲಿ ಭಾರತದಲ್ಲಿ ಚಮತ್ಕಾರವನ್ನೇ ಮಾಡಿದೆ.

ಆನಂದ್ ಪಿರಾಮಾಲ್ ಸಹ ಕೋಟಿಗಳ ಒಡೆಯ:
ಆನಂದ್ ಪಿರಾಮಾಲ್ 10 ಬಿಲಿಯನ್ ಡಾಲರ್ ಪಿರಾಮಾಲ್ ಗ್ರೂಪ್ ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಈ ಗ್ರೂಪ್ ಫಾರ್ಮಾ, ಫೈನಾನ್ಶಿಯಲ್ ಸರ್ವಿಸಸ್, ರಿಯಲ್ ಎಸ್ಟೇಟ್ ಗ್ಲಾಸ್ ಪ್ಯಾಕೇಜಿಂಗ್ ಮತ್ತು ಇನ್ಫರ್ಮೇಷನ್ ಸರ್ವೀಸಸ್ ವ್ಯವಹಾರದಲ್ಲಿದೆ. ಆನಂದ್ ತಂದೆ ಪಿರಾಮಾಲ್ ಗ್ರೂಪ್ ಮತ್ತು ಶ್ರೀರಾಮ್ ಗ್ರೂಪ್ನ ಅಧ್ಯಕ್ಷರಾಗಿದ್ದಾರೆ. ಫೋರ್ಬ್ಸ್ನ 2018 ರ ವರದಿಯ ಪ್ರಕಾರ, ಅಜಯ್ ಪಿರಾಮಾಲ್ ಅವರ ಒಟ್ಟು ಮೌಲ್ಯವು 480 ದಶಲಕ್ಷ ಡಾಲರ್ ಅಥವಾ 350 ಲಕ್ಷ ಕೋಟಿ ರೂ. ಅಜಯ್ ಪಿರಮಲ್ ದೇಶದಲ್ಲಿ 22 ನೇ ಶ್ರೀಮಂತ ವ್ಯಕ್ತಿ.

Trending News