/kannada/photo-gallery/shikanji-buttermilk-is-helpful-in-dissolving-stubborn-obesity-around-the-waist-249358 ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! 249358

Tulsi Vivah 2020:ತುಳಸಿ ವಿವಾಹದ ಸಂದರ್ಭದಲ್ಲಿ ಈ 4 ಉಪಾಯಗಳನ್ನು ತಪ್ಪದೆ ಅನುಸರಿಸಿ

ಹಿಂದೂ ಧರ್ಮ ಶಾಸ್ತ್ರದಲ್ಲಿ ತುಳಸಿ ವಿವಾಹದ ಪಾವನ ಪರ್ವಕ್ಕಾಗಿ ಕೆಲ ಉಪಾಯಗಳನ್ನು ಸೂಚಿಸಲಾಗಿದೆ. ಈ ಉಪಾಯಗಳನ್ನು ಅನುಸರಿಸಿದರೆ ವಿವಾಹಕ್ಕೆ ಯೋಗ್ಯ ಕನ್ಯೆಗೆ ಉತ್ತಮ ವರ ಸಿಗುತ್ತಾನೆ. ಒಂದು ವೇಳೆ ಯಾರೊಬ್ಬರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದರೆ, ಅವುಗಳಿಂದ ಮುಕ್ತಿ ಸಿಗಲಿದೆ.

Last Updated : Nov 24, 2020, 04:44 PM IST
  • ಈ ಬಾರಿ ನವೆಂಬರ್ 26ರಂದು ತುಳಸಿ ವಿವಾಹ ನೆರವೇರಲಿದೆ.
  • ಈ ಶುಭ ದಿನದಂದು ಈ ಉಪಾಯಗಳನ್ನು ಮಾಡಲು ಮರೆಯಬೇಡಿ.
  • ಶ್ರೀ ವಿಷ್ಣು ಹಾಗೂ ದೇವಿ ತುಳಸಿ ಆಶೀರ್ವಾದದಿಂದ ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗಲಿವೆ.
Tulsi Vivah 2020:ತುಳಸಿ ವಿವಾಹದ ಸಂದರ್ಭದಲ್ಲಿ ಈ 4 ಉಪಾಯಗಳನ್ನು ತಪ್ಪದೆ ಅನುಸರಿಸಿ title=

ನವದೆಹಲಿ: ಪ್ರತಿವರ್ಷ ಕಾರ್ತಿಕ ಮಾಸದ ಶುಕ್ಲಪಕ್ಷದ ಏಕಾದಶಿಯನ್ನು ತುಳಸಿ ವಿವಾಹ (Tulsi Vivah 2020) ನೆರವೇರಿಸಲಾಗುತ್ತದೆ. ಹಿಂದೂ ಧರ್ಮ ಶಾಸ್ತ್ರದಲ್ಲಿ ತುಳಸಿ ವಿವಾಹಕ್ಕೆ ತುಂಬಾ ಮಹತ್ವ ನೀಡಲಾಗಿದೆ. ಈ ವರ್ಷ ನವೆಂಬರ್ 26ರಂದು ಅಂದರೆ ಗುರುವಾರ ಈ ಪರ್ವವನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ. ಈ ದಿನ ಶಾಲಿಗ್ರಾಮ್ ವಿವಾಹವನ್ನು ದೇವಿ ತುಳಸಿಯ ಜೊತೆಗೆ ನೆರವೇರಿಸಲಾಗುತ್ತದೆ.

ಯಾವ ವ್ಯಕ್ತಿ ಸಂಪೂರ್ಣ ವಿಧಿ-ವಿಧಾನಗಳಿಂದ ತುಳಸಿ ಪೂಜೆ ನೆರವೆರಿಸುತ್ತಾರೆಯೋ ಅವರ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ.

ಇದನ್ನು ಓದಿ- ಶಿರಡಿ ಸಾಯಿಬಾಬಾ ಭಕ್ತರಿಗೆ ಗುಡ್ ನ್ಯೂಸ್

ಹಿಂದೂ ಧರ್ಮ ಶಾಸ್ತ್ರದಲ್ಲಿ ತುಳಸಿ ವಿವಾಹದ ಪಾವನ ಪರ್ವಕ್ಕಾಗಿ ಕೆಲ ಉಪಾಯಗಳನ್ನು ಸೂಚಿಸಲಾಗಿದೆ. ಈ ಉಪಾಯಗಳನ್ನು ಅನುಸರಿಸಿದರೆ ವಿವಾಹಕ್ಕೆ ಯೋಗ್ಯ ಕನ್ಯೆಗೆ ಉತ್ತಮ ವರ ಸಿಗುತ್ತಾನೆ. ಒಂದು ವೇಳೆ ಯಾರೊಬ್ಬರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದರೆ, ಅವುಗಳಿಂದ ಮುಕ್ತಿ ಸಿಗಲಿದೆ. ಇದಲ್ಲದೆ, ಜೀವನದಲ್ಲಿ ಬರುವ ತೊಂದರೆಗಳನ್ನು ಸಹ ನಾವು ತೊಡೆದುಹಾಕುತ್ತೇವೆ. ತುಳಸಿ ವಿವಾಹದ ಪವಿತ್ರ ಹಬ್ಬದಂದು ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸಲು ನೀವು ಬಯಸಿದರೆ, ಖಂಡಿತವಾಗಿಯೂ ಈ ಪರಿಹಾರಗಳನ್ನು ಪ್ರಯತ್ನಿಸಿ.

ವೈವಾಹಿಕ ಜೀವನದಲ್ಲಿ ಕಲಹ ದೂರವಾಗುತ್ತವೆ
ಯಾರೊಬ್ಬರ ವೈವಾಹಿಕ ಜೀವನದಲ್ಲಿ ನಿರಂತರ ಹೋರಾಟ ನಡೆಯುತ್ತಿದ್ದರೆ, ತುಳಸಿ ಮದುವೆಗೆ ಒಂದು ದಿನ ಮೊದಲು, ಕೆಲವು ತುಳಸಿ ಎಲೆಗಳನ್ನು ತೆಗೆದು ನೀರಿನಲ್ಲಿ ಹಾಕಿ. ನಂತರ ತುಳಸಿ ಮದುವೆಯ ದಿನದಂದು ಆ ನೀರನ್ನು ಮನೆಯ ಮುಖ್ಯ ಬಾಗಿಲಿಗೆ ಸುರಿಯಿರಿ. ಈ ಪರಿಹಾರವನ್ನು ಮಾಡುವುದರಿಂದ, ಗಂಡ ಮತ್ತು ಹೆಂಡತಿಯ ನಡುವೆ ಪ್ರೀತಿ ಹೆಚ್ಚಾಗುತ್ತದೆ ಮತ್ತು ಸಂತೋಷ ಮತ್ತು ಶಾಂತಿ ಮನೆಯಲ್ಲಿ ನೆಲೆಸುತ್ತದೆ.

ಇದನ್ನು ಓದಿ- Tulsi Vivah 2020: ಈ ದಿನ ತುಳಸಿ ವಿವಾಹ, ಇಲ್ಲಿದೆ ಶುಭ ಮುಹೂರ್ತ ಮತ್ತು ವಿವಾಹ ವಿಧಿ

ದಾಂಪತ್ಯ ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ
ಯಾರೊಬ್ಬರ ವೈವಾಹಿಕ ಜೀವನದಲ್ಲಿ ಒಂದು ವೇಳೆ ವ್ಯಾಜ್ಯಗಳಿದ್ದರೆ, ಅಂತವರು ತುಳಸಿ ವಿವಾಹದ ದಿನ ದೇವಿ ತುಳಸಿಗೆ ಅರ್ಪಿಸಿದ ಶೃಂಗಾರದ ವಸ್ತುಗಳನ್ನು ಸುಮಂಗಲಿಯರಿಗೆ ದಾನ ಮಾಡಬೇಕು. ಇದು ಸಾಧ್ಯವಾಗದೆ ಹೋದಲ್ಲಿ ದೇವಿ ಲಕ್ಷ್ಮಿಯ ದೇವಸ್ಥಾನದಲ್ಲಿ ಅರ್ಪಿಸಿ. ಈ ರೀತಿ ಮಾಡುವುದರಿಂದ ದಾಂಪತ್ಯ ಜೀವನದಲ್ಲಿ ವಿರಸ ಕಡಿಮೆಯಾಗಿ ಪತಿ-ಪತ್ನಿಯರಲ್ಲಿ ಪ್ರೀತಿ ಹೆಚ್ಚಾಗುತ್ತದೆ ಮತ್ತು ಮನೆಯಲ್ಲಿ ಸುಖ-ಸಮೃದ್ಧಿ ಹೆಚ್ಚಾಗುತ್ತದೆ.

ಇಷ್ಟದ ವರ ಮನೋಕಾಮನೆ ಪೂರ್ತಿಯಾಗುತ್ತದೆ
ಒಂದು ವೇಳೆ ಮಗಳ ಮದುವೆಯಲ್ಲಿ ಅಡಚಣೆಗಳು ಎದುರಾಗುತ್ತಿದ್ದರೆ. ತುಳಸಿ ಪೂಜೆಯ ವೇಳೆ ಈ ಉಪಾಯ ಮಾಡುವುದು ಆವಶ್ಯಕವಾಗಿದೆ. ತುಳಸಿ ವಿವಾಹದ ವೇಳೆ ದೇವಿ ತುಳಸಿಗೆ ಕೆಂಪು ಬಣ್ಣದ ಚುನರಿ ಅರ್ಪಿಸಿ. ಮಾರನೆಯ ದಿನ ಆ ಚುನ್ನಿಯನ್ನು ನಿಮ್ಮ ಬಳಿ ಜೋಪಾನವಾಗಿ ಇಟ್ಟುಕೊಳ್ಳಿ. ಈ ರೀತಿಯ ಮಾಡುವುದರಿಂದ ದೇವಿ ತುಳಸಿ ಪ್ರಸನ್ನವಾಗುತ್ತಾಳೆ. ಇದರಿಂದ ನಿಮಗೆ ನಿಮ್ಮ ಇಷ್ಟದ ವರ ಸಿಗುತ್ತಾನೆ.

ಇದನ್ನು ಓದಿ- Vastu Tips: ಮನೆಯ ಮುಖ್ಯದ್ವಾರದ ಮೇಲಿರಲಿ ಈ 5 ಸಂಗತಿಗಳು, ಭಾಗ್ಯ ಹೊಳೆಯಲಿದೆ

ಇದಲ್ಲದೆ ವಿವಾಹದಲ್ಲಿ ವಿಳಂಬವಾಗುತ್ತಿದ್ದರೆ, ಏಳು ಗಟ್ಟಿ ಅರಶಿಣ ಬೇರು, ಕೇಸರಿ, ಬೆಲ್ಲ ಹಾಗೂ ಸ್ವಲ್ಪ ಕಡಲೆ ಬೇಳೆಯನ್ನು ಹಳದಿ ವಸ್ತ್ರದಲ್ಲಿ ಕಟ್ಟಿಕೊಳ್ಳಿ. ಬಳಿಕ ಈ ವಸ್ತುಗಳನ್ನು ವಿಷ್ಣು ದೇವಸ್ಥಾನದಲ್ಲಿ ಅರ್ಪಿಸಿ. ವಿಷ್ಣುವಿನ ಆಶಿರ್ವಾದದಿಂದ ಶೀಘ್ರವೇ ವಿವಾಹ ನೆರವೇರಲಿದೆ.