ತೆಲಂಗಾಣದಲ್ಲಿ ತರಬೇತಿ ವಿಮಾನ ಅಪಘಾತದಿಂದ ಇಬ್ಬರು ಪೈಲಟ್‌ಗಳು ದುರ್ಮರಣ

ಆಘಾತಕಾರಿ ಘಟನೆಯೊಂದರಲ್ಲಿ ತೆಲಂಗಾಣದ ವಿಕರಾಬಾದ್ ಜಿಲ್ಲೆಯಲ್ಲಿ ಸಂಭವಿಸಿದ ತರಬೇತಿ ವಿಮಾನದ ಅಪಘಾತದಿಂದಾಗಿ ಇಬ್ಬರು ಪೈಲೆಟ್ ಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Last Updated : Oct 6, 2019, 04:44 PM IST
ತೆಲಂಗಾಣದಲ್ಲಿ ತರಬೇತಿ ವಿಮಾನ ಅಪಘಾತದಿಂದ ಇಬ್ಬರು ಪೈಲಟ್‌ಗಳು ದುರ್ಮರಣ title=
Photo courtesy: ANI

ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ ತೆಲಂಗಾಣದ ವಿಕರಾಬಾದ್ ಜಿಲ್ಲೆಯಲ್ಲಿ ಸಂಭವಿಸಿದ ತರಬೇತಿ ವಿಮಾನದ ಅಪಘಾತದಿಂದಾಗಿ ಇಬ್ಬರು ಪೈಲೆಟ್ ಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆ ತೆಲಂಗಾಣದ ವಿಕರಾಬಾದ್ ಜಿಲ್ಲೆಯ ಸುಲ್ತಾನಪುರ ಗ್ರಾಮದಲ್ಲಿ ನಡೆದಿದ್ದು, ತರಬೇತಿ ವಿಮಾನ ಬೆಳಿಗ್ಗೆ 11.55 ರ ನಂತರ ಹೈದರಾಬಾದ್‌ನ ಬೇಗಂಪೆಟ್ ನಿಲ್ದಾಣದ ಸಂಪರ್ಕವನ್ನು ಕಳೆದುಕೊಂಡ ನಂತರ ಈ ದುರಂತ ಸಂಭವಿಸಿದೆ. ಈಗ ಮೃತಪಟ್ಟಿರುವರಲ್ಲಿ ಒಬ್ಬನನ್ನು ತರಬೇತಿ ಪೈಲೆಟ್ ಆಗಿದ್ದ ಪ್ರಕಾಶ್ ವಿಶಾಲ್ ಎಂದು ಗುರುತಿಸಲಾಗಿದೆ. 

ಪೈಲೆಟ್ ಗಳು ಮಳೆ ಮತ್ತು ಹೆಚ್ಚಿನ ವೇಗದ ಗಾಳಿಯಿಂದಾಗಿ ಎಂಜಿನ್ ಮೇಲಿನ ನಿಯಂತ್ರಣ ಕಳೆದುಕೊಂಡರು ಎನ್ನಲಾಗಿದೆ. ವಿಮಾನವು ಹೈದರಾಬಾದ್‌ನ ಬೇಗಂಪೆಟ್ ವಿಮಾನ ನಿಲ್ದಾಣದಿಂದ ಹೊರಟಿದ್ದು, ಅಪಘಾತ ಸಂಭವಿಸುವ ಮೊದಲು 45 ನಿಮಿಷಗಳ ಕಾಲ ಗಾಳಿಯಲ್ಲಿ ಹಾರಾಡಿದೆ. ಪೈಲಟ್‌ಗಳು ವಿಮಾನವನ್ನು10 ನಿಮಿಷಗಳ ಕಾಲ ಸುರಕ್ಷಿತವಾಗಿ ಇಳಿಸಲು ಪ್ರಯತ್ನಿಸಿದರೂ ಕೂಡ ವಿಫಲರಾದರು ಎನ್ನಲಾಗಿದೆ.

ಈ ಘಟನೆ ಈಗ ಮಹಾರಾಷ್ಟ್ರದ ಶಿರ್ಪುರದ ಫ್ಲೈಯಿಂಗ್ ಅಕಾಡೆಮಿಯಲ್ಲಿ ಶುಕ್ರವಾರ ತರಬೇತಿ ವಿಮಾನ ಅಪಘಾತಕ್ಕೀಡಾದ ಎರಡು ದಿನಗಳ ನಂತರ ಈ ಘಟನೆ ನಡೆದಿದೆ.  

Trending News