EPFO 2020 ಅಡ್ಮಿಟ್ ಕಾರ್ಡ್ ಬಿಡುಗಡೆ ಮಾಡಿದ UPSC; ಡೌನ್ ಲೋಡ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಇಪಿಎಫ್ಒ ಅಡ್ಮಿಟ್ ಕಾರ್ಡ್ 2020 (EPFO Admit Card) ಅನ್ನು ಇಂದು ಬಿಡುಗಡೆ ಮಾಡಿದೆ. 

Written by - Ranjitha R K | Last Updated : Apr 16, 2021, 07:51 PM IST
  • ಇಪಿಎಫ್ಒ ಅಡ್ಮಿಟ್ ಕಾರ್ಡ್ 2020 ಅನ್ನು ಇಂದು ಬಿಡುಗಡೆ
  • ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್ ನಿಂದ ಅಡ್ಮಿಟ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಬಹುದು
  • ಲಿಖಿತ ಪರೀಕ್ಷೆ ಮೇ 9, 2021 ರಂದು ಬೆಳಿಗ್ಗೆ 10 ರಿಂದ ನಡೆಯಲಿದೆ
 EPFO 2020 ಅಡ್ಮಿಟ್ ಕಾರ್ಡ್ ಬಿಡುಗಡೆ ಮಾಡಿದ UPSC; ಡೌನ್ ಲೋಡ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ title=
ಇಪಿಎಫ್ಒ ಅಡ್ಮಿಟ್ ಕಾರ್ಡ್ 2020 ಅನ್ನು ಇಂದು ಬಿಡುಗಡೆ (photo india.com)

ನವದೆಹಲಿ : ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಇಪಿಎಫ್ಒ ಅಡ್ಮಿಟ್ ಕಾರ್ಡ್ 2020 (EPFO Admit Card) ಅನ್ನು ಇಂದು ಬಿಡುಗಡೆ ಮಾಡಿದೆ.  ಈ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್ upc.gov.in ಗೆ ಹೋಗಿ ತಮ್ಮ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. 

ಇದಲ್ಲದೆ, ಅಭ್ಯರ್ಥಿಗಳು ಈ ಲಿಂಕ್ https://upsconline.nic.in/eadmitcard/admitcard_epfo_2020/ ಅನ್ನು ಕ್ಲಿಕ್ ಮಾಡುವುದರ ಮೂಲಕ ನೇರವಾಗಿ ತಮ್ಮ ಪ್ರವೇಶ ಪತ್ರವನ್ನು ಡೌನ್‌ಲೋಡ್ (Download) ಮಾಡಿಕೊಳ್ಳಬಹುದು. ಈ ನೇಮಕಾತಿಗಾಗಿ ಲಿಖಿತ ಪರೀಕ್ಷೆ ಮೇ 9, 2021 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ ನಡೆಯಲಿದೆ. ಯುಪಿಎಸ್ಸಿ ಇಪಿಎಫ್ಒ ಅಡ್ಮಿಟ್ ಕಾರ್ಡ್ 2020 ಅಧಿಕೃತ ವೆಬ್‌ಸೈಟ್‌ನಲ್ಲಿ ಏಪ್ರಿಲ್ 16 ರಿಂದ 2021 ರವರೆಗೆ ಲಭ್ಯವಿದೆ. 

ಇದನ್ನೂ ಓದಿ : Post Office ಖಾತೆದಾರರಿಗೆ ಬಿಗ್ ರಿಲೀಫ್! ಮಿನಿಮಂ ಬ್ಯಾಲೆನ್ಸ್ ಬಗ್ಗೆ ಮಹತ್ವದ ನಿರ್ಧಾರ

ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವ 1 ಗಂಟೆ ಮೊದಲು ಪರೀಕ್ಷಾ ಕೇಂದ್ರದಲ್ಲಿ ರಿಪೋರ್ಟ್ ಮಾಡಿಕೊಳ್ಳಬೇಕು. ಪರೀಕ್ಷೆ ಪ್ರಾರಂಭವಾಗುವ 10 ನಿಮಿಷಗಳ ಮೊದಲು ಪರೀಕ್ಷಾ ಕೇಂದ್ರವನ್ನು ಮುಚ್ಚಲಾಗುವುದು. ಪರೀಕ್ಷೆಯು ಎರಡು ಗಂಟೆಗಳ ಅವಧಿಯನ್ನು ಹೊಂದಿರುತ್ತದೆ. ಅಧಿಕೃತ ಮಾಹಿತಿಯ ಪ್ರಕಾರ, ಪರೀಕ್ಷೆಯ ಮಾಧ್ಯಮವು ಹಿಂದಿ (Hindi) ಮತ್ತು ಇಂಗ್ಲಿಷ್ ಎರಡೂ ಆಗಿರುತ್ತದೆ ಮತ್ತು ಪ್ರಶ್ನೆ ಪತ್ರಿಕೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳು ಇರುತ್ತವೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ 421 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಯುಪಿಎಸ್ಸಿ (UPSC) ಇಪಿಎಫ್ಒ ಅಡ್ಮಿಟ್ ಕಾರ್ಡ್ 2020 ಅನ್ನು ಹೇಗೆ ಡೌನ್ಲೋಡ್ ಮಾಡುವುದು

ಅಡ್ಮಿಟ್ ಕಾರ್ಡ್ ಡೌನ್ ಲೊಡ್ ಮಾಡಿಕೊಳ್ಳುವುದು ಹೇಗೆ ?
ಯುಪಿಎಸ್ಸಿ ಅಧಿಕೃತ ವೆಬ್‌ಸೈಟ್ upc.gov.in ಗೆ ಹೋಗಿ.
ಇಲ್ಲಿ UPSC EPFO ಲಿಂಕ್ ಅನ್ನು ಕ್ಲಿಕ್ ಮಾಡಿ.
ಈಗ UPSC EPFO Admit Card 2020 ರುವ ಪೇಜ್ ತೆರೆದುಕೊಳ್ಳುತ್ತದೆ.
ಲಿಂಕ್ ಕ್ಲಿಕ್ ಮಾಡಿ ಮತ್ತು ಲಾಗಿನ್ ಕ್ರೆಡೆನ್ಶಿಯಲ್ ಗಳನ್ನು ಹಾಕಿ .
ಅಡ್ಮಿಟ್ ಕಾರ್ಡ್ ಸ್ಕ್ರೀನ್ ಮೇಲೆ ಕಾಣಿಸುತ್ತದೆ.
ನಿಮ್ಮದೇ ಅಡ್ಮಿಟ್ ಕಾರ್ಡ್ (Admit Card) ಎನ್ನುವುದನ್ನು ಪರಿಶೀಲಿಸಿ ಮತ್ತು ಡೌನ್‌ಲೋಡ್ ಮಾಡಿ.
ಮುಂದಿನ ಅವಶ್ಯಕತೆಗಳಿಗಾಗಿ ಅದರ ಹಾರ್ಡ್ ಕಾಪಿಯನ್ನು ತೆಗೆದಿಟ್ಟುಕೊಳ್ಳಿ. 

ಇದನ್ನೂ ಓದಿ : ಶೀಘ್ರದಲ್ಲೇ ಬಂದ್ ಆಗಲಿದೆ ಈ ಪ್ರಸಿದ್ದ ಬ್ಯಾಂಕ್..! ಕಾರಣ ಇಲ್ಲಿದೆ ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News