ಐಐಟಿ-ಬಾಂಬೆಯ ಉತ್ಸಾಹಭರಿತ ವಿದ್ಯಾರ್ಥಿ ಮನೋಹರ್ ಪರ್ರಿಕರ್!

ಪ್ರಸಿದ್ಧ ಇನ್ಸ್ಟಿಟ್ಯೂಟ್ ನ ಓರ್ವ ವಿದ್ಯಾರ್ಥಿಯಾಗಿದ್ದ ಮನೋಹರ್ ಪರ್ರಿಕರ್, ವಿದ್ಯಾರ್ಥಿಗಳನ್ನು ರಾಜಕೀಯ ಮತ್ತು ಸೈನ್ಯಕ್ಕೆ ಸೇರುವಂತೆ ಕರೆ ನೀಡಿದ್ದರು.

Last Updated : Mar 18, 2019, 10:16 AM IST
ಐಐಟಿ-ಬಾಂಬೆಯ ಉತ್ಸಾಹಭರಿತ ವಿದ್ಯಾರ್ಥಿ ಮನೋಹರ್ ಪರ್ರಿಕರ್! title=
File Image

ಮುಂಬೈ: ಭಾನುವಾರ ನಿಧನರಾದ ಮಾಜಿ ರಕ್ಷಣಾ ಸಚಿವ ಹಾಗೂ ಗೋವಾ ಸಿಎಂ ಮನೋಹರ್ ಪರ್ರಿಕರ್, ಐಐಟಿ ಬಾಂಬೆಯ ಉತ್ಸಾಹಭರಿತ ವಿದ್ಯಾರ್ಥಿ ಎಂದು ಇನ್ಸ್ಟಿಟ್ಯೂಟ್ ತಿಳಿಸಿದೆ.

2017 ರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆಯ 55 ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮನೋಹರ್ ಪರ್ರಿಕರ್, ಪದವೀದರರು ಸಾಮಾಜಿಕ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಉದ್ಯೋಗಗಳನ್ನು ತೆಗೆದುಕೊಳ್ಳಲು ಹೇಳಿದರು.

ಮಾಜಿ ಐಐಟಿ-ಬಿ ವಿದ್ಯಾರ್ಥಿಯಾಗಿದ್ದ ಮನೋಹರ್ ಪರ್ರಿಕರ್, ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ರಾಜಕೀಯ ಮತ್ತು ಸೈನ್ಯಕ್ಕೆ ಸೇರುವಂತೆ ಕರೆ ನೀಡಿದ್ದರು.

ಸಮಾರಂಭದಲ್ಲಿ ಸುಮಾರು 2,600 ವಿದ್ಯಾರ್ಥಿಗಳಿಗೆ ಪದವಿ ವಿತರಿಸಲಾಯಿತು. ಆ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ್ದ ಪರ್ರಿಕರ್, "ಐಐಟಿ ಪದವೀಧರರು ಯಾಕೆ ದೇಶದಲ್ಲಿ ಅತ್ಯುತ್ತಮ ಎಂಜಿನಿಯರಿಂಗ್ ಶಿಕ್ಷಣವನ್ನು ತೆಗೆದುಕೊಳ್ಳುತ್ತಾರೆ ಮತ್ತು ಈ ಇಂತಹ ಕಾಲೇಜುಗಳನ್ನು ಹೆಚ್ಚು ಹೆಚ್ಚಾಗಿ  ನಡೆಸುತ್ತಿದ್ದಾರೆ. ಅವರ ಗುಣಮಟ್ಟವನ್ನು ರೂಪಾಂತರಿಸುವುದಿಲ್ಲವೇ?"  ಎಂದು ಪ್ರಶ್ನಿಸಿದ್ದರು ಎಂದು ಐಐಟಿ ಬಾಂಬೆ ಪರ್ರಿಕರ್ ಅವರನ್ನು ನೆನೆದಿದೆ.

ಗೋವಾ ಸಿಎಂ ಮನೋಹರ್ ಪರ್ರಿಕರ್ ಅವರ ನಿಧನ ಐಐಟಿ ಬಾಂಬೆಯ ನಮ್ಮೆಲ್ಲರಿಗೂ ಆಘಾತವಾಗಿದೆ. ಇವರು ಇನ್ಸ್ಟಿಟ್ಯೂಟ್ ನ ವಿಶಿಷ್ಟ ವಿದ್ಯಾರ್ಥಿಯಾಗಿದ್ದರು. ಐಐಟಿ ಬಾಂಬೆಯ ಹಲವು ಕ್ಷೇತ್ರಗಳನ್ನು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಐಐಟಿ ಗೋವಾದ ಪ್ರಾರಂಭದಲ್ಲೂ ಸಹ ಪರ್ರಿಕರ್ ಪಾತ್ರ ಅಮೋಘವಾದುದು ಎಂದು ಐಐಟಿ ಬಾಂಬೆ ತನ್ನ ಹಳೆಯ ವಿದ್ಯಾರ್ಥಿಯ ನಿಧನಕ್ಕೆ ಕಂಬನಿ ಮಿಡಿದಿದೆ.
 

Trending News