ಲಖನೌ: Yogi Adityanath Tested Corona Positive - ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM Yogi) ಅವರ ಕೊರೊನಾ ವರದಿ ಪಾಸಿಟಿವ್ ಹೊರಬಂದಿದೆ. ಈ ಕುರಿತು ಸ್ವತಃ ಯೋಗಿ ಆದಿತ್ಯನಾಥ್ ಅವರೇ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿರುವ ಅವರು, "ನನ್ನಲ್ಲಿ ಕೊವಿಡ್-19 (Coronavirus) ನ ಆರಂಭಿಕ ಲಕ್ಷಣಗಳು ಕಂಡುಬಂದ ಹಿನ್ನೆಲೆ, ತಪಾಸಣೆಗೆ ಒಳಗಾದಾಗ ನನ್ನ ವರದಿ (Covid-19 Report) ಸಕಾರಾತ್ಮಕ ಹೊರಬಂದಿದೆ (Corona Positive). ಪ್ರಸ್ತುತ ನಾನು ಸೆಲ್ಫ್ ಐಸೋಲೆಶನ್ ನಲ್ಲಿದ್ದು, ವೈದ್ಯರ ಸಲಹೆಗಳನ್ನು ಸಂಪೂರ್ಣವಾಗಿ ಪಾಲಿಸುತ್ತಿದ್ದೇನೆ. ಪ್ರಸ್ತುತ ನಾನು ನನ್ನ ಎಲ್ಲ ಕಾರ್ಯಗಳ ಕುರಿತು ವರ್ಚ್ಯುವಲ್ ಮಾಹಿತಿ ನೀಡುತ್ತಿದ್ದೇನೆ" ಎಂದಿದ್ದಾರೆ.
शुरुआती लक्षण दिखने पर मैंने कोविड की जांच कराई और मेरी रिपोर्ट पॉजिटिव आई है।
मैं सेल्फ आइसोलेशन में हूं और चिकित्सकों के परामर्श का पूर्णतः पालन कर रहा हूं। सभी कार्य वर्चुअली संपादित कर रहा हूं।
— Yogi Adityanath (@myogiadityanath) April 14, 2021
ಈ ಮೊದಲೇ ಸೆಲ್ಫ್ ಐಸೋಲೆಶನ್ ಗೆ ಒಳಗಾಗಿದ್ದ ಯೋಗಿ
ಉತ್ತರ ಪ್ರದೇಶದ ಮುಖ್ಯಮಂತ್ರಿ ಕಚೇರಿಯ ಕೆಲವು ಅಧಿಕಾರಿಗಳು ಕರೋನಾ ವೈರಸ್ ಸೋಂಕಿಗೆ ಒಳಗಾದ ನಂತರ ಯೋಗಿ ಆದಿತ್ಯನಾಥ್ ತಮ್ಮನ್ನು ಪ್ರತ್ಯೇಕಿಸಿಕೊಂಡಿದ್ದರು. ಮುಖ್ಯಮಂತ್ರಿಯವರ ಹೆಚ್ಚೂವರಿ ಕಾರ್ಯದರ್ಶಿ ಎಸ್ಪಿ ಗೋಯಲ್ , ಒಎಸ್ಡಿ ಅಭಿಷೇಕ್ ಕೌಶಿಕ್, ವಿಶೇಷ ಕಾರ್ಯದರ್ಶಿ ಅಮಿತ್ ಸಿಂಗ್ ಮತ್ತು ಇತರ ಕೆಲವು ಉದ್ಯೋಗಿಗಳ ಕರೋನಾ ವರದಿ ಪಾಸಿಟಿವ್ ಕಂಡುಬಂದಿರುವುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ- Yogi Adityanath : ಕಚೇರಿ ಸಿಬ್ಬಂದಿಗೆ ಕೊರೋನಾ; ಸೆಲ್ಫ್ ಕ್ವಾರಂಟೈನ್ ಆದ ಉತ್ತರ ಪ್ರದೇಶ ಸಿಎಂ!
ಅಖಿಲೇಶ್ ಯಾದವ್ ಗೂ ಕೂಡ ಕೊರೊನಾ ಸೋಂಕು
ಇದಕ್ಕೂ ಮೊದಲು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಕೊರೊನಾ ವರದಿ ಕೂಡ ಸಕಾರಾತ್ಮಕ ಹೊರಬಂದಿಗೆ. ತಮ್ಮ ವರದಿ ಸಕಾರಾತ್ಮಕ ಬಂದ ಹಿನ್ನೆಲೆ ಅಖಿಲೇಶ್, ತಮ್ಮ ಮನೆಯಲ್ಲಿಯೇ ತಮ್ಮನ್ನು ಪ್ರತ್ಯೇಕಿಸಿಕೊಂಡಿದ್ದಾರೆ. ಈ ಕುರಿತು ಖುದ್ದು ಟ್ವೀಟ್ ಮಾಡಿದ್ದ ಅಖಿಲೇಶ್, "ಸದ್ಯ ಬಂದಿರುವ ನನ್ನ ಕೊರೊನಾ ವರದಿ ಸಕಾರಾತ್ಮಕವಾಗಿದೆ. ನನ್ನನ್ನು ನಾನು ಇತರರಿಂದ ಪ್ರತ್ಯೇಕಿಸಿಕೊಂಡಿದ್ದೇನೆ ಮತ್ತು ನಾನು ನಮ್ಮ ನಿವಾಸದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದೇನೆ. ಕಳೆದ ಕೆಲ ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರಿಗೆಲ್ಲರಿಗೂ ಪರೀಕ್ಷೆಗೆ ಒಳಗಾಗುವಂತೆ ನಾನು ವಿನಂತಿಸುತ್ತೇನೆ ಮತ್ತು ಐಸೋಲೆಶನ್ಗೆ ಒಳಗಾಗುವಂತೆ ಕೋರುತ್ತೇನೆ" ಎಂದಿದ್ದರು.
ಉತ್ತರ ಪ್ರದೇಶದಲ್ಲಿ ಕೊರೊನಾ ಸ್ಥಿತಿಗತಿ
ಯುಪಿಯಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 18021 ಹೊಸ ಪ್ರಕರಣಗಳು ವರದಿಯಾಗಿದ್ದು, ಈ ಅವಧಿಯಲ್ಲಿ 81 ಜನರು ಸಾವನ್ನಪ್ಪಿದ್ದಾರೆ. ಲಕ್ನೋದಲ್ಲಿ ಅತಿ ಹೆಚ್ಚು 5382 ಹೊಸ ಪ್ರಕರಣಗಳಿವೆ. ಇದಲ್ಲದೆ, ಪ್ರಯಾಗರಾಜ್ನಲ್ಲಿ 1856, ವಾರಣಾಸಿಯಲ್ಲಿ 1404, ಕಾನ್ಪುರದಲ್ಲಿ 1271, ಗೋರಖ್ಪುರದಲ್ಲಿ 602, ಗಾಜಿಯಾಬಾದ್ನಲ್ಲಿ 199 ಮತ್ತು ನೋಯ್ಡಾದಲ್ಲಿ 229 ಹೊಸ ಪ್ರಕರಣಗಳು ದಾಖಲಾಗಿವೆ. ಉತ್ತರ ಪ್ರದೇಶದಲ್ಲಿ ಈ ಸಾಂಕ್ರಾಮಿಕ ರೋಗದಿಂದ ಒಟ್ಟು 9224 ಜನರು ಪ್ರಾಣ ಕಳೆದುಕೊಂಡಿದ್ದರೆ, ಇದುವರೆಗೆ ಈ ಮಾರಕ ಸೋಂಕಿನ ದಾಳಿಯಿಂದ 614819 ಜನರು ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಒಟ್ಟು 81576 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ- Foreigner Vaccine: ಭಾರತದಲ್ಲಿ ಎಲ್ಲಾ ವಿದೇಶಿ ಲಸಿಕೆಗಳಿಗೆ ಅನುಮತಿ ನೀಡಲು ಮುಂದಾದ ಕೇಂದ್ರ ಸರ್ಕಾರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.