ಲಕ್ನೋ: ಯಾದವರು ಮತ್ತು ಕರ್ಮಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಇತರ ಹಿಂದುಳಿದ ಜಾತಿಗಳಿಗೆ ನಿಗದಿಯಾಗಿರುವ ಶೇ.27ರ ಮೀಸಲಾತಿಯಲ್ಲಿ ಶೇ.7ರ ಮೀಸಲಾತಿಯನ್ನು ಯಾದವರು ಮತ್ತು ಕರ್ಮಿಗಳಿಗೆ ನೀಡಲು ಉತ್ತರ ಪ್ರದೇಶ ಸರ್ಕಾರ ರಚಿಸಿರುವ ಸಾಮಾಜಿಕ ನ್ಯಾಯ ಸಮಿತಿ ಶಿಫಾರಸು ಮಾಡಿದೆ.
ಹಿಂದುಳಿದ ಜಾತಿಗಳಿಗೆ ನಿಗದಿಯಾಗಿರುವ ಶೇ.27ರ ಮೀಸಲಾತಿಯನ್ನು ಸೂಕ್ತವಾಗಿ ಹಂಚಲು ಉತ್ತರಪ್ರದೇಶದ ಬಿಜೆಪಿ ಸರ್ಕಾರ ನಾಲ್ವರು ಸದಸ್ಯರ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಯು ಮೀಸಲಾತಿ ಸಂಬಂಧ ವರದಿಯನ್ನು ಸಿದ್ಧಪಡಿಸಿದ್ದು, ಯಾದವರು ಮತ್ತು ಕುರ್ಮಿಗಳಿಗೆ ಶೇ. 7 ಮಿಸಲಾತಿ ನೀಡುವಂತೆ ಶಿಫಾರಸು ಮಾಡಿದೆ.
ನ್ಯಾಯಮೂರ್ತಿ ರಾಘವೇಂದ್ರ ಕುಮಾರ್ ನೇತೃತ್ವದ ಸಾಮಾಜಿಕ ನ್ಯಾಯ ಸಮಿತಿಯು ಓಬಿಸಿಗಳನ್ನು 79 ಉಪ ಜಾತಿಗಳಾಗಿ ವರ್ಗೀಕರಿಸಿ ವರದಿ ಸಲ್ಲಿಸಿದೆ. ಈ ವರದಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹಾಗೂ ಬಿಜೆಪಿ ಮಿತ್ರಪಕ್ಷ ಎಸ್‌ಬಿಎಸ್‌ಪಿ ವರಿಷ್ಠ ಓಂ ಪ್ರಕಾಶ್ ರಾಜ್‌ಭರ್ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಿದ್ದಾರೆ.