ಎನ್ಡಿಎ ಮೈತ್ರಿಕೂಟ ತ್ಯಜಿಸಿದ ಟಿಡಿಪಿ ನಿರ್ಧಾರ ದುರದೃಷ್ಟಕರ ಮತ್ತು ಏಕಪಕ್ಷೀಯ- ಅಮಿತ್ ಶಾ

ಎನ್ಡಿಎ ಮೈತ್ರಿಕೂಟ ತ್ಯಜಿಸಿದ ಟಿಡಿಪಿ ನಿರ್ಧಾರ ದುರದೃಷ್ಟಕರ ಮತ್ತು ಏಕಪಕ್ಷೀಯ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.

Last Updated : Mar 24, 2018, 03:30 PM IST
ಎನ್ಡಿಎ ಮೈತ್ರಿಕೂಟ ತ್ಯಜಿಸಿದ ಟಿಡಿಪಿ ನಿರ್ಧಾರ ದುರದೃಷ್ಟಕರ ಮತ್ತು ಏಕಪಕ್ಷೀಯ- ಅಮಿತ್ ಶಾ title=

ನವದೆಹಲಿ: ಎನ್ಡಿಎ ಮೈತ್ರಿಕೂಟ ತ್ಯಜಿಸಿದ ಟಿಡಿಪಿ ನಿರ್ಧಾರ ದುರದೃಷ್ಟಕರ ಮತ್ತು ಏಕಪಕ್ಷೀಯ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಈ ಸಂಬಂಧ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಕ್ಷದ(ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರಿಗೆ ಬಹಿರಂಗ ಪತ್ರ ಬರೆದಿರುವ ಅಮಿತ್ ಶಾ ಎನ್ದಿಎ ತ್ಯಜಿಸುವ ಟಿಡಿಪಿ ನಿರ್ಧಾರ ರಾಜಕೀಯ ಉದ್ದೇಶದಿಂದಲೇ ಹೊರತು ಅಭಿವೃದ್ಧಿಯ ಕಳಕಳಿಯಿಂದಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಶಾ, ಪ್ರಧಾನಿ ಮೋದಿ ಆಂಧ್ರಪ್ರದೇಶದ ಅಭಿವೃದ್ಧಿಗೆ ಸಾಧ್ಯವಿರುವ ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಟಿಡಿಪಿ ಆಂಧ್ರ ಪ್ರದೇಶದ ಆಡಳಿತ ಪಕ್ಷ. ಕೇಂದ್ರ ಸರ್ಕಾರವು ಆಂಧ್ರಪ್ರದೇಶಕ್ಕೆ ವಿಶೇಷ ರಾಜ್ಯ ಸ್ಥಾನಮಾನವನ್ನು ನೀಡಬೇಕೆಂದು ದೀರ್ಘಕಾಲದವರೆಗೂ ಟಿಡಿಪಿ ಒತ್ತಾಯಿಸಿದೆ. ಆದರೆ ಕೇಂದ್ರ ಸರ್ಕಾರವು ಈ ಬಾರಿಯ ಬಜೆಟ್ ನಲ್ಲೂ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡದ ಕಾರಣ ಟಿಡಿಪಿ ಎನ್ದಿಎ ಮೈತ್ರಿ ತೊರೆದು ಹೊರಬಂದಿದೆ.

Trending News