ಉತ್ತರ ಪ್ರದೇಶ: ಇಂದು ಯೋಗಿ ಸಂಪುಟ ಸೇರಲಿದ್ದಾರೆ ಒಟ್ಟು 24 ಮಂತ್ರಿಗಳು

ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಸುಮಾರು ಎರಡೂವರೆ ವರ್ಷಗಳ ನಂತರ ಮೊದಲ ಬಾರಿಗೆ ಉತ್ತರ ಪ್ರದೇಶ ಸರ್ಕಾರದಲ್ಲಿ ಸಂಪುಟ ಪುನರ್ರಚನೆ ಮಾಡಲಾಗುತ್ತಿದೆ.

Last Updated : Aug 21, 2019, 10:43 AM IST
ಉತ್ತರ ಪ್ರದೇಶ: ಇಂದು ಯೋಗಿ ಸಂಪುಟ ಸೇರಲಿದ್ದಾರೆ ಒಟ್ಟು 24 ಮಂತ್ರಿಗಳು title=

ಲಕ್ನೋ: ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಸುಮಾರು ಎರಡೂವರೆ ವರ್ಷಗಳ ನಂತರ ಮೊದಲ ಬಾರಿಗೆ ಉತ್ತರ ಪ್ರದೇಶ ಸರ್ಕಾರದಲ್ಲಿ ಸಂಪುಟ ಪುನರ್ರಚನೆ ಮಾಡಲಾಗುತ್ತಿದೆ.

ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಊಹಾಪೋಹಗಳ ನಡುವೆ ಒಟ್ಟು 24 ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರಲ್ಲಿ 6 ಕ್ಯಾಬಿನೆಟ್ ಮಂತ್ರಿಗಳು, 6 ರಾಜ್ಯ ಸ್ವತಂತ್ರ ಪ್ರಭಾರ ಸಚಿವರು ಮತ್ತು 12 ರಾಜ್ಯ ಸಚಿವರು ಸೇರಿದ್ದಾರೆ. ಮೂಲಗಳ ಪ್ರಕಾರ, ಇಂದು ಪದಗ್ರಹಣ ಮಾಡಲಿರುವ ಹೊಸ ಮಂತ್ರಿಗಳಿಗಾಗಿ 24 ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ.

ಇದರೊಂದಿಗೆ ಸಿಎಂ ಯೋಗಿಯನ್ನು ಭೇಟಿ ಮಾಡಲು ಸಂಭಾವ್ಯ ಮಂತ್ರಿಗಳು ಬೆಳಿಗ್ಗೆ ನಂ 5 ಕಾಳಿದಾಸ್ ಮಾರ್ಗದಲ್ಲಿರುವ ಮುಖ್ಯಮಂತ್ರಿ ನಿವಾಸಕ್ಕೆ ಆಗಮಿಸುತ್ತಿದ್ದಾರೆ. 

ನಿನ್ನೆ ರಾತ್ರಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸದಲ್ಲಿ ನೂತನ ಸಚಿವರ ಆಯ್ಕೆಗೆ ಸಂಬಂಧಿಸಿದಂತೆ ಕ್ಯಾಬಿನೆಟ್ ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದೆ. ಅದರ ನಂತರ ಪ್ರಮಾಣ ವಚನ ಸ್ವೀಕರಿಸುವ ಸಚಿವರ ಪಟ್ಟಿಯನ್ನು ಬೆಳಿಗ್ಗೆ 4 ಗಂಟೆಗೆ ರಾಜ್ ಭವನಕ್ಕೆ ಕಳುಹಿಸಲಾಗಿದೆ. 

ತಡರಾತ್ರಿ ನಡೆದ ಸಭೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್, ಬಿಜೆಪಿ ರಾಜ್ಯ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಮತ್ತು ಪ್ರಧಾನ ಕಾರ್ಯದರ್ಶಿ ಸುನಿಲ್ ಬನ್ಸಾಲ್ ಭಾಗವಹಿಸಿದ್ದರು. ಮೂಲಗಳ ಪ್ರಕಾರ, ಈಗ ಸುಮಾರು 15-18 ಹೊಸಬರು ಮಂತ್ರಿಗಳಾಗಲಿದ್ದಾರೆ.

ಸುಮಾರು ಎರಡೂವರೆ ವರ್ಷಗಳ ನಂತರ ನಡೆಯುತ್ತಿರುವ ಈ ಕ್ಯಾಬಿನೆಟ್ ವಿಸ್ತರಣೆಯಲ್ಲಿ ಸಚಿವ ಸ್ಥಾನವನ್ನು ಯಾರು ಪಡೆಯುತ್ತಾರೆ ಎಂಬ ಬಗ್ಗೆ ನಿರಂತರ ಊಹಾಪೋಹಗಳು ನಡೆಯುತ್ತಿವೆ. ಇದರೊಂದಿಗೆ ಯುಪಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರಿಗೆ ಮತ್ತೊಂದು ಇಲಾಖೆಯ ಜವಾಬ್ದಾರಿ ವಹಿಸುವ ನಿರೀಕ್ಷೆ ಇದೆ.

ಲೋಕಸಭಾ ಚುನಾವಣೆಯ ನಂತರ ಯೋಗಿ ಸಂಪುಟದಲ್ಲಿ ಮೂರು ಸ್ಥಾನಗಳು ಖಾಲಿ ಇವೆ. ಇದರಲ್ಲಿ ರೀಟಾ ಬಹುಗುಣ ಜೋಶಿ, ಎಸ್‌ಪಿ ಸಿಂಗ್ ಬಾಗೇಲ್ ಮತ್ತು ಸತ್ಯದೇವ್ ಪಚೌರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದರಾದ ನಂತರ ಆ ಮೂರು ಸ್ಥಾನಗಳು ತೆರವಾಗಿವೆ. ಪ್ರಮಾಣವಚನ ಸಮಾರಂಭದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. 

ಮೂಲಗಳ ಪ್ರಕಾರ, ಪಿಡಬ್ಲ್ಯುಡಿಯ ಜೊತೆಗೆ ನಗರಾಭಿವೃದ್ಧಿ ಸಚಿವಾಲಯವೂ ಮೌರ್ಯ ಅವರಿಗೆ ಸಿಗುವ ನಿರೀಕ್ಷೆಯಿದೆ. ಅದೇ ಸಮಯದಲ್ಲಿ, ಸತೀಶ್ ದ್ವಿವೇದಿ ಶಿಕ್ಷಣ ಇಲಾಖೆಯನ್ನು ಪಡೆಯಬಹುದು. ಸಂಸತ್ತಿನ ಕಾರ್ಯದ ಉಸ್ತುವಾರಿ ಸುರೇಶ್ ಖನ್ನಾ ಅವರ ಬಳಿ ಇರುತ್ತದೆ. ಅದೇ ಸಮಯದಲ್ಲಿ, ಸತೀಶ್ ಮಹಾನಾ, ಧರ್ಮ ಪಾಲ್ ಸಿಂಗ್ ಮತ್ತು ಮೋತಿ ಸಿಂಗ್ ಅವರ ಇಲಾಖೆಗಳನ್ನು ಬದಲಾಯಿಸಬಹುದು ಎಂದು ಹೇಳಲಾಗುತ್ತಿದೆ.

ಅನಿಲ್ ರಾಜ್‌ಭರ್, ಡಾ.ಮಹೇಂದ್ರ ಸಿಂಗ್, ಸುರೇಶ್ ರಾಣಾ, ಉಪೇಂದ್ರ ತಿವಾರಿ, ಭೂಪೇಂದ್ರ ಚೌಧರಿ, ನೀಲಕಂಠ ತಿವಾರಿ, ಧರಂ ಸಿಂಗ್ ಸೈನಿ ಮತ್ತು ಹೊಸ ಮಹಿಳಾ ಮುಖವನ್ನು ಕ್ಯಾಬಿನೆಟ್ ಸ್ಥಾನಕ್ಕೆ ಸೇರಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಅದೇ ಸಮಯದಲ್ಲಿ, ಬುಲಂದ್‌ಶಹರ್‌ನ ಅನಿಲ್ ಶರ್ಮಾ, ಕಾನ್ಪುರ್ ಪ್ರದೇಶದ ನೀಲಿಮಾ ಕಟಿಯಾರ್, ಬಲ್ಲಿಯಾದ ಆನಂದ್ ಶುಕ್ಲಾ, ಸಿದ್ಧಾರ್ಥನಗರದ ಸತೀಶ್ ದ್ವಿವೇದಿ, ಚಿತ್ರಕೂಟಿನ ಚಂದ್ರೇಶ್ ಉಪಾಧ್ಯಾಯ ಮತ್ತು ಬಸ್ತಿ ಮೂಲದ ಶ್ರೀ ರಾಮ್ ಚೌಹಾನ್ ಅವರು ಸಂಪುಟಕ್ಕೆ ಸೇರಬಹುದು. ಇದಲ್ಲದೆ, ಮೈನ್‌ಪುರಿ, ಕನ್ನೌಜ್ ಮತ್ತು ಬಾದೌನ್ ಕ್ಷೇತ್ರಗಳಿಂದಲೂ ತಲಾ ಒಬ್ಬರಿಗೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಇದೆ.

Trending News