ಪ್ರಧಾನಮಂತ್ರಿ ಯಾರು ಎನ್ನುವುದನ್ನು ಉತ್ತರಪ್ರದೇಶ ನಿರ್ಧರಿಸುತ್ತದೆ- ಮಾಯಾವತಿ

63ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಬಿಎಸ್ಪಿ ನಾಯಕಿ ಮಾಯಾವತಿ ಅಧಿಕಾರಕ್ಕೆ ಯಾರು ಬರುತ್ತಾರೆ ಎನ್ನುವುದನ್ನು ಉತ್ತರಪ್ರದೇಶ ನಿರ್ಧರಿಸುತ್ತದೆ ಎಂದು ತಿಳಿಸಿದರು.

Last Updated : Jan 15, 2019, 12:54 PM IST
ಪ್ರಧಾನಮಂತ್ರಿ ಯಾರು ಎನ್ನುವುದನ್ನು ಉತ್ತರಪ್ರದೇಶ ನಿರ್ಧರಿಸುತ್ತದೆ- ಮಾಯಾವತಿ  title=

ನವದೆಹಲಿ: 63ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಬಿಎಸ್ಪಿ ನಾಯಕಿ ಮಾಯಾವತಿ ಅಧಿಕಾರಕ್ಕೆ ಯಾರು ಬರುತ್ತಾರೆ ಎನ್ನುವುದನ್ನು ಉತ್ತರಪ್ರದೇಶ ನಿರ್ಧರಿಸುತ್ತದೆ ಎಂದು ತಿಳಿಸಿದರು.

ತಮ್ಮ ಹುಟ್ಟುಹಬ್ಬದ ನಿಮಿತ್ತ ಮಾತನಾಡಿದ ಮಾಯಾವತಿ " ಈ ಬಾರಿ ನನ್ನ ಹುಟ್ಟುಹಬ್ಬ ರಾಷ್ಟ್ರೀಯ ಚುನಾವಣೆ ಸಮಯದಲ್ಲಿ ಬಂದಿದೆ. ಈ ಉತ್ತರಪ್ರದೇಶವು ಕೇಂದ್ರದಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಮತ್ತು ಯಾರು ಪ್ರಧಾನ ಮಂತ್ರಿಯಾಗುತ್ತಾರೆ ಎನ್ನುವುದನ್ನು ನಿರ್ಧರಿಸುತ್ತದೆ.ಆದ್ದರಿಂದ ಎಸ್ಪಿ-ಬಿಎಸ್ಪಿ ಪಕ್ಷಗಳು ತಮ್ಮ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಈ ಬಾರಿ ಮೈತ್ರಿ ಮೂಲಕ ಅಭ್ಯರ್ಥಿಗಳನ್ನು ಗೆಲ್ಲಿಸುವತ್ತ ಕಾರ್ಯನಿರ್ವಹಿಸುತ್ತದೆ. ಇದು ನಿಜಕ್ಕೂ ಅತಿ ದೊಡ್ಡ ಗಿಫ್ಟ್ ಎಂದು ಮಾಯಾವತಿ ತಿಳಿಸಿದರು.  

ಎಸ್ಪಿ-ಬಿಎಸ್ಪಿ ಮೈತ್ರಿಕೂಟದ ಸಂದರ್ಭದಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿ ಯಾರು ಎನ್ನುವುದರ ಕುರಿತಾಗಿ ಮಾತನಾಡುತ್ತಾ ಅಖಿಲೇಶ್ ಯಾದವ್ " ಉತ್ತರ ಪ್ರದೇಶ ಈ ಹಿಂದೆ ಹಲವು ಪ್ರಧಾನಿಗಳನ್ನು ದೇಶಕ್ಕೆ ನೀಡಿದೆ, ನಿಮಗೆ ಗೊತ್ತು ನಾನು ಯಾರಿಗೆ ಬೆಂಬಲ ನೀಡುತ್ತೇನೆ ಎಂದು ಪರೋಕ್ಷವಾಗಿ ಮಾಯಾವತಿ ಪ್ರಧಾನಮಂತ್ರಿ ಅಭ್ಯರ್ಥಿಯಾಗುವುದಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳು ಇತ್ತೀಚೆಗಷ್ಟೇ 38-38 ರ ಸೂತ್ರದ ಅಡಿಯಲ್ಲಿ ಮೈತ್ರಿ ಮಾಡಿಕೊಂಡಿವೆ.ಇನ್ನುಳಿದ ನಾಲ್ಕರಲ್ಲಿ ಎರಡು ಸ್ಥಾನಗಳನ್ನು ಕಾಂಗ್ರೆಸ್ ನ ಗಾಂಧಿ ಕುಟುಂಬಕ್ಕೆ ಬಿಟ್ಟುಕೊಟ್ಟಿದೆ.ಉಳಿದ ಎರಡು ಸೀಟುಗಳನ್ನು ಮೈತ್ರಿಕೂಟಕ್ಕೆ  ಬಿಟ್ಟುಕೊಡಲಾಗಿದೆ.

Trending News