12 ವರ್ಷದ ಬಾಲಕ ಜೈನ ಮುನಿಯಾದಾಗ!

   

Updated: Apr 19, 2018 , 01:05 PM IST
12 ವರ್ಷದ ಬಾಲಕ ಜೈನ ಮುನಿಯಾದಾಗ!
photo courtesy:ANI

ಸೂರತ್: ಗುರುವಾರ ಸೂರತ್ ನಲ್ಲಿ 12 ವರ್ಷದ ಬಾಲಕ ಭವ್ಯಾ ಷಾ ಜೈನ ಮುನಿಯಾಗುತ್ತಿದ್ದಾನೆ.

ಈ ಕುರಿತಾಗಿ ANIಗೆ ಮಾತನಾಡಿದ 12 ವರ್ಷ ವಯಸ್ಸಿನ ಭವ್ಯಾ ಷಾ "ದೇವರಿಂದ ತೋರಿಸಲ್ಪಟ್ಟ ಸತ್ಯದ ಮಾರ್ಗವನ್ನು ಆಯ್ದುಕೊಳ್ಳಲು ನನಗೆ ಸಂತಸವಾಗುತ್ತಿದೆ"ಎಂದು ತಿಳಿಸಿದರು.

ನಾನು ಈಗ ಕುಟುಂಬವನ್ನು ತೊರೆಯುತ್ತಿದ್ದೇನೆ,ಅವರು ಕೂಡ ಇದೆ ನಿಜವಾದ ಮಾರ್ಗ ಎಂದು ತಿಳಿಸಿದ್ದರು. ಮುಂದೆ ನನ್ನ ತಂದೆ ಮತ್ತು ತಾಯಿ ಕೂಡ ಒಂದು ದಿನ ಈ ಮಾರ್ಗದಲ್ಲಿ ಬರುತ್ತಾರೆ ಎಂದರು. ಅವನ ತಂದೆ, ಡೈಮಂಡ್ ವ್ಯಾಪಾರಿ ದಿಪೇಶ್ ಷಾ, "ಭವ್ಯ ದಿಕ್ಷೆಯನ್ನು ತೆಗೆದುಕೊಳ್ಳುವುದಕ್ಕೆ ನಮ್ಮ ಕುಟುಂಬಕ್ಕೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

ಆತನು  ನಾನು ದುಃಖಿತನಾಗಿದ್ದರ ಬಗ್ಗೆ ಎಂದು ಕೇಳಿದಾಗ, ಖಂಡಿತ ಇಲ್ಲ! ನನಗೆ ಸಂತೋಷವಾಗಿದೆ, ನಾಲ್ಕು ವರ್ಷಗಳ ಹಿಂದೆ ನನ್ನ ಮಗಳು ಕೂಡ 12 ವರ್ಷ ವಯಸ್ಸಿನಲ್ಲೇ ಈ ದಿಕ್ಷೆಯನ್ನು ತೆಗೆದುಕೊಂಡಿದ್ದಳು.400-450 ಜೈನ ಸನ್ಯಾಸಿಗಳು ಮತ್ತು ಸುಮಾರು 7000 ಜನರ ಉಪಸ್ಥಿತಿಯಲ್ಲಿ ಭವ್ಯ ದಕ್ಷವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದರು.