ವರದಕ್ಷಿಣೆ ಕಿರುಕುಳ: ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

ಎಂಟು ತಿಂಗಳ ಹಿಂದಷ್ಟೇ ಸುಮಿತ್ ಕುಮಾರ್ ಎಂಬವರನ್ನು ವಿವಾಹವಾಗಿದ್ದ ರಶ್ಮಿಯೇ ಆತ್ಮಹತ್ಯೆಗೆ ಶರಣಾದ ದುರ್ದೈವಿ.

Updated: Aug 19, 2019 , 11:47 AM IST
ವರದಕ್ಷಿಣೆ ಕಿರುಕುಳ: ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

ಮುಜಾಫರನಗರ: ದೇಶದಲ್ಲಿ ವರದಕ್ಷಿಣೆ ಕಿರುಕುಳದ ವಿರುದ್ಧ ಕಾನೂನಿಗೆ ತಿದ್ದುಪಡಿಗಳು ಜಾರಿಗೆ ಬಂದಿದ್ದರೂ, ಕಠಿಣ ಕ್ರಮಗಳನ್ನು ಜರುಗಿಸಲಾಗಿದ್ದರೂ ಸಹ ಇನ್ನೂ ಈ ಸಾಮಾಜಿಕ ಪಿಡುಗು ಅಂತ್ಯವಾಗಿಲ್ಲ. ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಲೇ ಇದೆ.

ಇಂದಿಗ ಇಂತಹದ್ದೇ ಓಂದು ಪ್ರಕರಣ ಉತ್ತರಪ್ರದೇಶದ ಮುಜಾಫರನಗರ ಜಿಲ್ಲೆಯಲ್ಲಿ ನಡೆದಿದೆ. ಗಂಡನ ಮನೆಯವರಿಂದ ವರದಕ್ಷಿಣೆ ಕಿರುಕುಳ ತಾಳಲಾರದೆ ಮಹಿಳೆಯೊಬ್ಬರು ಮನೆಯ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸೋಮವಾರ ಪೊಲೀಸರು ತಿಳಿಸಿದ್ದಾರೆ.

ಎಂಟು ತಿಂಗಳ ಹಿಂದಷ್ಟೇ ಸುಮಿತ್ ಕುಮಾರ್ ಎಂಬವರನ್ನು ವಿವಾಹವಾಗಿದ್ದ ರಶ್ಮಿಯೇ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಈಕೆ ಗೋಯೆಲಾ ಗ್ರಾಮದ ನಿವಾಸಿಯಾಗಿದ್ದು, ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಹಿಳೆಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಕುಮಾರ್ ಮತ್ತು ಆತನ ತಂದೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.