Uttarakhand: ಯಾರಾಗಲಿದ್ದಾರೆ ರಾಜ್ಯದ 9ನೇ ಮುಖ್ಯಮಂತ್ರಿ?

ತ್ರಿವೇಂದ್ರ ಸಿಂಗ್ ರಾವತ್ ಅವರ ರಾಜೀನಾಮೆಯ ನಂತರ ಉತ್ತರಾಖಂಡದ ಹೊಸ ಮುಖ್ಯಮಂತ್ರಿ ಆಯ್ಕೆ ಕಸರತ್ತು ಆರಂಭವಾಗಿದೆ. ಬೆಳಿಗ್ಗೆ 10 ಗಂಟೆಗೆ ರಾಜ್ಯ ಪಕ್ಷದ ಪ್ರಧಾನ ಕಚೇರಿಯಲ್ಲಿ ವಿಧಾನಸಭಾ ಪಕ್ಷದ ಸಭೆ ಕರೆಯಲಾಗಿದ್ದು, ಇದರಲ್ಲಿ ಎಲ್ಲ ಶಾಸಕರ ಸಮ್ಮುಖದಲ್ಲಿ ಹೊಸ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ.

Written by - Yashaswini V | Last Updated : Mar 10, 2021, 11:00 AM IST
  • ಇಂದು ಉತ್ತರಾಖಂಡದ ಹೊಸ ಮುಖ್ಯಮಂತ್ರಿಯ ಆಯ್ಕೆ
  • ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗುವುದು
  • ಉಪ ಮುಖ್ಯಮಂತ್ರಿಯನ್ನೂ ಕೂಡ ಆಯ್ಕೆಯಾಗಬಹುದು
Uttarakhand: ಯಾರಾಗಲಿದ್ದಾರೆ ರಾಜ್ಯದ 9ನೇ ಮುಖ್ಯಮಂತ್ರಿ?  title=
Uttarakhand Chief Minister

ಡೆಹ್ರಾಡೂನ್: ಉತ್ತರಾಖಂಡ ಬಿಜೆಪಿಯಲ್ಲಿ ಕಳೆದ ಮೂರು ದಿನಗಳಿಂದ ರಾಜಕೀಯ ಕೋಲಾಹಲ ಉಂಟಾದ ನಂತರ ತ್ರಿವೇಂದ್ರ ಸಿಂಗ್ ರಾವತ್ (Trivendra Singh Rawat) ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು. ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ನೀಡಿದ ನಂತರ ಮುಖ್ಯಮಂತ್ರಿ ಹುದ್ದೆಗೆ ಲಾಬಿ ಆರಂಭವಾಗಿದೆ. ರಾವತ್ ಅವರೊಂದಿಗೆ ನಿಕಟ ಮತ್ತು ರಾಜ್ಯದ ಉನ್ನತ ಶಿಕ್ಷಣ ಮತ್ತು ಸಹಕಾರ ಸಚಿವರಾಗಿರುವ ಧನ್ ಸಿಂಗ್ ರಾವತ್  (Dhan Singh Rawat) ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಲ್ಲಿ ಮುಂದಿದ್ದಾರೆ. ಅವರಲ್ಲದೆ ಲೋಕಸಭಾ ಸಂಸದ ಅಜಯ್ ಭಟ್ (Ajay Bhatt), ರಾಜ್ಯಸಭಾ ಸಂಸದ ಅನಿಲ್ ಬಲೂನಿ (Anil Baluni), ರಾಜ್ಯ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್(Satpal Maharaj), ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ (Ramesh Pokhriyal) ಅವರ ಹೆಸರು ಕೂಡ ಮುಖ್ಯಮಂತ್ರಿ ರೇಸ್ ನಲ್ಲಿ ಕೇಳಿಬರುತ್ತಿದೆ.

ಇಂದು ಶಾಸಕಾಂಗ ಪಕ್ಷದ ಸಭೆ:
ದೆಹಲಿಯಲ್ಲಿ ಬಿಜೆಪಿ ಕೇಂದ್ರ ನಾಯಕರನ್ನು ಭೇಟಿಯಾದ ನಂತರ ಮಂಗಳವಾರ ಡೆಹ್ರಾಡೂನ್‌ಗೆ ಮರಳಿದ ತ್ರಿವೇಂದ್ರ ಸಿಂಗ್ ರಾವತ್  (Trivendra Singh Rawat), ಸಂಜೆ ನಾಲ್ಕು ಗಂಟೆಗೆ ರಾಜ್ ಭವನವನ್ನು ತಲುಪಿದರು ಮತ್ತು ಅವರು ರಾಜ್ಯಪಾಲ ಬೇಬಿ ರಾಣಿ ಮೌರ್ಯ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರು. ರಾವತ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ ರಾಜ್ಯಪಾಲರು, ರಾಜ್ಯದ ಹೊಸ ಮುಖ್ಯಮಂತ್ರಿ ಆಯ್ಕೆಯಾಗುವವರೆಗೂ ಈ ಹುದ್ದೆಯ ಜವಾಬ್ದಾರಿಗಳನ್ನು ನಿರ್ವಹಿಸುವಂತೆ ಕೇಳಿಕೊಂಡರು.  ಇಂದು (ಬುಧವಾರ) ಬೆಳಿಗ್ಗೆ 10 ಗಂಟೆಗೆ ಶಾಸಕಾಂಗ ಪಕ್ಷದ ಸಭೆಯನ್ನು ರಾಜ್ಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಕರೆಯಲಾಗಿದೆ ಎಲ್ಲಾ ಶಾಸಕರ ಉಪಸ್ಥಿತಿಯಲ್ಲಿ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ಕೇಂದ್ರ ವೀಕ್ಷಕರಾಗಿ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ಛತ್ತೀಸ್‌ಗಢ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ (Raman Singh) ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ - 19 ವರ್ಷದ ವಿದ್ಯಾರ್ಥಿನಿ ಈಗ ಉತ್ತರಾಖಂಡದ ಮುಖ್ಯಮಂತ್ರಿ...!

ರಾಜೀನಾಮೆ ಬಗ್ಗೆ ರಾವತ್ ಏನು ಹೇಳಿದರು?
ರಾಜೀನಾಮೆ ನೀಡಿದ ನಂತರ ಮಾತನಾಡಿದ ರಾವತ್, 'ಈಗ ಬೇರೊಬ್ಬರು ಈ ಅವಕಾಶವನ್ನು ನೀಡಬೇಕೆಂದು ಪಕ್ಷ ಒಟ್ಟಾಗಿ ನಿರ್ಧರಿಸಿದೆ. ನನ್ನ ಒಂಬತ್ತು ವರ್ಷಗಳ ಅಧಿಕಾರಾವಧಿಯು ಪೂರ್ಣಗೊಳ್ಳಲು ಕೇವಲ ಒಂಬತ್ತು ದಿನಗಳು ಬಾಕಿ ಇದೇ ಎಂದು ಹೇಳಿದರು. ಅವರ ರಾಜೀನಾಮೆಗೆ ಕಾರಣವೇನು ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾವತ್, "ಇದು ಪಕ್ಷದ ಸಾಮೂಹಿಕ ನಿರ್ಧಾರ, ಸೂಕ್ತವಾದ ಉತ್ತರ ಪಡೆಯಲು ನೀವು ದೆಹಲಿಗೆ ಹೋಗಬೇಕಾಗಿದೆ" ಎಂದು ಹೇಳಿದರು. ಅಲ್ಲದೆ ತಮ್ಮ ಉತ್ತರಾಧಿಕಾರಿಗೆ ರಾವತ್ ಶುಭ ಹಾರೈಸಿದರು. ನಾನು ದೀರ್ಘಾವಧಿಯಿಂದ ಸಮಾಜ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕನಾಗಿಯೂ ಕೆಲಸ ಮಾಡಿದ್ದೇನೆ ಎಂದು  ತ್ರಿವೇಂದ್ರ ಸಿಂಗ್ ರಾವತ್ ತಿಳಿಸಿದರು.

ಅಸಮಾಧಾನದ ಧ್ವನಿ ಹೆಚ್ಚುತ್ತಲೇ ಇತ್ತು:
ಮಾರ್ಚ್ 18, 2017 ರಂದು ಪ್ರಮಾಣವಚನ ಸ್ವೀಕರಿಸಿದಾಗಿನಿಂದ, ಕ್ಯಾಬಿನೆಟ್ ವಿಸ್ತರಣೆ ಸೇರಿದಂತೆ ಕೆಲವು ವಿಷಯಗಳ ಬಗ್ಗೆ ಬಿಜೆಪಿ (BJP) ಶಾಸಕರಲ್ಲಿ ಸಾಕಷ್ಟು ಅಸಮಾಧಾನವಿದೆ, ಆದರೆ ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯ ಊಹಾಪೋಹಗಳ ಮಧ್ಯೆ  ಶನಿವಾರ ಸಂಜೆ ರಮಣ್ ಸಿಂಗ್ ಮತ್ತು ಉತ್ತರಾಖಂಡ ಪಕ್ಷದ ವ್ಯವಹಾರಗಳ ಉಸ್ತುವಾರಿ ದುಶ್ಯಂತ್ ಕುಮಾರ್ ಸಿಂಗ್ ಇದ್ದಕ್ಕಿದ್ದಂತೆ ಡೆಹ್ರಾಡೂನ್ ತಲುಪಿದರು ಮತ್ತು ಒಂದು ಪ್ರಮುಖ ಗುಂಪು ಸಭೆ ನಡೆಸಿದರು. ರಾಜ್ಯ ಪಕ್ಷದ ಕೋರ್ ಕಮಿಟಿ ಈ ಸಭೆ ಪೂರ್ವ ನಿರ್ಧರಿತ ಸಭೆಯಾಗಿರಲಿಲ್ಲ ಮತ್ತು ರಾಜ್ಯದ ಹೊಸದಾಗಿ ರೂಪುಗೊಂಡ ಬೇಸಿಗೆ ರಾಜಧಾನಿ ಗಾರ್ಸೈನ್‌ನಲ್ಲಿ ರಾಜ್ಯ ವಿಧಾನಸಭೆಯ ಪ್ರಮುಖ ಬಜೆಟ್ ಅಧಿವೇಶನ ನಡೆಯುತ್ತಿರುವ ಸಮಯದಲ್ಲಿ ಈ ಸಭೆ ನಡೆಯಿತು.

ಇದನ್ನೂ ಓದಿ - Uttarakhand Glacier Tragedy: ಚಮೋಲಿಯಲ್ಲಿ ಗ್ಲೇಶಿಯರ್ ಕುಸಿತ, ಭಾರಿ ಪ್ರಮಾಣದ ಹಾನಿಯ ಅಲರ್ಟ್ ಜಾರಿ

ಸಭೆಯ ಮಾಹಿತಿ ಪಡೆದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಕೂಡಲೇ ಗಾರ್ಸೇನ್‌ನಿಂದ ಡೆಹ್ರಾಡೂನ್‌ಗೆ ಮರಳಬೇಕಾಯಿತು. ಬಜೆಟ್ ಅಂಗೀಕಾರವಾದ ಕೂಡಲೇ ಅಧಿವೇಶನವೂ ಅನಿರ್ಧಿಷ್ಟ ಅವಧಿಗೆ ಮುಂದೂಡಲ್ಪಟ್ಟಿತು ಮತ್ತು ಬಿಜೆಪಿ ಶಾಸಕರನ್ನು ಕೂಡ ಗ್ಯಾನ್‌ಸೈನ್‌ನಿಂದ ಡೆಹ್ರಾಡೂನ್‌ಗೆ ಕರೆಸಲಾಯಿತು. ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ನಡೆದ ಕೋರ್ ಗ್ರೂಪ್ ಸಭೆಯಲ್ಲಿ ರಾಜ್ಯದ ಹೆಚ್ಚಿನ ಸಂಸದರು ಮತ್ತು ರಾಜ್ಯ ಸಂಘಟನೆಯೊಂದಿಗೆ ಪ್ರಮುಖ ನಾಯಕರು ಉಪಸ್ಥಿತರಿದ್ದರು. ಸೋಮವಾರವೂ, ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಗಾರ್ಸೇನ್ ಮತ್ತು ಡೆಹ್ರಾಡೂನ್‌ನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಆದರೆ ಹೈಕಮಾಂಡ್‌ನ ಕರೆಯ ಮೇರೆಗೆ ಅವರು ದೆಹಲಿಗೆ ಹೋಗಬೇಕಾಗಿತ್ತು, ಮಂಗಳವಾರ ಅಲ್ಲಿಂದ ಹಿಂದಿರುಗಿದ ಸಿಎಂ ಬಳಿಕ ರಾಜೀನಾಮೆ ಸಲ್ಲಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News