Watch: ತನ್ನ ನಾಲಿಗೆಗೆ ಮುತ್ತಿಟ್ಟು, ನೆಕ್ಕುವಂತೆ ಬಾಲಕನಿಗೆ ಸೂಚಿಸಿದ ದಲೈಲಾಮ! ಇದೆಂಥಾ ಅಸಹ್ಯ? ವಿಡಿಯೋ ನೋಡಿ

Dalai Lama viral video: ಆಧ್ಯಾತ್ಮಿಕ ನಾಯಕ ದಲೈಲಾಮಾ ಅವರಿಗೆ ಸಂಬಂಧಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ದಲೈಲಾಮಾ ಅವರಿಗೆ ಸಂಬಂಧಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೇ ತಡ ಆಕ್ರೋಶ ಮನೆಮಾಡಿದೆ.

Written by - Bhavishya Shetty | Last Updated : Apr 9, 2023, 07:44 PM IST
    • ಬೌದ್ಧಧರ್ಮ ಗುರು ದಲೈಲಾಮಾ ಅವರಿಗೆ ಸಂಬಂಧಪಟ್ಟ ವಿಡಿಯೋ ವೈರಲ್
    • ತನ್ನ ತುಟಿಗಳಿಗೆ ಮುತ್ತಿಟ್ಟು ನಾಲಿಗೆಯನ್ನು ನೆಕ್ಕುವಂತೆ ಸೂಚಿಸುತ್ತಿರುವ ವಿಡಿಯೋ ಇದಾಗಿದೆ
    • ಇನ್ನು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೇ ತಡ ಆಕ್ರೋಶ ಮನೆಮಾಡಿದೆ
Watch: ತನ್ನ ನಾಲಿಗೆಗೆ ಮುತ್ತಿಟ್ಟು, ನೆಕ್ಕುವಂತೆ ಬಾಲಕನಿಗೆ ಸೂಚಿಸಿದ ದಲೈಲಾಮ! ಇದೆಂಥಾ ಅಸಹ್ಯ? ವಿಡಿಯೋ ನೋಡಿ title=
Dalai Lama

Dalai Lama viral video: ಬೌದ್ಧಧರ್ಮ ಗುರು ದಲೈಲಾಮಾ ಅವರಿಗೆ ಸಂಬಂಧಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ಬಾಲಕನೊಬ್ಬನನ್ನು ಕರೆದು ಬಳಿಕ ತನ್ನ ತುಟಿಗಳಿಗೆ ಮುತ್ತಿಟ್ಟು ನಾಲಿಗೆಯನ್ನು ನೆಕ್ಕುವಂತೆ ಸೂಚಿಸುತ್ತಿರುವ ವಿಡಿಯೋ ಇದಾಗಿದೆ.

ಇದನ್ನೂ ಓದಿ: Astrology: ಸೂರ್ಯಪ್ರಿಯ ಈ ದಿನದಂದು ಇಂತಹ ಕೆಲಸ ಮಾಡಿ… ವರ್ಷಪೂರ್ತಿ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವುದು

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಆಧ್ಯಾತ್ಮಿಕ ನಾಯಕನಿಗೆ ಗೌರವ ಸಲ್ಲಿಸಲು ಆ ಬಾಲಕ ತಲೆ ಬಾಗಿದ್ದಾನೆ. ಈ ಸಂದರ್ಭದಲ್ಲಿ ದಲೈಲಾಮಾ ಹುಡುಗನ ತನ್ನ ತುಟಿಗಳಿಗೆ ಮುತ್ತಿಡುವಂತೆ ಸೂಚಿಸಿರುವುದನ್ನು ತೋರಿಸುತ್ತದೆ. "ನನ್ನ ನಾಲಿಗೆಯನ್ನು ನೆಕ್ಕಬಹುದೇ" ಎಂದು ಧರ್ಮಗುರು ಅಪ್ರಾಪ್ತ ಬಾಲಕನಲ್ಲಿ ಕೇಳುತ್ತಿರುವುದು ವೀಡಿಯೊದಲ್ಲಿ ಕಾಣುತ್ತಿದೆ.

ಇನ್ನು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೇ ತಡ ಆಕ್ರೋಶ ಮನೆಮಾಡಿದೆ. ವೀಡಿಯೊವನ್ನು ಹಂಚಿಕೊಂಡಿರುವ ಟ್ವಿಟ್ಟರ್ ಬಳಕೆದಾರ ಜೂಸ್ಟ್ ಬ್ರೋಕರ್ಸ್, "ದಲೈ ಲಾಮಾ ಬೌದ್ಧ ಸಮಾರಂಭದಲ್ಲಿ ಭಾರತೀಯ ಹುಡುಗನಿಗೆ ಮುತ್ತಿಡುತ್ತಾರೆ. ಅವರ ನಾಲಿಗೆಯನ್ನು ಸ್ಪರ್ಶಿಸಲು ಪ್ರಯತ್ನಿಸುತ್ತಾರೆ. ಅವರು ನಿಜವಾಗಿಯೂ ನನ್ನ ನಾಲಿಗೆಯನ್ನು ಹೀರು ಎಂದು ಹೇಳುತ್ತಾರೆ. ಆ ಬಾಲಕ ಅದನ್ನು ಏಕೆ ಮಾಡಬೇಕು?" ಎಂದು ಪ್ರಶ್ನಿಸಿದ್ದಾರೆ.

"ಇದು ಅನಪೇಕ್ಷಿತ ಮತ್ತು ಈ ದುಷ್ಕೃತ್ಯವನ್ನು ಯಾರೂ ಸಮರ್ಥಿಸಬಾರದು @ದಲೈಲಾಮಾ" ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರ ದೀಪಿಕಾ ಪುಷ್ಕರ್ ನಾಥ್ ಬರೆದಿದ್ದಾರೆ. "ನಾನು ಏನು ನೋಡುತ್ತಿದ್ದೇನೆ? ಇದು ದಲೈಲಾಮಾ ಅವರೆಯೇ? ಶಿಶುಕಾಮಕ್ಕಾಗಿ ಬಂಧಿಸಬೇಕಾಗಿದೆ. ಅಸಹ್ಯಕರ" ಎಂದು ಜಾಸ್ ಒಬೆರಾಯ್ ಎಂಬವರು ಟ್ವೀಟ್ ಮಾಡಿದ್ದಾರೆ.

2019 ರಲ್ಲಿ ದಲೈಲಾಮಾ ಅವರು ತಮ್ಮ ಉತ್ತರಾಧಿಕಾರಿ ಮಹಿಳೆಯಾಗಬೇಕಾದರೆ, ಅವರು ಆಕರ್ಷಕವಾಗಿರಬೇಕು ಎಂದು ಹೇಳಿ ದೊಡ್ಡ ವಿವಾದವನ್ನು ಹುಟ್ಟುಹಾಕಿದ್ದರು. “ಹೆಣ್ಣು ದಲೈಲಾಮಾ ಬಂದರೆ ಹೆಚ್ಚು ಆಕರ್ಷಕವಾಗಿರಬೇಕು” ಎಂದು ಹೇಳಿಕೆ ನೀಡಿದ್ದಾರೆ. ವಿಶ್ವದಾದ್ಯಂತ ಟೀಕೆಗೆ ಗುರಿಯಾದ ಹೇಳಿಕೆಯನ್ನು 2019ರಲ್ಲಿ ಬ್ರಿಟಿಷ್ ಬ್ರಾಡ್‌ಕಾಸ್ಟರ್‌’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಇದನ್ನೂ ಓದಿ: Relationship Tips: ದೈಹಿಕ ಸಂಬಂಧ ಬೆಳೆಸುವಾಗ ಪುರುಷರು ಈ ಕೆಲಸಗಳನ್ನು ಮಾಡಲೇಬಾರದು…!

ಕಳೆದ ತಿಂಗಳು, ದಲೈ ಲಾಮಾ ಅವರು ಯುಎಸ್ ಮೂಲದ ಮಂಗೋಲಿಯನ್ ಹುಡುಗನನ್ನು 10 ನೇ ಖಲ್ಖಾ ಜೆಟ್ಸನ್ ದಂಪಾ ರಿಂಪೋಚೆ ಎಂದು ಹೆಸರಿಸಿದ್ದರು, ಇದು ಟಿಬೆಟಿಯನ್ ಬೌದ್ಧಧರ್ಮದಲ್ಲಿ ಮೂರನೇ ಅತ್ಯುನ್ನತ ಶ್ರೇಣಿಯಾಗಿದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News