ನಾಪತ್ತೆಯಾಗಿದ್ದ ವಾಯುಪಡೆಯ ವಿಮಾನ ಎಎನ್‌-32 ಅವಶೇಷ ಪತ್ತೆ

ಕಾಣೆಯಾಗಿದ್ದ ಎಎನ್‌-32 ವಿಮಾನದ ಅವಶೇಷ ಲಿಪೋದಿಂದ 16 ಕಿ.ಮೀ ಉತ್ತರ ಭಾಗದಲ್ಲಿ ಪತ್ತೆಯಾಗಿದೆ ಎಂದು ಭಾರತೀಯ ವಾಯುಸೇನೆ ಟ್ವೀಟ್ ಮಾಡಿದೆ.

Last Updated : Jun 11, 2019, 06:29 PM IST
ನಾಪತ್ತೆಯಾಗಿದ್ದ ವಾಯುಪಡೆಯ ವಿಮಾನ ಎಎನ್‌-32 ಅವಶೇಷ ಪತ್ತೆ title=

ಇಟಾನಗರ: ನಾಪತ್ತೆಯಾಗಿದ್ದ ವಾಯುಪಡೆಯ ವಿಮಾನ ಎಎನ್‌-32 ಅವಶೇಷ 9 ದಿನಗಳ ಬಳಿಕ ಅರುಣಾಚಲ ಪ್ರದೇಶದ ಉತ್ತರ ಲಿಪೋದಲ್ಲಿ ಮಂಗಳವಾರ ಪತ್ತೆಯಾಗಿದೆ.

ಈ ಬಗ್ಗೆ ವಾಯುಸೇನೆ ಟ್ವೀಟ್‌ ಮಾಡಿದ್ದು, "ಕಾಣೆಯಾಗಿದ್ದ ಎಎನ್‌-32 ವಿಮಾನದ ಅವಶೇಷ ಲಿಪೋದಿಂದ 16 ಕಿ.ಮೀ ಉತ್ತರ ಭಾಗದಲ್ಲಿ ಪತ್ತೆಯಾಗಿದೆ. ಶೋಧ ಕಾರ್ಯಾಚರಣೆ ವೇಳೆ ಐಎಎಫ್ ಎಮ್‌ಐ 17 ಹೆಲಿಕ್ಯಾಪ್ಟರ್‌ಗೆ 12,000 ಅಡಿ ಎತ್ತರದ ಪ್ರದೇಶದಿಂದ ಅವಶೇಷ ಇರುವುದು ಕಂಡುಬಂದಿದೆ" ಎಂದು ಹೇಳಿದೆ.

ವಿಮಾನದಲ್ಲಿದ್ದವರ ಸ್ಥಿತಿಯನ್ನು ತಿಳಿಯಲು ಮತ್ತು ಬದುಕಿ ಉಳಿದವರನ್ನು ರಕ್ಷಿಸಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯ ಆರಂಭಿಸಿದ ಬಳಿಕ ಹೆಚ್ಚಿನ ವಿವರಗಳನ್ನು ನೀಡಲಾಗುವುದು ಎಂದು ವಾಯುಪಡೆ ತಿಳಿಸಿದೆ.

ಅಸ್ಸಾಂನ ಜೋರ್ಹತ್‌ ವಾಯುನೆಲೆಯಿಂದ ಅರುಣಾಚಲ ಪ್ರದೇಶದ ಮೆಚುಕಾ ವಾಯುನೆಲೆಗೆ ಜೂನ್ 3ರಂದು ಮಧ್ಯಾಹ್ನ ಪ್ರಯಾಣ ಬೆಳೆಸಿದ್ದ ಎಎನ್‌ -32 ವಿಮಾನ 35 ನಿಮಿಷಗಳ ಬಳಿಕ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿತ್ತು.
 

Trending News