ನವದೆಹಲಿ: ಇಂದು ಭಾರತಕ್ಕೆ ಬಹಳ ವಿಶೇಷವಾದ ದಿನ, ಇಡೀ ದೇಶವು 73 ವರ್ಷಗಳ ಸ್ವಾತಂತ್ರ್ಯವನ್ನು ಪೂರೈಸಿದ ಸಂತೋಷವನ್ನು ಆಚರಿಸುತ್ತಿದೆ. ಆದ್ದರಿಂದ ದೇಶದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕೆಂಪು ಕೋಟೆಯಲ್ಲಿ 7 ನೇ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದರು. ಈ ಸಂದರ್ಭದಲ್ಲಿ ಕೆಂಪು ಕೋಟೆಯ ಕೆಲವು ಪ್ರಮುಖ ಇತಿಹಾಸ ಮತ್ತು ಕೆಲವು ಪ್ರಮುಖ ಸಂಗತಿಗಳನ್ನು ತಿಳಿದುಕೊಳ್ಳೋಣ.
ಯಾವ ಪ್ರಧಾನ ಮಂತ್ರಿ ಕೆಂಪುಕೋಟೆಯಲ್ಲಿ ಹೆಚ್ಚು ಬಾರಿ ತ್ರಿವರ್ಣವನ್ನು ಹಾರಿಸಿದರು?
- ಜವಾಹರಲಾಲ್ ನೆಹರು - 17
- ಇಂದಿರಾ ಗಾಂಧಿ - 16
- ಮನಮೋಹನ್ ಸಿಂಗ್ - 10
- ನರೇಂದ್ರ ಮೋದಿ - 7
- ಅಟಲ್ ಬಿಹಾರಿ ವಾಜಪೇಯಿ - 6
- ರಾಜೀವ್ ಗಾಂಧಿ - 5
- ಪಿ.ವಿ.ನರಸಿಂಹ ರಾವ್ - 5
- ಲಾಲ್ ಬಹದ್ದೂರ್ ಶಾಸ್ತ್ರಿ - 2
- ಮೊರಾರ್ಜಿ ದೇಸಾಯಿ - 2
- ಚೌಧರಿ ಚರಣ್ ಸಿಂಗ್ - 1
- ವಿ.ಪಿ.ಸಿಂಗ್ - 1
- ಎಚ್‌ಡಿ ದೇವೇಗೌಡ - 1
- ಇಂದ್ರ ಕುಮಾರ್ ಗುಜ್ರಾಲ್ - 1
ಆಗಸ್ಟ್ 15 ರಂದೇ ಭಾರತಕ್ಕೆ ಸ್ವಾತಂತ್ರ್ಯ ಬರಲು ಕಾರಣ ? ಇಲ್ಲಿದೆ ಆಸಕ್ತಿದಾಯಕ ಸಂಗತಿ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಧಾನಿ ಹುದ್ದೆಗೇರಿ ಇಂದು 2273 ದಿನಗಳು ಪೂರ್ಣಗೊಂಡಿವೆ. ಇತರ ಪ್ರಧಾನ ಮಂತ್ರಿಗಳ ಅಧಿಕಾರಾವಧಿಯ ನಿರ್ದಿಷ್ಟ ಮಾಹಿತಿ...
- ಜವಾಹರಲಾಲ್ ನೆಹರು - 6130 ದಿನಗಳು
- ಇಂದಿರಾ ಗಾಂಧಿ - 5829 ದಿನಗಳು
- ಮನಮೋಹನ್ ಸಿಂಗ್ - 3656 ದಿನಗಳು
- ಅಟಲ್ ಬಿಹಾರಿ ವಾಜಪೇಯಿ - 2272 ದಿನಗಳು
- ರಾಜೀವ್ ಗಾಂಧಿ - 1857 ದಿನಗಳು
- ಪಿ.ವಿ.ನರಸಿಂಹ ರಾವ್ - 1791 ದಿನಗಳು
- ಮೊರಾರ್ಜಿ ದೇಸಾಯಿ - 856 ದಿನಗಳು
- ಲಾಲ್ ಬಹದ್ದೂರ್ ಶಾಸ್ತ್ರಿ - 581 ದಿನಗಳು
- ವಿಶ್ವನಾಥ್ ಪ್ರತಾಪ್ ಸಿಂಗ್ - 343 ದಿನಗಳು
ಕೆಂಪು ಕೋಟೆಯಲ್ಲಿ ತ್ರಿವರ್ಣ ಇತಿಹಾಸ:
ಸ್ವಾತಂತ್ರ್ಯ ದಿನದಂದು ಪ್ರಧಾನಿ ಕೆಂಪು ಕೋಟೆಯಲ್ಲಿ ಧ್ವಜವನ್ನು ಹಾರಿಸುತ್ತಾರೆ. ತ್ರಿವರ್ಣವನ್ನು ಹಾರಿಸಿದ ನಂತರ ಪ್ರಧಾನ ಮಂತ್ರಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾರೆ. ಆಗಸ್ಟ್ 15, 1947 ರಂದು ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ಪ್ರಧಾನಿ ಜವಾಹರಲಾಲ್ ನೆಹರು ಕೆಂಪು ಕೋಟೆಯಿಂದ ತ್ರಿವರ್ಣವನ್ನು ಹಾರಿಸಿದರು. ಸ್ವಾತಂತ್ರ್ಯ ಬಂದ ನಂತರ ಪ್ರತಿ ವರ್ಷ ಆಗಸ್ಟ್ 15 ರಂದು ನಮ್ಮ ಧ್ವಜವನ್ನು 73 ಬಾರಿ ಕೆಂಪುಕೋಟೆಯಲ್ಲಿ ಹಾರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಿಂದ ಸುದೀರ್ಘ ಭಾಷಣ ಮಾಡಿದ್ದಾರೆ. 15 ಆಗಸ್ಟ್ 2016 ರಂದು ಪ್ರಧಾನಿ ಮೋದಿ 94 ನಿಮಿಷಗಳ ಭಾಷಣ ಮಾಡಿದರು.
74ನೇ ಸ್ವಾತಂತ್ರ್ಯೋತ್ಸವ: ಪ್ರಧಾನಿ ಮೋದಿ ಭಾಷಣ 10 ಪ್ರಮುಖ ವಿಷಯಗಳಿವು
ಆಗಸ್ಟ್ 15 ರಂದು ಸ್ವಾತಂತ್ರ್ಯ ಪಡೆದ ದೇಶಗಳು:
ಆಗಸ್ಟ್ 15 ರಂದು ಭಾರತಕ್ಕೆ ಮಾತ್ರ ಸ್ವಾತಂತ್ರ್ಯ ದೊರೆತಿಲ್ಲ. ಈ ದಿನಾಂಕದಂದು ಭಾರತವನ್ನು ಹೊರತುಪಡಿಸಿ 5 ಇತರ ದೇಶಗಳು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತವೆ. ಅವುಗಳೆಂದರೆ...
- ದಕ್ಷಿಣ ಕೊರಿಯಾ
- ಉತ್ತರ ಕೊರಿಯಾ
- ಬಹ್ರೇನ್
- ಲಿಚ್ಟೆನ್‌ಸ್ಟೈನ್
- ಕಾಂಗೋ