ಮೆಲ್ಬೋರ್ನ್: ನ್ಯೂಜಿಲೆಂಡ್‌ನಲ್ಲಿ ಹೊಸದಾಗಿ ಚುನಾಯಿತರಾದ ಯುವ ಸಂಸದರಲ್ಲಿ ಒಬ್ಬರಾದ ಡಾ. ಗೌರವ್ ಶರ್ಮಾ ಅವರು ಸಂಸತ್ತಿನಲ್ಲಿ ಬುಧವಾರ ಸಂಸ್ಕೃತದಲ್ಲಿ (Sanskrit) ಪ್ರಮಾಣ ವಚನ ಸ್ವೀಕರಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಭಾರತದ ಹೊರಗೆ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ಎರಡನೇ ಮುಖಂಡ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಸುರಿನಾಮ್ ಅಧ್ಯಕ್ಷ ಚಂದ್ರಿಕಾ ಪ್ರಸಾದ್ ಸಂತೋಖಿ ಈ ವರ್ಷದ ಜುಲೈನಲ್ಲಿ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಹಿಮಾಚಲ ಪ್ರದೇಶದ ಹಮೀರ್‌ಪುರ ಮೂಲದ ಡಾ.ಶರ್ಮಾ ಅವರಿಗೆ 33 ವರ್ಷ ವಯಸ್ಸು. ಅವರು ಇತ್ತೀಚೆಗೆ ನ್ಯೂಜಿಲೆಂಡ್‌ನ ಹ್ಯಾಮಿಲ್ಟನ್ ವೆಸ್ಟ್ ನಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಇದನ್ನು ಓದಿ- ಭಾರತೀಯ ಮೂಲದ ವೈದ್ಯೆಗೆ ಒಲಿದ ಮಿಸ್ ಇಂಗ್ಲೆಂಡ್ ಪಟ್ಟ..!
ಎರಡು ಭಾಷೆಗಳಲ್ಲಿ ಪ್ರಮಾಣವಚನ ಸ್ವೀಕಾರ
ಭಾರತ ಮತ್ತು ನ್ಯೂಜಿಲೆಂಡ್‌ನ ಸಾಂಸ್ಕೃತಿಕ ಸಂಪ್ರದಾಯಗಳ ಬಗ್ಗೆ ಶರ್ಮಾ ಅಪಾರ ಗೌರವ ಹೊಂದಿದ್ದಾರೆ, ನ್ಯೂಜಿಲೆಂಡ್ ಭಾಷೆಯ ಮಾವೊರಿಯಲ್ಲಿ ಮೊದಲು ಪ್ರಮಾಣವಚನ ಸ್ವೀಕರಿಸಿದ ಅವರು ನಂತರ ಭಾರತೀಯ ಭಾಷೆ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು ಎಂದು ನ್ಯೂಜಿಲೆಂಡ್ ಮತ್ತು ಸಮೋವಾಕ್ಕೆ ಭಾರತದ ಹೈ ಕಮಿಷನರ್ ಆಗಿರುವ ಮುಕ್ತೇಶ್ ಪರದೇಶಿ ಟ್ವೀಟ್ ಮಾಡಿದ್ದಾರೆ.
Kiwi-Indian Labour Party MP @gmsharmanz is the second Indian-origin leader (outside India) to take oath in Sanskrit.
The first was Suriname President Chandrikapersad Santokhi who took oath of office in July this year. @WIONews @sidhant pic.twitter.com/yhfzvBZFHS— Palki Sharma (@palkisu) November 25, 2020
ಶರ್ಮಾ ಆಕ್ಲೆಂಡ್‌ನಿಂದ ಎಂಬಿಬಿಎಸ್ ಮಾಡಿದ್ದಾರೆ ಮತ್ತು ವಾಷಿಂಗ್ಟನ್‌ನಿಂದ ಎಂಬಿಎ ಪದವಿ ಪಡೆದಿದ್ದಾರೆ. ಅವರು ಹ್ಯಾಮಿಲ್ಟನ್ ನ ನೋಟನ್ ನಲ್ಲಿ ಜನರಲ್ ಪ್ರಾಕ್ಟೀಶನರ್ ಆಗಿ ಕೆಲಸ ಮಾಡುತ್ತಾರೆ. ಅವರು ನ್ಯೂಜಿಲೆಂಡ್, ಸ್ಪೇನ್, ಯುಎಸ್ಎ, ನೇಪಾಳ, ವಿಯೆಟ್ನಾಂ, ಮಂಗೋಲಿಯಾ, ಸ್ವಿಟ್ಜರ್ಲೆಂಡ್ ಮತ್ತು ಭಾರತದಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ನೀತಿ ಸೂತ್ರೀಕರಣದಲ್ಲಿ ಕೆಲಸ ಮಾಡಿದ್ದಾರೆ.
ಇದನ್ನು ಓದಿ- ಭಾರತೀಯ ಮೂಲದ ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಗ್ಲೆನ್ ಮ್ಯಾಕ್ಸ್‌ವೆಲ್..!
ಈ ಕಾರಣದಿಂದ ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಿಲ್ಲ
ಈ ಕುರಿತು ಟ್ವಿಟ್ಟರ್ನಲ್ಲಿ, ಬಳಕೆದಾರರು ಶರ್ಮಾ ಅವರನ್ನು ಹಿಂದಿಯಲ್ಲಿ ಏಕೆ ಪ್ರಮಾಣ ವಚನ ಸ್ವೀಕರಿಸಲಿಲ್ಲ ಎಂದು ಕೇಳಿದಾಗ, ಎಲ್ಲರೂ ರಂಜಿಸಲು ಸಾಧ್ಯವಿಲ್ಲ ಎಂದು ಶರ್ಮಾ ಹೇಳಿದ್ದಾರೆ, ಆದ್ದರಿಂದ ಎಲ್ಲಾ ಭಾರತೀಯ ಭಾಷೆಗಳಿಗೆ ಗೌರವವನ್ನು ತರುವ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸುವುದು ಸೂಕ್ತವೆಂದು ತಮ್ಮ ಭಾವನೆ ಎಂದಿದ್ದಾರೆ.
ಇದನ್ನು ಓದಿ- ಭಾರತೀಯ ಮೂಲದ ಬಾಣಸಿಗನನ್ನು ವರಿಸಿದ್ದ ಆಸ್ಟ್ರಿಯಾದ ರಾಜಕುಮಾರಿ ಮಾರಿಯಾ ಗ್ಯಾಲಿಟ್ಜಿನ್ ಸಾವು
'ನಿಜ ಹೇಳುವುದಾದರೆ ನಾನು ಅದನ್ನು ಪರಿಗಣಿಸಿದ್ದೆ ಆದರೆ ನನ್ನ ಮೊದಲ ಭಾಷೆ ಪಹಾರಿ ಅಥವಾ ಪಂಜಾಬಿಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ಬಗ್ಗೆ ಒಂದು ಪ್ರಶ್ನೆ ಉದ್ಭವಿಸಿದೆ. ನಿಸ್ಸಂಶಯವಾಗಿ, ಪ್ರತಿಯೊಬ್ಬರನ್ನು ಸಂತೋಷವಾಗಿಡುವುದು ಕಷ್ಟ. ಸಂಸ್ಕೃತವು ಎಲ್ಲಾ ಭಾಷೆಗಳನ್ನು ಗೌರವಿಸುತ್ತದೆ, ಆದ್ದರಿಂದ ಈ ಭಾಷೆಯಲ್ಲಿಯೇ ಪ್ರಮಾಣ ವಚನ ಮಾಡುವುದು ಸೂಕ್ತವೆಂದು ನಾನು ಭಾವಿಸಿದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ,
ಇದಕ್ಕೂ ಮುನ್ನ ಶರ್ಮಾ ಅವರು 2017 ರಲ್ಲಿ ಸ್ಪರ್ಧಿಸಿದ್ದರು, ಆದರೆ ನಂತರ ಅವರು ಸೋಲನ್ನು ಎದುರಿಸಬೇಕಾಯಿತು. ಈ ವರ್ಷ ಅವರು ರಾಷ್ಟ್ರೀಯ ಪಕ್ಷದ ಟಿಮ್ ಮಾಸಿಂಡೋ ಅವರನ್ನು ಸೋಲಿಸಿದ್ದಾರೆ.