ಬಿಜೆಪಿಯಂತಹ ದ್ರೋಹಿ ಸರ್ಕಾರವನ್ನು ಪಡೆದಿದ್ದು ಕರ್ನಾಟಕದ ದೌರ್ಭಾಗ್ಯ: ಕಾಂಗ್ರೆಸ್

ಸಹಕಾರಿ ತತ್ವದಲ್ಲಿ ಹುಟ್ಟಿದ ಸಂಸ್ಥೆಗಳು ಅದಾನಿಯಂತಹ ಖಾಸಗಿ ಕಂಪೆನಿಗಳಂತೆ ಸ್ಪರ್ಧೆಗೆ ಬೀಳುವುದು ಸರಿಯೇ? ನಂದಿನಿಯನ್ನು ನಂಬಿದ ರಾಜ್ಯದ ರೈತರ ಹಿತ ನಿಮಗೆ ಬೇಡವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Written by - Puttaraj K Alur | Last Updated : Apr 8, 2023, 05:46 PM IST
  • ಬಿಜೆಪಿಯಂತಹ ದ್ರೋಹಿ ಸರ್ಕಾರ & ಬೊಮ್ಮಾಯಿಯಂತಹ ಪೇಲವ ಸಿಎಂ ಪಡೆದಿದ್ದು ಕರ್ನಾಟಕದ ದೌರ್ಭಾಗ್ಯ
  • ಅಮುಲ್ ವಿಚಾರದಲ್ಲಿ ರಾಜಕೀಯ ಸಲ್ಲದು ಎಂಬ ಸಿಎಂ ಬೊಮ್ಮಾಯಿ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು
  • ಸಹಕಾರಿ ತತ್ವದಲ್ಲಿ ಹುಟ್ಟಿದ ಸಂಸ್ಥೆಗಳು ಅದಾನಿಯಂತಹ ಖಾಸಗಿ ಕಂಪೆನಿಗಳಂತೆ ಸ್ಪರ್ಧೆಗೆ ಬೀಳುವುದು ಸರಿಯೇ?
ಬಿಜೆಪಿಯಂತಹ ದ್ರೋಹಿ ಸರ್ಕಾರವನ್ನು ಪಡೆದಿದ್ದು ಕರ್ನಾಟಕದ ದೌರ್ಭಾಗ್ಯ: ಕಾಂಗ್ರೆಸ್ title=
ಸಿಎಂ ಬೊಮ್ಮಾಯಿ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು!

ಬೆಂಗಳೂರು: ನಾವೂ ಕೂಡ ಬೇರೆ ರಾಜ್ಯಗಳಲ್ಲಿ ನಂದಿನಿ ಹಾಲು ಮಾರಾಟ ಮಾಡಿದ್ದೇವೆ. ಅಮುಲ್ ವಿಚಾರದಲ್ಲಿ ರಾಜಕೀಯ ಸಲ್ಲದು ಎಂಬ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಿಜೆಪಿಯಂತಹ ದ್ರೋಹಿ ಸರ್ಕಾರವನ್ನು & ಬೊಮ್ಮಾಯಿಯಂತಹ ಪೇಲವ ಸಿಎಂ ಪಡೆದಿದ್ದು ಕರ್ನಾಟಕದ ದೌರ್ಭಾಗ್ಯ’ ಎಂದು ಕಿಡಿಕಾರಿದೆ.

ಸಿಎಂ ಬೊಮ್ಮಾಯಿಯವರೇ ನೀವೇ ನಂದಿನಿಯ ತಲೆ ಕಡಿಯಲು ಸುಪಾರಿ ಪಡೆದಿದ್ದು ದುರಂತ. ಸಹಕಾರಿ ತತ್ವದಲ್ಲಿ ಹುಟ್ಟಿದ ಸಂಸ್ಥೆಗಳು ಅದಾನಿಯಂತಹ ಖಾಸಗಿ ಕಂಪೆನಿಗಳಂತೆ ಸ್ಪರ್ಧೆಗೆ ಬೀಳುವುದು ಸರಿಯೇ? ನಂದಿನಿಯನ್ನು ನಂಬಿದ ರಾಜ್ಯದ ರೈತರ ಹಿತ ನಿಮಗೆ ಬೇಡವೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇದನ್ನೂ ಓದಿ: NEP: 9 -10ನೇ ತರಗತಿ ಹಾಗೂ ಪಿಯು ಶಿಕ್ಷಣ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ 

ಪ್ರಧಾನಿ ಮೋದಿ ವಿರುದ್ಧ ಆಕ್ರೋಶ!

ಪ್ರಧಾನಿ ಮೋದಿಯ ಶಿವಮೊಗ್ಗ ಕಾರ್ಯಕ್ರಮದ ಖರ್ಚು 25 ಕೋಟಿ ರೂ., ಧಾರವಾಡ ಕಾರ್ಯಕ್ರಮಕ್ಕೆ 9 ಕೋಟಿ ರೂ., ಮೋದಿಯ ಪ್ರತಿ ಭೇಟಿಯ ಖರ್ಚು ಸರಾಸರಿ 15 ಕೋಟಿ ರೂ. ಆಗುತ್ತಿದೆ. ಚುನಾವಣೆ ಮುಗಿಯುವುದರಲ್ಲಿ ₹1000 ಕೋಟಿ ಬೊಕ್ಕಸಕ್ಕೆ ಹೊರೆಯಾದರೂ ಅಚ್ಚರಿ ಇಲ್ಲ. ಬೊಮ್ಮಾಯಿಯವರೇ ಮೋದಿ ಭೇಟಿಯ ಖರ್ಚುನ್ನು ಕೇಂದ್ರ ಸರ್ಕಾರವೇ ಭರಿಸಲು ಹೇಳಿ ಅಥವಾ ಅದಾನಿ, ಅಂಬಾನಿಯಾದರೂ ಭರಿಸಲಿ!’ ಎಂದು ಕಾಂಗ್ರೆಸ್ ಟೀಕಿಸಿದೆ.

‘ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ 30 ಕೋಟಿ ಖರ್ಚು, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೇವಲ ಜನರನ್ನು ಕರೆಸಲು 4 ಕೋಟಿ ಖರ್ಚು, ಮೋದಿ ರಾಜ್ಯಕ್ಕೆ ಬಂದು ಕೈ ಬೀಸಿ ಹೋಗಲು ರಾಜ್ಯದ ಜನರ ಕೋಟಿ ಕೋಟಿ ತೆರಿಗೆ ಹಣ ಖರ್ಚಾಗುತ್ತಿದೆ. ನಾಳೆ ಬಂಡೀಪುರದಲ್ಲಿ ಮೋದಿ ಸಫಾರಿ ಮಾಡಲು ಎಷ್ಟು ಕೋಟಿ ಖರ್ಚು ಮಾಡುತ್ತಿರುವಿರಿ ಬಿಜೆಪಿ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇದನ್ನೂ ಓದಿ: "ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದಕ್ಕೆ ಅವರ ಕೇಂದ್ರ ನಾಯಕರ ರಾಜ್ಯ ಪ್ರವಾಸವೇ ಸಾಕ್ಷಿ" 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News