ಬಿಜೆಪಿ ಅಧಿಕಾರದ ಅವಧಿಯಲ್ಲಿ ಹೆಚ್ಚಿನ ಮತಾಂತರಗಳಾಗಿವೆ- ಭೂಪೇಶ್ ಬಘೇಲ್

ಪ್ರಸ್ತುತ ಛತ್ತೀಸ್‌ಗಡ್ ದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಲವಂತದ ಧಾರ್ಮಿಕ ಮತಾಂತರದ ಘಟನೆಗಳು ಹೆಚ್ಚಾಗಿದೆ ಎಂದು ಬಿಜೆಪಿ ಆರೋಪಿಸಿದ ನಂತರ,ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು, ಹಿಂದಿನ ಬಿಜೆಪಿ ಆಡಳಿತದ ಅವಧಿಯಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದವು ಎಂದು ತಿರುಗೇಟು ನೀಡಿದ್ದಾರೆ.

Written by - Zee Kannada News Desk | Last Updated : Sep 12, 2021, 12:26 AM IST
  • ಪ್ರಸ್ತುತ ಛತ್ತೀಸ್‌ಗಡ್ ದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಲವಂತದ ಧಾರ್ಮಿಕ ಮತಾಂತರದ ಘಟನೆಗಳು ಹೆಚ್ಚಾಗಿದೆ ಎಂದು ಬಿಜೆಪಿ ಆರೋಪಿಸಿದ ನಂತರ,ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು, ಹಿಂದಿನ ಬಿಜೆಪಿ ಆಡಳಿತದ ಅವಧಿಯಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದವು ಎಂದು ತಿರುಗೇಟು ನೀಡಿದ್ದಾರೆ.
 ಬಿಜೆಪಿ ಅಧಿಕಾರದ ಅವಧಿಯಲ್ಲಿ ಹೆಚ್ಚಿನ ಮತಾಂತರಗಳಾಗಿವೆ- ಭೂಪೇಶ್ ಬಘೇಲ್ title=
file photo

ನವದೆಹಲಿ: ಪ್ರಸ್ತುತ ಛತ್ತೀಸ್‌ಗಡ್ ದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಲವಂತದ ಧಾರ್ಮಿಕ ಮತಾಂತರದ ಘಟನೆಗಳು ಹೆಚ್ಚಾಗಿದೆ ಎಂದು ಬಿಜೆಪಿ ಆರೋಪಿಸಿದ ನಂತರ,ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು, ಹಿಂದಿನ ಬಿಜೆಪಿ ಆಡಳಿತದ ಅವಧಿಯಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದವು ಎಂದು ತಿರುಗೇಟು ನೀಡಿದ್ದಾರೆ.

ಬಿಜೆಪಿಗೆ ರೈತರ ಸಮಸ್ಯೆಗಳು, ಹಸುಗಳು ಅಥವಾ ಆದಿವಾಸಿಗಳಂತಹ ಸಮಸ್ಯೆಗಳಿಲ್ಲ. ಅವರಿಗೆ ಧಾರ್ಮಿಕ ಮತಾಂತರದ ಸಮಸ್ಯೆಗಳು ಮಾತ್ರ ಉಳಿದಿವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತಿ ಹೆಚ್ಚು ಚರ್ಚ್‌ಗಳನ್ನು ನಿರ್ಮಿಸಲಾಗಿದೆ ಎಂದು ನಾನು ಹೇಳಿದ್ದೆ ಎಂದು ಛತ್ತೀಸ್‌ ಗಡ್ ಸಿಎಂ ಭೂಪೇಶ್ ಬಘೇಲ್ ಶನಿವಾರ ರಾಯಪುರದಲ್ಲಿ ಹೇಳಿದರು.

ಇದನ್ನೂ ಓದಿ: Video: ಕಾಂಗ್ರೆಸ್ ಅಧ್ಯಕ್ಷ ಪದವಿ ಹಸ್ತಾಂತರದ ವೇಳೆ ಬಿಕ್ಕಿಬಿಕ್ಕಿ ಅತ್ತ ಛತ್ತೀಸ್ ಗಡ್ ಸಿಎಂ

ಇದರರ್ಥ ಹೆಚ್ಚಿನ ಧಾರ್ಮಿಕ ಮತಾಂತರಗಳನ್ನು ಅವರ ಅವಧಿಯಲ್ಲಿ ಮಾಡಲಾಯಿತು. ಬಲವಂತದ ಧಾರ್ಮಿಕ ಮತಾಂತರದ ದೂರು ಬಂದರೆ ನಾವು ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತೇವೆ ಎಂದು ನಾನು ಈಗಲೂ ಹೇಳುತ್ತಿದ್ದೇನೆ ಎಂದು ಅವರು ಹೇಳಿದರು.

2018 ರಲ್ಲಿ ಭೂಪೇಶ್ ಬಘೇಲ್ (Bhupesh Baghel) ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ರಾಜ್ಯದಲ್ಲಿ ಧಾರ್ಮಿಕ ಮತಾಂತರ ಹೆಚ್ಚಾಗಿದೆ ಎಂದು ಆರೋಪಿಸಿ ಛತ್ತೀಸ್ ಗಡ್ ದ ಬಿಜೆಪಿ ಅಧ್ಯಕ್ಷ ವಿಷ್ಣು ದೇವ ಸಾಯಿ ನೇತೃತ್ವದ ಬಿಜೆಪಿ ನಿಯೋಗವು ಶನಿವಾರ ರಾಜ್ಯಪಾಲ ಅನುಸೂಯ ಉಯೇಕಿ ಅವರಿಗೆ ಜ್ಞಾಪನಾ ಪತ್ರವನ್ನು ಸಲ್ಲಿಸಿತು.15 ಸದಸ್ಯರ ನಿಯೋಗವು ಈ ಘಟನೆಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿತು.

ಇದನ್ನೂ ಓದಿ: "ಕೊರೊನಾ ವಿಚಾರದಲ್ಲಿ ಇತರ ದೇಶಗಳಿಂದ ಭಾರತ ಪಾಠ ಕಲಿತಿಲ್ಲ"

ಕೆಲವು ದಿನಗಳ ಹಿಂದೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪಾದ್ರಿ ಮತ್ತು ಇತರ ಇಬ್ಬರ ಮೇಲೆ ಹಲ್ಲೆ ಮತ್ತು ನಿಂದನೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾದವರನ್ನು ಬಿಡುಗಡೆ ಮಾಡಲು ಅದು ಕೋರಿತು.

ಸೆಪ್ಟೆಂಬರ್ 5 ರಂದು, ಪಾದ್ರಿ ಮತ್ತು ಇನ್ನಿಬ್ಬರನ್ನು ಇಲ್ಲಿನ ಪುರಾಣಿ ಬಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುಂಪು ಹಿಂಸಿಸಿ ನಿಂದಿಸಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಯಿತು.ರಾಜ್ಯಾದ್ಯಂತ ಧಾರ್ಮಿಕ ಮತಾಂತರದ ಘಟನೆಗಳು ವರದಿಯಾಗುತ್ತಿವೆ ಎಂದು ಬಿಜೆಪಿ ಆರೋಪಿಸಿದೆ.ಇಂತಹ ಚಟುವಟಿಕೆಗಳನ್ನು ನಿಲ್ಲಿಸಲು ಕ್ರಮ ಕೈಗೊಳ್ಳುವ ಬದಲು,ಭೂಪೇಶ್ ಬಘೇಲ್ ಸರ್ಕಾರವು ರಕ್ಷಿಸಲು ಮುಂದಾಗಿದೆ ಎಂದು ಬಿಜೆಪಿ ದೂರಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮಧ್ಯೆ ಬಿರುಕು...!

"ಛತ್ತೀಸ್ ಗಡ್ ದಲ್ಲಿ ಸಿಎಂ ಭೂಪೇಶ್ ಬಘೇಲ್ ಅವರ ಅಡಿಯಲ್ಲಿ ಅನೇಕ ಧಾರ್ಮಿಕ ಮತಾಂತರಗಳು ನಡೆಯುತ್ತಿವೆ. ಅವರನ್ನು ತಡೆಯಲು ಪ್ರಯತ್ನಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ" ಎಂದು ಬಿಜೆಪಿ ನಾಯಕ ಬ್ರಿಜ್ಮೋಹನ್ ಅಗರ್ವಾಲ್ ಹೇಳಿದರು.

ರಾಯ್ಪುರದ ಭಟಗೊವಾನ್ ಪ್ರದೇಶದಲ್ಲಿ ಕೆಲವು ಜನರನ್ನು ಮತಾಂತರ ಮಾಡಿದ ಆರೋಪದ ಕುರಿತು ರಾಯಪುರ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ ನಂತರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ಹೇಳಿಕೊಂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News