ಮಹಿಳೆಯರಿಗೆ ಸಂಸತ್ತಿನಲ್ಲೂ ಮೀಸಲಾತಿ ನೀಡಬೇಕು- ಉಪ ರಾಷ್ಟ್ರಪತಿ

ಸಂಸತ್ತಿನಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕೆಂದು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಆಗ್ರಹಿಸಿದರು.

Last Updated : Jul 27, 2019, 04:15 PM IST
ಮಹಿಳೆಯರಿಗೆ ಸಂಸತ್ತಿನಲ್ಲೂ ಮೀಸಲಾತಿ ನೀಡಬೇಕು- ಉಪ ರಾಷ್ಟ್ರಪತಿ  title=
ANI PHOTO

ನವದೆಹಲಿ: ಸಂಸತ್ತಿನಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕೆಂದು ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಆಗ್ರಹಿಸಿದರು.

ಮೊದಲನೇ ಪ್ರಜಾಪ್ರಭುತ್ವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ ಮಾತನಾಡಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು 'ಭಾರತವನ್ನು ನಾವು 'ಮದರ್ ಇಂಡಿಯಾ' ಎಂದು ಕರೆಯುತ್ತೇವೆ ಹೊರತು ಫಾದರ್ ಇಂಡಿಯಾ' ಎಂದು ಕರೆಯುವುದಿಲ್ಲ. ಅದು ದೇಶದಲ್ಲಿ ಮಹಿಳೆಯರಿಗೆ ನೀಡಲಾಗಿರುವ ಪ್ರಾಮುಖ್ಯತೆ. ಅವರು ಜನಸಂಖ್ಯೆಯ ಶೇಕಡಾ 50 ರಷ್ಟಿದ್ದಾರೆ. ಮಹಿಳೆಯರಿಗೆ ಸಂಸತ್ತಿನಲ್ಲಿಯೂ ಮೀಸಲಾತಿ ಸಿಗಬೇಕು ಮತ್ತು ಮೀಸಲಾತಿ ನೀಡಿದ ನಂತರ ಅವರಿಗೆ ಹಣ, ಕಾರ್ಯಗಳು ಮತ್ತು ಕಾರ್ಯಕಾರಿಣಿಗಳನ್ನು ನೀಡಬೇಕು ”ಎಂದು ಹೇಳಿದರು.

17 ನೇ ಲೋಕಸಭೆಯು 2019 ರ ಚುನಾವಣೆಯಲ್ಲಿ ಅತಿ ಹೆಚ್ಚು ಮಹಿಳಾ ಸಂಸದರನ್ನು ಆಯ್ಕೆ ಮಾಡಿದೆ. ಸಂಸತ್ತಿನಲ್ಲಿ 78 ಮಹಿಳಾ ಸದಸ್ಯರಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಯರಿಗೆ ಶೇಕಡಾ 50 ರಷ್ಟು ಸೀಟು ಮೀಸಲಾತಿ ನೀಡಿದ್ದಕ್ಕಾಗಿ ವೆಂಕಯ್ಯ ನಾಯ್ಡು ಮಹಾರಾಷ್ಟ್ರ ರಾಜ್ಯವನ್ನು ಶ್ಲಾಘಿಸಿದರು. ಇದೇ ವೇಳೆ ವಿವಿಧ ರಾಜ್ಯಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಪ್ರತಿ ಐದು ವರ್ಷಗಳಿಗೊಮ್ಮೆ ಚುನಾವಣೆ ನಡೆಸಬೇಕು ಎಂದು ಹೇಳಿದರು.

ಭಾರತದ ಸಂಸತ್ತಿನ ಲೋಕಸಭೆಯಲ್ಲಿ ಶೇ 33 ರಷ್ಟು ಸ್ಥಾನಗಳನ್ನು ಕಾಯ್ದಿರಿಸಲು ಪ್ರಸ್ತಾಪಿಸಿರುವ ಮಹಿಳಾ ಮೀಸಲಾತಿ ಮಸೂದೆ ಅಥವಾ ಸಂವಿಧಾನ (108 ನೇ ತಿದ್ದುಪಡಿ) ಮಸೂದೆ 2008 ಕಳೆದ 10 ವರ್ಷಗಳಿಂದ ಹಾಗೆ ಉಳಿದಿದೆ.ಈ ಹಿನ್ನೆಲೆಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಹೇಳಿಕೆ ಬಂದಿದೆ.

Trending News