ನವದೆಹಲಿ: ಯುವ ಲೇಖಕರಿಗೆ ತರಬೇತಿ ನೀಡುವ ಮಾರ್ಗದರ್ಶನ ಕಾರ್ಯಕ್ರಮವಾದ ‘Young, Upcoming and Versatile Authors’ (YUVA’ (ಯುವ) ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪ್ರಕಟಿಸಿದ್ದಾರೆ.
30 ವರ್ಷಕ್ಕಿಂತ ಕಡಿಮೆ ವಯಸ್ಸಿನ 75 ಮಹತ್ವಾಕಾಂಕ್ಷಿ ಬರಹಗಾರರಿಗೆ ತರಬೇತಿ ನೀಡಲು ಈ ಯೋಜನೆ ಉದ್ದೇಶಿಸಿದೆ,ಇದರ ಮುಖ್ಯ ಉದ್ದೇಶ ಭಾರತ ಮತ್ತು ಅದರ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಜಾಗತಿಕವಾಗಿ ಗುರುತಿಸುವಂತೆ ಮಾಡುವುದಾಗಿದೆ.ಈ ಯೋಜನೆಯಡಿ ಪ್ರತಿ ಲೇಖಕರಿಗೆ ಆರು ತಿಂಗಳ ಅವಧಿಗೆ 50 ಸಾವಿರ ರೂಗಳು ದೊರೆಯಲಿವೆ.
ಇದನ್ನೂ ಓದಿ: ಭಾರತೀಯ ಮೂಲದ ಇಂದ್ರಾ ನೂಯಿ ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಪ್ರಮುಖ ಸ್ಪರ್ಧಿ -ವರದಿ
ಈ ಕಾರ್ಯಕ್ರಮದ ಅಧಿಕೃತ ವೆಬ್ಪುಟದ ಲಿಂಕ್ ಹಂಚಿಕೊಂಡ ಪಿಎಂ ಮೋದಿ (PM Modi),“ಯುವಕರಿಗೆ ತಮ್ಮ ಬರವಣಿಗೆಯ ಕೌಶಲ್ಯವನ್ನು ಬಳಸಿಕೊಳ್ಳಲು ಮತ್ತು ಭಾರತದ ಬೌದ್ಧಿಕ ಪ್ರವಚನೆಗೆ ಸಹಕಾರಿಯಾಗಲು ಇಲ್ಲಿ ಒಂದು ಆಸಕ್ತಿದಾಯಕ ಅವಕಾಶವಿದೆ” ಎಂದು ಟ್ವೀಟ್ ಮಾಡಿದ್ದಾರೆ.ಕೋವಿಡ್ -19 ಸಾಂಕ್ರಾಮಿಕವು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಬೀರುವ ಪರಿಣಾಮದ ನಡುವೆ ಯುವ ಮನಸ್ಸುಗಳಿಗೆ ಸಕಾರಾತ್ಮಕ ಮಾನಸಿಕ ಆಲೋಚನೆಗೆ ಇದು ಸಹಕಾರಿಯಾಗಲಿದೆ ಎನ್ನಲಾಗುತ್ತಿದೆ.
Here is an interesting opportunity for youngsters to harness their writing skills and also contribute to India's intellectual discourse. Know more... https://t.co/SNfJr7FJ0V pic.twitter.com/rKlGDeU39U
— Narendra Modi (@narendramodi) June 8, 2021
ಈ ಯೋಜನೆಗೆ ಆಯ್ಕೆ ಮಾಡುವ ವಿಧಾನ ಹೀಗಿದೆ:
MyGov ನಲ್ಲಿ ನಡೆಯುವ ಅಖಿಲ ಭಾರತ ಸ್ಪರ್ಧೆಯ ಮೂಲಕ ಒಟ್ಟು 75 ಲೇಖಕರನ್ನು ಆಯ್ಕೆ ಮಾಡಲಾಗುತ್ತದೆ.
ಎನ್ಬಿಟಿ ರಚಿಸುವ ಸಮಿತಿಯಿಂದ ಆಯ್ಕೆ ಮಾಡಲಾಗುವುದು.
ಸ್ಪರ್ಧೆಯು ಜೂನ್ 4 ರಿಂದ 2021 ಜುಲೈ 31 ರವರೆಗೆ ನಡೆಯುತ್ತದೆ.
ಈ ಯೋಜನೆಯಡಿ ಸರಿಯಾದ ಪುಸ್ತಕವಾಗಿ ಅಭಿವೃದ್ಧಿಪಡಿಸುವ ಸೂಕ್ತತೆಯನ್ನು ನಿರ್ಣಯಿಸಲು 5,000 ಪದಗಳ ಹಸ್ತಪ್ರತಿಯನ್ನು ಸಲ್ಲಿಸಲು ಸ್ಪರ್ಧಿಗಳನ್ನು ಕೇಳಲಾಗುತ್ತದೆ.
ಆಯ್ದ ಲೇಖಕರ ಹೆಸರನ್ನು 2021 ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಕಟಿಸಲಾಗುವುದು.
ಮಾರ್ಗದರ್ಶನದ ಆಧಾರದ ಮೇಲೆ, ಆಯ್ದ ಲೇಖಕರು ನಾಮನಿರ್ದೇಶಿತ ಮಾರ್ಗದರ್ಶಕರ ಮಾರ್ಗದರ್ಶನದಲ್ಲಿ ಅಂತಿಮ ಆಯ್ಕೆಗಾಗಿ ಹಸ್ತಪ್ರತಿಗಳನ್ನು ಸಿದ್ಧಪಡಿಸುತ್ತಾರೆ.
ವಿಜೇತರ ನಮೂದುಗಳನ್ನು 2021 ರ ಡಿಸೆಂಬರ್ 15 ರೊಳಗೆ ಪ್ರಕಟಿಸಲು ಸಿದ್ಧಪಡಿಸಲಾಗುತ್ತದೆ.
ಪ್ರಕಟವಾದ ಪುಸ್ತಕಗಳನ್ನು 2022 ಜನವರಿ 12 ರಂದು ಯುವ ದಿವಸ್ ಅಥವಾ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಬಿಡುಗಡೆ ಮಾಡಬಹುದು.
ಮೂರು ತಿಂಗಳ ಹಂತದ ತರಬೇತಿ ಸಮಯದಲ್ಲಿ, ರಾಷ್ಟ್ರೀಯ ಪುಸ್ತಕ ಟ್ರಸ್ಟ್ (ಎನ್ಬಿಟಿ) ಆಯ್ದ ಅಭ್ಯರ್ಥಿಗಳಿಗಾಗಿ ಎರಡು ವಾರಗಳ ‘ಬರಹಗಾರರ’ ಆನ್ಲೈನ್ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಯುವ ಲೇಖಕರಿಗೆ ಎನ್ಬಿಟಿಯ ನಿಪುಣ ಲೇಖಕರು ಮತ್ತು ಬರಹಗಾರರ ಸಮಿತಿಯಿಂದ ಇಬ್ಬರು ಪ್ರಖ್ಯಾತ ಲೇಖಕರು / ಮಾರ್ಗದರ್ಶಕರು ತರಬೇತಿ ನೀಡುತ್ತಾರೆ. ಆನ್ಲೈನ್ ಕಾರ್ಯಕ್ರಮ ಮುಗಿದ ನಂತರ, ಲೇಖಕರಿಗೆ ಎನ್ಬಿಟಿ ಆಯೋಜಿಸಿರುವ ವಿವಿಧ ಆನ್ಲೈನ್ / ಆನ್-ಸೈಟ್ ರಾಷ್ಟ್ರೀಯ ಶಿಬಿರಗಳಲ್ಲಿ ಎರಡು ವಾರಗಳವರೆಗೆ ತರಬೇತಿ ನೀಡಲಾಗುವುದು.
ಇದನ್ನೂ ಓದಿ: ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಟ್ರಂಪ್ ಪುತ್ರಿ ಇವಾಂಕಾ, ನಿಕ್ಕಿ ಹ್ಯಾಲೆ ಸ್ಪರ್ಧೆ ?
ಎರಡನೇ ಹಂತದ ತರಬೇತಿಯ ಮುಂದಿನ ಮೂರು ತಿಂಗಳಲ್ಲಿ, ಆಯ್ದ ಅಭ್ಯರ್ಥಿಗಳು ಸಾಹಿತ್ಯೋತ್ಸವಗಳು, ಪುಸ್ತಕ ಮೇಳಗಳು, ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ಮುಂತಾದ ವಿವಿಧ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಸಂವಾದದ ಮೂಲಕ ತಮ್ಮ ತಿಳುವಳಿಕೆಯನ್ನು ವಿಸ್ತರಿಸಲು ಮತ್ತು ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ.
ಅಲ್ಲದೆ, ಈ ಯುವ ಲೇಖಕರು ಬರೆದ ಪುಸ್ತಕ ಅಥವಾ ಸರಣಿಯ ಪುಸ್ತಕಗಳನ್ನು ಎನ್ಬಿಟಿ ಪ್ರಕಟಿಸುತ್ತದೆ ಮತ್ತು ಶೇಕಡಾ 10 ರಷ್ಟು ರಾಯಧನವನ್ನು ಲೇಖಕರಿಗೆ ನೀಡಲಾಗುತ್ತದೆ.ವಿವಿಧ ರಾಜ್ಯಗಳ ನಡುವೆ ಸಂಸ್ಕೃತಿ ಮತ್ತು ಸಾಹಿತ್ಯದ ವಿನಿಮಯವನ್ನು ಖಚಿತಪಡಿಸಿಕೊಳ್ಳಲು ಅವರ ಪ್ರಕಟಿತ ಪುಸ್ತಕಗಳನ್ನು ಇತರ ಭಾರತೀಯ ಭಾಷೆಗಳಿಗೆ ಅನುವಾದಿಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.