ಶಾಲಾ ಶೌಚಾಲಯದಲ್ಲಿ ಸ್ಫೋಟ: ಇಬ್ಬರು ಮಕ್ಕಳು ಸಾವು

ಮೃತರನ್ನು ಶಿವ ಪೂಜನ್ ಬಿಂದ್ ಅವರ ನಾಲ್ಕು ವರ್ಷದ ಮಗ ವಿಜಯ್ ಶಂಕರ್ ಮತ್ತು ಆರು ವರ್ಷದ ಮಗಳು ಸೋನಮ್ ಎಂದು ಗುರುತಿಸಲಾಗಿದೆ. 

Updated: Jun 19, 2019 , 11:28 AM IST
ಶಾಲಾ ಶೌಚಾಲಯದಲ್ಲಿ ಸ್ಫೋಟ: ಇಬ್ಬರು ಮಕ್ಕಳು ಸಾವು
Pic Courtesy: ANI

ಪ್ರಯಾಗರಾಜ್: ಶಾಲೆಯ ಶೌಚಾಲಯದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಓರ್ವನಿಗೆ ಗಂಭೀರ ಗಾಯಗಳಾಗಿರುವ ಘಟನೆ ಉತ್ತರಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆದಿದೆ. 

ಪ್ರಯಾಗರಾಜ್ ಜಿಲ್ಲೆಯ ದುಬಾವಲ್ ಗ್ರಾಮದಲ್ಲಿರುವ ಶಾಲೆಯ ಶೌಚಾಲಯದಲ್ಲಿ ಸಾಸಿವೆ ಎಣ್ಣೆ ಬಾಟಲಿಯಲ್ಲಿ ಸ್ಫೋಟಕ ಇರಿಸಿ ಸಿಡಿಸಲಾಗಿದೆ. ಈ ಸಂದರ್ಭದಲ್ಲಿ ಶಾಲೆಯ ಶೌಚಾಲಯದ ಬಳಿ ಆಡುತ್ತಿದ್ದ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಒಂದು ಮಗುವಿಗೆ ಗಂಭೀರ ಗಾಯಗಳಾಗಿವೆ ಎಂದು ಎಸ್ಪಿ ನರೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಮೃತರನ್ನು ಶಿವ ಪೂಜನ್ ಬಿಂದ್ ಅವರ ನಾಲ್ಕು ವರ್ಷದ ಮಗ ವಿಜಯ್ ಶಂಕರ್ ಮತ್ತು ಆರು ವರ್ಷದ ಮಗಳು ಸೋನಮ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಮಗುವನ್ನು ರಾಣಿ ನೆಹರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.