ಬೆಂಗಳೂರು: ಮುಸ್ಲಿಂ ಮೀಸಲಾತಿ ರದ್ದು ಆದೇಶಕ್ಕೆ ತಡೆ ನೀಡಿರುವ ಸುಪ್ರೀಂಕೋರ್ಟ್ ಮೇ 9ರವರೆಗೆ ಜಾರಿ ಬೇಡವೆಂದು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದೇ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
#MuslimReservation ಹ್ಯಾಶ್‍ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ‘ಮುಸ್ಲಿಂ ಮೀಸಲಾತಿ ರದ್ದತಿಗೆ ತಡೆಯಾಜ್ಞೆ ನೀಡಿರುವುದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮಾಡಿರುವ ಕಪಾಳಮೋಕ್ಷವಾಗಿದೆ. ಈ ತಡೆಯಾಜ್ಞೆ ತಾತ್ಕಾಲಿಕವಾಗಿದ್ದರೂ ಇದೇ ಖಾಯಂ ಆದೇಶ ಆಗುವುದು ಖಂಡಿತ’ವೆಂದು ಹೇಳಿದ್ದಾರೆ.
ಇದನ್ನೂ ಓದಿ: ಮುಸ್ಲಿಮರಿಗೆ ಮೀಸಲಾತಿ: ವಿಚಾರಣೆ ಪೂರ್ಣವಾಗುವವರೆಗೆ ಯಾವುದೇ ನಿರ್ಧಾರ ಇಲ್ಲ:ಸಿಎಂ ಬೊಮ್ಮಾಯಿ
ಭಾರತೀಯ ಜನತಾ ಪಕ್ಷ ಪ್ರಕಟಿಸಿರುವ ಪರಿಷ್ಕೃತ ಮೀಸಲಾತಿ ನೀತಿಯಲ್ಲಿ ಮುಸ್ಲಿಂಮರ ವಿರುದ್ಧದ ದ್ವೇಷದ ರಾಜಕೀಯ ದುರುದ್ದೇಶ ಇತ್ತೇ ಹೊರತು, ಪ್ರಾಮಾಣಿಕತೆ ಇರಲಿಲ್ಲ.
ಯಾವುದೇ ಸಮೀಕ್ಷೆ- ಅಂಕಿಅಂಶದ ಆಧಾರವಿಲ್ಲದ ಈ ಮೀಸಲಾತಿ ಸಹಜ ಸಾವಿಗೀಡಾಗುವುದು ಖಂಡಿತ.
2/3#MuslimReservation— Siddaramaiah (@siddaramaiah) April 25, 2023
‘ಭಾರತೀಯ ಜನತಾ ಪಕ್ಷ ಪ್ರಕಟಿಸಿರುವ ಪರಿಷ್ಕೃತ ಮೀಸಲಾತಿ ನೀತಿಯಲ್ಲಿ ಮುಸ್ಲಿಂಮರ ವಿರುದ್ಧದ ದ್ವೇಷದ ರಾಜಕೀಯ ದುರುದ್ದೇಶ ಇತ್ತೇ ಹೊರತು, ಪ್ರಾಮಾಣಿಕತೆ ಇರಲಿಲ್ಲ. ಯಾವುದೇ ಸಮೀಕ್ಷೆ- ಅಂಕಿಅಂಶದ ಆಧಾರವಿಲ್ಲದ ಈ ಮೀಸಲಾತಿ ಸಹಜ ಸಾವಿಗೀಡಾಗುವುದು ಖಂಡಿತ’ವೆಂದು ಸಿದ್ದರಾಮಯ್ಯ ಹೇಳಿದ್ದಾರೆ.
ಈಗಲೂ ಕಾಲ ಮಿಂಚಿಲ್ಲ. ರಾಜ್ಯ @BJP4Karnataka ಸರ್ಕಾರ ತಕ್ಷಣ ಮುಸ್ಲಿಂ ಮೀಸಲಾತಿ ರದ್ದತಿಯ ಆದೇಶವನ್ನು ಹಿಂದೆಗೆದುಕೊಂಡು ತನ್ನ ತಪ್ಪನ್ನು ಒಪ್ಪಿಕೊಳ್ಳಬೇಕು.
ಮೀಸಲಾತಿಯನ್ನು ರಾಜಕೀಯದಾಟದ ದಾಳವನ್ನಾಗಿ ಮಾಡಬಾರದು.
3/3#MuslimReservation— Siddaramaiah (@siddaramaiah) April 25, 2023
‘ಈಗಲೂ ಕಾಲ ಮಿಂಚಿಲ್ಲ. ರಾಜ್ಯ ಬಿಜೆಪಿ ಸರ್ಕಾರ ತಕ್ಷಣ ಮುಸ್ಲಿಂ ಮೀಸಲಾತಿ ರದ್ದತಿಯ ಆದೇಶವನ್ನು ಹಿಂದೆಗೆದುಕೊಂಡು ತನ್ನ ತಪ್ಪನ್ನು ಒಪ್ಪಿಕೊಳ್ಳಬೇಕು. ಮೀಸಲಾತಿಯನ್ನು ರಾಜಕೀಯದಾಟದ ದಾಳವನ್ನಾಗಿ ಮಾಡಬಾರದು’ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಇದನ್ನೂ ಓದಿ: Karnataka Election 2023: ಮೈಸೂರಿನ ಚಾಮುಂಡೇಶ್ವರಿ ದರ್ಶನ ಪಡೆದ ಎಚ್.ಡಿ.ಕುಮಾರಸ್ವಾಮಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.