ಮತ್ತೆ ಬ್ಯಾಲೆಟ್ ಪೇಪರ್ ಬಳಕೆ ಸಾಧ್ಯವೇ ಇಲ್ಲ: ಮುಖ್ಯ ಚುನಾವಣಾ ಆಯುಕ್ತರ ಸ್ಪಷ್ಟನೆ

ವಿದ್ಯುನ್ಮಾನ ಮತ ಯಂತ್ರವನ್ನು (ಇವಿಎಂ) ತಾಂತ್ರಿಕ ತೊಂದರೆಗಳಿಂದ ರಕ್ಷಿಸಲು ತೆಗೆದುಕೊಂಡ ಕ್ರಮಗಳನ್ನು ಉಲ್ಲೇಖಿಸಿ, ಅರೋರಾ "ಈ ಯಂತ್ರವು ಅತ್ಯಂತ ಪ್ರಬಲ ತಾಂತ್ರಿಕ ಭದ್ರತಾ ಕ್ರಮಗಳೊಂದಿಗೆ ದೇಶದ ರಕ್ಷಣಾ ಇಲಾಖೆಗೆ ಸಾಕಷ್ಟು ಶ್ರಮಿಸಿರುವ ಎರಡು ಸಾರ್ವಜನಿಕ ಕಂಪನಿಗಳಿಂದ ಮಾಡಲ್ಪಟ್ಟಿದೆ"

Last Updated : Jan 24, 2019, 03:42 PM IST
ಮತ್ತೆ ಬ್ಯಾಲೆಟ್ ಪೇಪರ್ ಬಳಕೆ ಸಾಧ್ಯವೇ ಇಲ್ಲ: ಮುಖ್ಯ ಚುನಾವಣಾ ಆಯುಕ್ತರ ಸ್ಪಷ್ಟನೆ title=
Pic Courtesy: ANI

ನವದೆಹಲಿ: ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ) ಯ ವಿಶ್ವಾಸಾರ್ಹತೆ ಬಗೆಗೆ ಉದ್ಭವಿಸಿರುವ ಪ್ರಶ್ನೆಗಳು ಮತ್ತು ಮತಪತ್ರ ಬಳಸಿ ಚುನಾವಣೆಯನ್ನು ನಡೆಸಲು ವಿವಿಧ ಪಕ್ಷಗಳ ಬೇಡಿಕೆಯನ್ನು ತಿರಸ್ಕರಿಸಿರುವ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಮತ್ತೆ ಬ್ಯಾಲೆಟ್ ಪೇಪರ್ ಬಳಕೆ ಸಾಧ್ಯವೇ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

'ಚುನಾವಣಾ ಪ್ರಕ್ರಿಯೆಯನ್ನು ಮೃದುಗೊಳಿಸುವ' ವಿಷಯದ ಬಗ್ಗೆ ಅಂತರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಸುನೀಲ್ ಆರೋರಾ, "ದೇಶ ಮತ್ತೆ ಬ್ಯಾಲೆಟ್ ಪೇಪರ್ ಯುಗಕ್ಕೆ ಹೋಗುವುದಿಲ್ಲ ಎಂದು ನಾನು ಸ್ಪಷ್ಟಪಡಿಸಲು ಇಚ್ಚಿಸುತ್ತೇನೆ" ಎಂದರು.

ವಿದ್ಯುನ್ಮಾನ ಮತ ಯಂತ್ರವನ್ನು (ಇವಿಎಂ) ತಾಂತ್ರಿಕ ತೊಂದರೆಗಳಿಂದ ರಕ್ಷಿಸಲು ತೆಗೆದುಕೊಂಡ ಕ್ರಮಗಳನ್ನು ಉಲ್ಲೇಖಿಸಿ, ಅರೋರಾ "ಈ ಯಂತ್ರವು ಅತ್ಯಂತ ಪ್ರಬಲ ತಾಂತ್ರಿಕ ಭದ್ರತಾ ಕ್ರಮಗಳೊಂದಿಗೆ ದೇಶದ ರಕ್ಷಣಾ ಇಲಾಖೆಗೆ ಸಾಕಷ್ಟು ಶ್ರಮಿಸಿರುವ ಎರಡು ಸಾರ್ವಜನಿಕ ಕಂಪನಿಗಳಿಂದ ಮಾಡಲ್ಪಟ್ಟಿದೆ" ಎಂದು ಹೇಳಿದರು.

ಇವಿಎಂ ವಿಶ್ವಾಸಾರ್ಹತೆ ಉದ್ಭವಿಸಿರುವ ಪ್ರಶ್ನೆಗಳ ಬಗ್ಗೆ ಮಾತನಾಡಿದ ಅವರು ಬ್ಯಾಲೆಟ್ ಪೇಪರ್ ಬಳಕೆಗೆ ಒತ್ತಾಯಿಸುತ್ತಿರುವವರ ಹೆಸರು ತೆಗೆದುಕೊಳ್ಳದೆ "ನಾವು ಅದನ್ನು(ಇವಿಎಂ) ಫುಟ್ಬಾಲ್ ಮಾಡುವುದೇಕೆ" ಎಂದರಲ್ಲದೆ, ಇವಿಎಂ ಮತ್ತು VVPAT ಬಗೆಗಿನ ಯಾವುದೇ ಟೀಕೆ, ವಿಮರ್ಶೆ ಮತ್ತು ಪ್ರತಿಕ್ರಿಯೆಗೆ ಚುನಾವಣಾ ಆಯೋಗ ತೆರೆದ ಮನಸ್ಸನ್ನು ಹೊಂದಿದೆ. ಅದೇ ಸಮಯದಲ್ಲಿ ನಾವು ಯಾರಿಂದಲೂ ಒತ್ತಡಕ್ಕೊಳಗಾಗುವುದಿಲ್ಲ ಎಂದು ಅರೋರಾ ಹೇಳಿದರು.

Trending News