ದೆಹಲಿ ವಾಯುಮಾಲಿನ್ಯದ ಭೀತಿಯಿಂದಾಗಿ ಶಾಲಾ-ಕಾಲೇಜುಗಳು ಅನಿರ್ಧಿಷ್ಟ ಅವಧಿವರೆಗೆ ಬಂದ್

ವಾಯುಮಾಲಿನ್ಯವನ್ನು ನಿಭಾಯಿಸುವ ಪ್ರಯತ್ನಗಳ ಮಧ್ಯೆ,ಮುಂದಿನ ಆದೇಶದವರೆಗೆ ದೆಹಲಿಯ ಎಲ್ಲಾ ಶಾಲೆಗಳನ್ನು ಮುಚ್ಚಲಾಗುವುದು ದೆಹಲಿ ಸರ್ಕಾರ ತಿಳಿಸಿದೆ.

Written by - Zee Kannada News Desk | Last Updated : Nov 21, 2021, 04:54 PM IST
  • ವಾಯು ಮಾಲಿನ್ಯವನ್ನು ನಿಭಾಯಿಸುವ ಪ್ರಯತ್ನಗಳ ಮಧ್ಯೆ, ಮುಂದಿನ ಆದೇಶದವರೆಗೆ ದೆಹಲಿಯ ಎಲ್ಲಾ ಶಾಲೆಗಳನ್ನು ಮುಚ್ಚಲಾಗುವುದು ದೆಹಲಿ ಸರ್ಕಾರ ತಿಳಿಸಿದೆ.
  • 'ಮುಂದಿನ ಆದೇಶದವರೆಗೆ ದೈಹಿಕ ತರಗತಿಗಳಿಗೆ ದೆಹಲಿಯ ಎಲ್ಲಾ ಶಾಲೆಗಳನ್ನು ಮುಚ್ಚಲಾಗುವುದು, ಆನ್‌ಲೈನ್ ಶಿಕ್ಷಣ ಮುಂದುವರಿಯುತ್ತದೆ."ಎಂದು ಶಿಕ್ಷಣ ನಿರ್ದೇಶನಾಲಯವು ತಿಳಿಸಿದೆ.
ದೆಹಲಿ ವಾಯುಮಾಲಿನ್ಯದ ಭೀತಿಯಿಂದಾಗಿ ಶಾಲಾ-ಕಾಲೇಜುಗಳು ಅನಿರ್ಧಿಷ್ಟ ಅವಧಿವರೆಗೆ ಬಂದ್  title=
file photo

ನವದೆಹಲಿ: ವಾಯುಮಾಲಿನ್ಯವನ್ನು ನಿಭಾಯಿಸುವ ಪ್ರಯತ್ನಗಳ ಮಧ್ಯೆ,ಮುಂದಿನ ಆದೇಶದವರೆಗೆ ದೆಹಲಿಯ ಎಲ್ಲಾ ಶಾಲೆಗಳನ್ನು ಮುಚ್ಚಲಾಗುವುದು ದೆಹಲಿ ಸರ್ಕಾರ ತಿಳಿಸಿದೆ.

'ಮುಂದಿನ ಆದೇಶದವರೆಗೆ ದೈಹಿಕ ತರಗತಿಗಳಿಗೆ ದೆಹಲಿಯ ಎಲ್ಲಾ ಶಾಲೆಗಳನ್ನು ಮುಚ್ಚಲಾಗುವುದು, ಆನ್‌ಲೈನ್ ಶಿಕ್ಷಣ ಮುಂದುವರಿಯುತ್ತದೆ."ಎಂದು ಶಿಕ್ಷಣ ನಿರ್ದೇಶನಾಲಯವು ತಿಳಿಸಿದೆ.

ಇದನ್ನೂ ಓದಿ: "ಬಿಜೆಪಿ ನಾಯಕರು ಯಾಕೆ ಹಾವು ಕಂಡ ಹಾಗೆ ಬೆಚ್ಚಿ ಬೀಳುತ್ತಿದ್ದಾರೆ?"

ಇದಕ್ಕೂ ಮುನ್ನ ನವೆಂಬರ್ 13 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರದಿಂದ ಒಂದು ವಾರದವರೆಗೆ ಶಾಲೆಗಳನ್ನು ಮುಚ್ಚುವುದಾಗಿ ಘೋಷಿಸಿದ್ದರು ಮತ್ತು ನಾಲ್ಕು ದಿನಗಳ ಕಾಲ ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸಿದ್ದರು. ಇದಲ್ಲದೆ, ಅವರು ಸರ್ಕಾರಿ ಕಚೇರಿಗಳಿಗೆ ಮನೆಯಿಂದ ಕೆಲಸ (WFH) ಘೋಷಿಸಿದರು ಮತ್ತು ಖಾಸಗಿಯವರು ಇದೆ ಮಾದರಿಯನ್ನು ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ದೆಹಲಿ-ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯವನ್ನು "ತುರ್ತು" ಪರಿಸ್ಥಿತಿ ಎಂದು ಕರೆದ ಸುಪ್ರೀಂ ಕೋರ್ಟ್ ಶನಿವಾರ ರಾಷ್ಟ್ರ ರಾಜಧಾನಿಯಲ್ಲಿ ಲಾಕ್‌ಡೌನ್ ಅನ್ನು ಸೂಚಿಸಿದ ನಂತರ ದೆಹಲಿ ಸರ್ಕಾರದ ನಿರ್ಧಾರವು ಬಂದಿದೆ.

ಇದನ್ನೂ ಓದಿ: ರಾಜ್ಯ ಸರ್ಕಾರ ಟೂರಿಂಗ್ ಟಾಕೀಸ್ ರೀತಿ ಜನಸ್ವರಾಜ್ ಎಂಬ ನಾಟಕ ಪ್ರದರ್ಶನ ಮಾಡುತ್ತಿದೆ-ಸಿದ್ಧರಾಮಯ್ಯ

ಮಂಗಳವಾರ (ನವೆಂಬರ್ 16) ದಂದು ಎನ್‌ಸಿಆರ್ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ವಾಯು ಗುಣಮಟ್ಟ ನಿರ್ವಹಣಾ ಆಯೋಗವು ಕೇಂದ್ರ, ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಪಂಜಾಬ್ ಮತ್ತು ರಾಜಸ್ಥಾನದೊಂದಿಗೆ ಸಭೆಯನ್ನು ಕರೆದಿದೆ ಮತ್ತು ವಾಯು ಮಾಲಿನ್ಯವನ್ನು ನಿಭಾಯಿಸಲು ಶಾಲೆಗಳನ್ನು ಮುಚ್ಚುವುದು ಸೇರಿದಂತೆ ಹಲವಾರು ತುರ್ತು ಕ್ರಮಗಳನ್ನು ಕೈಗೊಂಡಿದೆ.

ಏತನ್ಮಧ್ಯೆ, ಭಾನುವಾರ ಬೆಳಿಗ್ಗೆ ದೆಹಲಿಯ ಗಾಳಿಯ ಗುಣಮಟ್ಟವು 'ಅತ್ಯಂತ ಕಳಪೆಯಾಗಿದೆ', ಆದರೆ ಬಲವಾದ ಮೇಲ್ಮೈ ಗಾಳಿಯಿಂದಾಗಿ ಹೆಚ್ಚಿನ ಮಾಲಿನ್ಯ ಮಟ್ಟದಿಂದ ವಿರಾಮವನ್ನು ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ಬೆಳಗ್ಗೆ 9 ಗಂಟೆಗೆ ರಾಷ್ಟ್ರ ರಾಜಧಾನಿ 382 ರಲ್ಲಿ ವಾಯು ಗುಣಮಟ್ಟ ಸೂಚ್ಯಂಕವನ್ನು (ಎಕ್ಯೂಐ) ದಾಖಲಿಸಿದೆ.ಶನಿವಾರದಂದು 24-ಗಂಟೆಗಳ ಸರಾಸರಿ ವಾಯುಗುಣಮಟ್ಟ 374 ಆಗಿತ್ತು.

ಇದನ್ನೂ ಓದಿ: ಸರ್ವಾಧಿಕಾರಿ ಎಷ್ಟೇ ಶಕ್ತಿಶಾಲಿಯಾಗಿರಲಿ, ಜನಶಕ್ತಿಯ ಎದುರು ಆತ ಮಣಿಯಲೇಬೇಕು- ಸಿದ್ಧರಾಮಯ್ಯ

ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಅವರು ಸೋಮವಾರ (ನವೆಂಬರ್ 22) ಉನ್ನತ ಮಟ್ಟದ ಮಾಲಿನ್ಯವನ್ನು ತಡೆಗಟ್ಟಲು ವಿಧಿಸಲಾದ ನಿರ್ಬಂಧಗಳನ್ನು ಪರಿಶೀಲಿಸಲು ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಭಾನುವಾರದಂದು ಮುಕ್ತಾಯಗೊಳ್ಳಲಿರುವ ನಿರ್ಬಂಧಗಳನ್ನು ಪರಿಶೀಲಿಸಲು ಸಭೆ ಕರೆಯಲಾಗಿದೆ, ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಜರಾಗಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News