Karnataka Elections Results 2023: ಕಾಂಗ್ರೆಸ್-ಬಿಜೆಪಿ ಪಾರಮ್ಯದ ವಿಜಯಪುರ ಜಿಲ್ಲೆಯಲ್ಲಿ ಗೌಡ-ಪಾಟೀಲರದ್ದೇ ವರ್ಚ್ಚಸ್ಸು!

Vijayapura District Assemby Election Results 2023: ಒಟ್ಟು ಎಂದು ವಿಧಾನಸಭೆ ಚುನಾವಣೆ ಕ್ಷೇತ್ರಗಳನ್ನು ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ಜಾತಿ ರಾಜಕಾರಣವೇ ಪ್ರಬಲ.  ವಿಜಯಪುರ ಜಿಲ್ಲೆಯಲ್ಲಿ ಪಕ್ಷ ರಾಜಕಾರಣಕ್ಕೆ ಸ್ವಲ್ಪ ಜಾಗ ಕಮ್ಮಿ ಎಂದರೆ ತಪ್ಪಾಗಲಾರದು. ಕಳೆದ ಚುನಾವಣೆ ಅಂದರೆ 2018 ರ ಚುನಾವಣೆಯಲ್ಲಿ ಒಟ್ಟು 8 ಸ್ಥಾನಗಳ ಪೈಕಿ 3 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ 3 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಗೌಡ-ಪಾಟೀಲರ ವರ್ಚಸ್ಸಿನ ಈ ಜಿಲ್ಲೆಯಲ್ಲಿ ಜೆಡಿಎಸ್ ಕೂಡ 2 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು. 

Written by - Nitin Tabib | Last Updated : May 12, 2023, 11:10 PM IST
  • ಕಳೆದ ಚುನಾವಣೆ ಅಂದರೆ 2018 ರ ಚುನಾವಣೆಯಲ್ಲಿ ಒಟ್ಟು 8 ಸ್ಥಾನಗಳ ಪೈಕಿ 3 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
  • ಕಾಂಗ್ರೆಸ್ 3 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಗೌಡ-ಪಾಟೀಲರ ವರ್ಚಸ್ಸಿನ ಈ ಜಿಲ್ಲೆಯಲ್ಲಿ ಜೆಡಿಎಸ್ ಕೂಡ 2 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು.
  • ಈ ಜಿಲ್ಲೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕೆಡವಲು ಅಭ್ಯರ್ಥಿಗಳು ಅನ್ಯ ಪಕ್ಷ ಅಥವಾ ವ್ಯಕ್ತಿಗಳೊಂದಿಗೆ ಒಳಒಪ್ಪಂದಗಳನ್ನು ಮಾಡಿಕೊಳ್ಳುವುದು ಪಕ್ಷವನ್ನು ಮೀರಿದ ಬಹಿರಂಗ ಗುಟ್ಟು.
Karnataka Elections Results 2023: ಕಾಂಗ್ರೆಸ್-ಬಿಜೆಪಿ ಪಾರಮ್ಯದ ವಿಜಯಪುರ ಜಿಲ್ಲೆಯಲ್ಲಿ ಗೌಡ-ಪಾಟೀಲರದ್ದೇ ವರ್ಚ್ಚಸ್ಸು! title=
ವಿಜಯಪುರ ಜಿಲ್ಲೆ

Karnataka Assemby Election Results 2023: ಒಟ್ಟು ಎಂದು ವಿಧಾನಸಭೆ ಚುನಾವಣೆ ಕ್ಷೇತ್ರಗಳನ್ನು ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ಜಾತಿ ರಾಜಕಾರಣವೇ ಪ್ರಬಲ.  ವಿಜಯಪುರ ಜಿಲ್ಲೆಯಲ್ಲಿ ಪಕ್ಷ ರಾಜಕಾರಣಕ್ಕೆ ಸ್ವಲ್ಪ ಜಾಗ ಕಮ್ಮಿ ಎಂದರೆ ತಪ್ಪಾಗಲಾರದು. ಕಳೆದ ಚುನಾವಣೆ ಅಂದರೆ 2018 ರ ಚುನಾವಣೆಯಲ್ಲಿ ಒಟ್ಟು 8 ಸ್ಥಾನಗಳ ಪೈಕಿ 3 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ 3 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಗೌಡ-ಪಾಟೀಲರ ವರ್ಚಸ್ಸಿನ ಈ ಜಿಲ್ಲೆಯಲ್ಲಿ ಜೆಡಿಎಸ್ ಕೂಡ 2 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು. ಈ ಜಿಲ್ಲೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕೆಡವಲು ಅಭ್ಯರ್ಥಿಗಳು ಅನ್ಯ ಪಕ್ಷ ಅಥವಾ ವ್ಯಕ್ತಿಗಳೊಂದಿಗೆ ಒಳಒಪ್ಪಂದಗಳನ್ನು ಮಾಡಿಕೊಳ್ಳುವುದು ಪಕ್ಷವನ್ನು ಮೀರಿದ ಬಹಿರಂಗ ಗುಟ್ಟು. ಬಿಜೆಪಿ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಘಟಾನುಘಟಿಗಳು ಈ ಜಿಲ್ಲೆಗೆ ಬಂದು ಎಷ್ಟೇ ಅಬ್ಬರದ ಪ್ರಚಾರ ನಡೆಸಿದರೂ ಇಲ್ಲಿ ಗೆಲುವು ಮಾತ್ರ ಗೌಡ-ಪಾಟೀಲರದ್ದೇ. 

ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರ ಇದೋಂದು ರಾಜ್ಯದಲ್ಲಿ ಸಾಕಷ್ಟು ಪಾಮುಖ್ಯತೆಯನ್ನು ಪಡೆದುಕೊಂಡ‌ ಮತಕ್ಷೇತ್ರವಾಗಿದೆ. ಈ ಮತಕ್ಷೇತ್ರದ ಶಾಸಕ ಎಂ ಬಿ ಪಾಟೀಲ ಅವರು ಮತಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಎಂ. ಬಿ ಪಾಟೀಲ್ ಈ ಬಾರಿ ಲಿಂಗಾಯತ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದು ಈ ಬಾರಿ ಕ್ಷೇತ್ರದ ಮತದಾರರ ಗಮನ ಸೆಳೆದಿದೆ. ಮತಕ್ಷೇತ್ರದ ಜನರ ಸಮಸ್ಯೆಗೆ ‌ಸದಾ ಸ್ಪಂದಿಸುವ ಎಂ ಬಿ ಪಾಟೀಲ ಅವರು ಜನರ ಅಹವಾಲನ್ನು ಆಲಿಸಿ ಅವರ ಸಮಸ್ಯೆಗಳ ಪರಿಹಾರಕ್ಕೆ‌ ಕಚೇರಿಯನ್ನು ಪ್ರಾರಂಭಿಸಿ ನಿರಂತರ ಮತಕ್ಷೇತ್ರದ ಜನರ ಸಮಸ್ಯೆ ಆಲಿಸಿ ಪರಿಹಾರ ಸೂಚಿಸುತ್ತಾರೆ. ಇನ್ನೂ ಶಾಸಕ ಎಂ ಬಿ ಪಾಟೀಲ ಅವರು ಮಾಡಿರುವ ಅಭಿವೃದ್ಧಿ ಕಾರ್ಯ ನೋಡುತ್ತಾ ಹೋದರೆ ಸಾಕಷ್ಟಿದೆ. ಇವರನ್ನು ಈ ಭಾಗದಲ್ಲಿ ಬರದ ನಾಡಿನ ಭಗೀರಥ ಎಂತಲೇ ಕರೆಯುತ್ತಾರೆ. ನೀರಾವರಿ ಕ್ಷೇತ್ರ ಸೇರಿದಂತೆ ಮತಕ್ಷೇತ್ರದಲ್ಲಿ‌ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರೂ ಶಾಸಕ ಎಂ ಬಿ ಪಾಟೀಲ ಅವರಿಗೆ ಗೆಲವು ಅಷ್ಟೊಂದು ಸುಲಭವಲ್ಲ, ತೆರೆ ಮರೆಯಲ್ಲಿ ಅವರದ್ದೇ ಪಕ್ಷದ ಪ್ರಭಾವಿ ನಾಯಕರು ಅವರನ್ನು ಸೋಲಿಸಲು ಪ್ರಯತ್ನ ಮಾಡುತ್ತಾರೆ ಎಂಬುದು ಮತಕ್ಷೇತ್ರದ ಜನರ ಮಾತು. ಇನ್ನೂ 2018 ರಲ್ಲಿ ಪರಾಭವಗೊಂಡ ವಿಜುಗೌಡ ಪಾಟೀಲ ಅವರು ಸಹಿತ ನಿರಂತರ‌ವಾಗಿ ಮತಕ್ಷೇತ್ರದಲ್ಲಿ ಓಡಾಟ ಮಾಡುವ ಮೂಲಕ ಮತಕ್ಷೇತ್ರದ ಜನರೊಂದಿಗೆ ಸಂಪರ್ಕ ಹೊಂದಿದ್ದಾರೆ. ಅವರ ಕಷ್ಟ ಸುಖದಲ್ಲಿ‌ ಸಹಿತ ವಿಜುಗೌಡ ಪಾಟೀಲ ‌ಅವರು ಭಾಗಿಯಾಗಿದ್ದಾರೆ. 

ಇನ್ನೂ ಮುದ್ದೆಬೇಹಾಳ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಎ.ಎಸ್ ಪಾಟೀಲ್ ನಾಡಹಳ್ಳಿ  ಹಾಗೂ ಕಾಗ್ರೆಸ್ ಮಾಜಿ ಸಚಿವ ಸಿ ಎಸ್ ನಾದಗೌಡ ನಡುವೆ ನೆರೆ ಪೈಪೋಟಿ ಏರ್ಪಟ್ಟಿದೆ. ಇಂಡಿ ಕ್ಷೇತ್ರದಲ್ಲಿ  ಕಾಂಗ್ರೆಸ್ ಪಕ್ಷದ ಯಶವಂತ ರಾಯಗೌಡಾ, ಜೆಡಿಎಸ್ ನ ಬಿ. ಡಿ ಪಾಟೀಲ್  ಹಾಗೂ ಬಿಜೆಪಿಯ ಕಾಸುಗೌಡಾ ಬಿರಾದಾರ್  ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇಂಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸುವ ಕಾಂಗ್ರೆಸ್ ಅಭ್ಯರ್ಥಿಯ ಘೋಷಣೆ ಅವರ ಪಾಲಿಗೆ ಸಕಾರಾತ್ಮಕ ಸಾಬೀಟಾಗುವ ಸಾದ್ಯತೆ ಇದೆ. ಇನ್ನೊಂದೆಡೆ ಪಂಚಮಸಾಲಿ ವೋಟ್ ಬ್ಯಾಂಕ್ ಬಿಜೆಪಿಯ ಪ್ಲಸ್ ಪಾಯಿಂಟ್ ಎನ್ನಲಾಗುತ್ತಿದೆ. ಬಸವನ ಬಾಗೆವಾಡಿ ಕ್ಷೇತ್ರದ ಕುರಿತು ಹೇಳುವುದಾದರೆ, ಇಲ್ಲಿ ಕಾಗ್ರೆಸ್ ಅಭ್ಯರ್ಥಿ ಶಿವಾನಂದ್ ಪಾಟೀಲ್ ಹಾಗೂ ಜಿಜೆಪಿಯ ಎಸ್.ಕೆ ಬೆಳ್ಳುಬ್ಬಿ ಮತ್ತು ಜೆಡಿಎಸ್ ನ ಸೋಮನಗೌಡಾ ಪಾಟೀಲ್ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ನಾಗಠಾಣಾ ಈ ಜಿಲ್ಲೆಯಲ್ಲಿರುವ ಏಕೈಕ ಮೀಸಲು ಕ್ಷೇತ್ರ. ಇಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ. ಜೆಡಿಎಸ್ ಅಭ್ಯರ್ಥಿ ಡಾ. ದೇವಾನಂದ್ ಚವಾಣ್ ವಿರುದ್ಧ ಕಾಗ್ರೆಸ್ ನ ವಿಠ್ಠಲ ಕಟಕದೊಂಡ ನಡುವೆ ನೇರ ಸ್ಪರ್ಧೆ ಇದ್ದರೂ ಕೂಡ ಗೋವಿಂದ ಕಾರಜೋಳ ಅವರ ಪುತ್ರ ಗೋಪಾಲ್ ಕಾರಜೋಳ ಜಾಗದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಂಜೀವ್ ಐಹೊಳೆ ಕಣಕ್ಕೆ ಇಳಿದಿದ್ದರಿಂದ ನಿರೀಕ್ಷಿತ ಹಣಾಹಣಿ ಕಾಣಿಸುತ್ತಿಲ್ಲ ಎಂದರೆ ತಪ್ಪಾಗಲಾರದು.

ಇನ್ನೂ ವಿಜಯಪುರ ನಗರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಹಿಂದೂ-ಮುಸ್ಲಿಂ ವೋಟ್ ಬ್ಯಾಂಕ್ ಆಧಾರದ ಮೇಲೆಯೇ ಈ ಬಾರಿಯೂ ಕೂಡ ಇಲ್ಲಿ ಬಿಜೆಪಿಯ ವತಿಯಿಂದ ಬಸನಗೌಡಾ ಪಾಟೀಲ್ ಯತ್ನಾಳ್ ಸ್ಪರ್ಧೆಗಿಳಿದಿದ್ದಾರೆ. ಕಳೆದ ಬಾರಿ ಅತ್ಯಂತ ಕಡಿಮೆ ಅಂತರದಲ್ಲಿ ಯತ್ನಾಳ್ ವಿರುದ್ಧ ಸೋಲನ್ನು ಅನುಭವಿಸಿದ್ದ ಅಬ್ದುಲ್ ಹಮೀದ್ ಮುಶ್ರಿಫ್ ಗೆ ಈ ಬಾರಿಯೂ ಕಾಗ್ರೆಸ್ ಟಿಕೆಟ್ ನೀಡಿದೆ. 'ಮುಸ್ಲಿಮರ ಮತಗಳು ನನಗೆ ಬೇಡ' ಎನ್ನುತ್ತಾ ಕಣಕ್ಕೆ ಇಳಿದಿರುವ ಯತ್ನಾಳ್ ಗೌಡರಿಗೆ ಬಿಜೆಪಿಯ ಲಿಂಗಾಯತ ಮುಖಂಡರ ಅಸಮಾಧಾನ, ಭಿನಾಭಿಪ್ರಾಯ ಮುಳುವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನೂ ಸಿಂದಗಿ ವಿಧಾನ ಸಭೆ ಕ್ಷೇತ್ರದ ಕುರಿತು ಹೇಳುವುದಾದರೆ, ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮದ್ಯೆ ನೇರ ಹಣಾಹಣಿ ಇರಲಿದೆ. 2023 ರ ಉಪಚುನಾವಣೆಯಲ್ಲಿ ಲಕ್ಷ್ಮಣ ಸವದಿ ಅವರ ಬೆಂಬಲ ಹಾಗೂ ಕಾಂಗ್ರೆಸ್ ಒಳಜಗಳದ ಲಾಭ ಪಡೆದುಕೊಂಡಿದ್ದ ಬಿಜೆಪಿಯ ರಮೇಶ್ ಭೂಶನೂರ ಈ ಬಾರಿ ಕೂಡ ಬಿಜೆಪಿ ಟಿಕೆಟ್ ಮೇಲೆ ಸ್ಪರ್ಧಿಸಿದ್ದಾರೆ. ಆದರೆ, ಈ ಬಾರಿ ವ್ಯತರಿಕ್ತ ಪರಿಸ್ಥಿತಿ ನಿರ್ಮಾಣಗೊಂಡಿದೆ. ಏಕೆಂದರೆ ಉಪಚುನಾವಣೆಯಲ್ಲಿ ಬಿಜೆಪಿ ನೀಡಿದ್ದ ಭರವಸೆಗಳು ಈಡೇರಿಲ್ಲ ಎಂಬುದು ಕ್ಷೇತ್ರದಲ್ಲಿ ನಡೆದ ಟಾಕ್.  ಕಾಂಗ್ರೆಸ್ ವತಿಯಿಂದ ಈ ಬಾರಿಯೂ ಕೂಡ ಅಶೋಕ್ ಮನಗೂಳಿ ಚುನಾವಣಾ ಕಣಕ್ಕಿಳಿದಿದ್ದಾರೆ. ಮೊದಲಿನಿಂದಲೂ ರೆಡ್ಡಿ-ಲಿಂದಾಯತ ಮತದಾರರ ಪ್ರಾಬಲ್ಯ ಹೊಂದಿರುವ ದೇವರ ಹಿಪ್ಪರಗಿ ಕ್ಷೇತ್ರದಲ್ಲಿ ಪಂಚಮಶಾಲಿ ಸಮಾಜಕ್ಕೆ ಸೇರಿದ ಪ್ರಬಲ ಅಭ್ಯರ್ಥಿ ರಾಜು ಗೌಡಾ ಪಾಟೀಲ್ ಅವರಿಗೆ ಬಿಜೆಪಿಯ ಹಾಲಿ ಶಾಸಕ ಸೋಮನಗೌಡಾ ಪಾಟೀಲ್ ಸಾಸನೂರು ತೀವ್ರ ಪೈಪೋಟಿ ನೀಡಲಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಕೂಡ ನಾನೇನು ಕಮ್ಮಿ ಎಂಬಂತೆ ಹಿಂದುಳಿದ ವರ್ಗಕ್ಕೆ ಸೇರಿದ ರಾಜು ಸಿಂದಗಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮಾಜಿ ಶಾಸಕ ಶರಣಪ್ಪ ಸುಣಗಾರ್ ಅವರನ್ನು ಕಣಕ್ಕಿಳಿಸಿದೆ. ಈಗಾಗಲೇ ಜಿಲ್ಲೆಯ ಈ ಎಲ್ಲಾ 95 ಅಭ್ಯರ್ಥಿಗಳ ಹಣೆಬರಹ ಮತಯಂತ್ರ ಸೇರಿದ್ದು, ಮತದಾರ ಪ್ರಭು ಯಾರು ಯಾರಿಗೆ ಮಣೆ ಹಾಕಳಿದ್ದಾನೆ ಎಂಬುದು ಕಾದುನೋಡೋಣ. 

ವಿಜಯಪುರ ಜಿಲ್ಲೆಯ ಕುರುಕ್ಷೇತ್ರ
ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು=95
ಒಟ್ಟು ಮತದಾರರು - 1878303 
ಪುರುಷರು-959132 
ಮಹಿಳೆಯರು-918953
ಲೈಂಗಿಕ ಅಲ್ಪಸಂಖ್ಯಾತರು- 218 

ಜಿಲ್ಲೆಯಲ್ಲಿ ಬರುವ ವಿವಿಧ ಕ್ಷೇತ್ರಗಳ ಸಂಕ್ಷಿಪ್ತ ಮಾಹಿತಿ
1. ಮುದ್ದೆಬೀಹಾಳ 
ಕ್ಷೇತ್ರದ ಮಾಹಿತಿ

ಮತದಾರರ ಸಂಖ್ಯೆ-2,01,058
ಪುರುಷ ಮತದಾರರ ಸಂಖ್ಯೆ-1,03,210
ಮಹಿಳಾ ಮತದಾರರ ಸಂಖ್ಯೆ-97,813

2018ರ ವಿಧಾನಸಭೆ ಚುನಾವಣಾ ಫಲಿತಾಂಶ
BJP- ಅಮೀನಪ್ಪ ಗೌಡ ಎಸ್ ಪಾಟೀಲ್ (ನಡಹಳ್ಳಿ)- 63,512 - ಅಂತರ: 8633(45.76%)
INC- ಅಪ್ಪಾಜಿ ಊರ್ಫ್ ಚನ್ನಬಸವರಾಜ ಶಂಕರರಾವ ನಾಡಗೌಡ- 54,879 (39.54%)
JDS- ಮಂಗಳಾದೇವಿ ಬಿರಾದಾರ್ 9,845 (7.09%)

2023ರ ವಿಧಾನಸಭೆ ಚುನಾವಣೆಯ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ಎ. ಎಸ್ ಪಾಟೀಲ್ (ನಂದಹಳ್ಳಿ)
ಕಾಂಗ್ರೆಸ್- ಅಪ್ಪಾಜಿ ಅಲಿಯಾಸ್ ಚನ್ನಬಸವರಾಜ್ ನಾದಗೌಡ 
ಜೆಡಿಎಸ್- ಬಸವರಾಜ್ ಭೀಮಣ್ಣ ಬಜಂತ್ರಿ
ಆಪ್- ಮೆಹಬೂಬ್ ಶಬ್ಬೀರ ಅಹ್ಮದ್ ಹಡಲಗೇರಿ
ಬಿಎಸ್ಪಿ- ಕೆ.ಬಿ. ದೊಡಮನಿ ವಕೀಲರು

2. ದೇವರ ಹಿಪ್ಪರಗಿ
ಕ್ಷೇತ್ರದ ಮಾಹಿತಿ

ಮತದಾರರ ಸಂಖ್ಯೆ-2,07,225
ಪುರುಷ ಮತದಾರರ ಸಂಖ್ಯೆ-1,07,451
ಮಹಿಳಾ ಮತದಾರರ ಸಂಖ್ಯೆ-99,755

2018ರ ವಿಧಾನಸಭೆ ಚುನಾವಣಾ ಫಲಿತಾಂಶ
BJP- ಸೋಮನಗೌಡ ಬಿ ಪಾಟೀಲ್ (ಸಾಸನೂರ)- 48,245 ಅಂತರ: 3353 (34.69%)
JDS- ಭೀಮನಗೌಡ (ರಾಜುಗೌಡ) ಬಿ ಪಾಟೀಲ್- 44,892    (32.28%)    
INC- ಬಿ ಎಸ್ ಪಾಟೀಲ್ (ಯಾಳಗಿ)-  38,038    (27.35%)    

2023ರ ವಿಧಾನಸಭೆ ಚುನಾವಣೆಯ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿ‌ಜೆ‌ಪಿ- ಸೋಮನಗೌಡ ಪಾಟೀಲ್ (ಸಾಸನೂರು)
ಕಾಂಗ್ರೆಸ್- ಸುಣಗಾರ್ ಶರಣಪ್ಪ ತಿಪ್ಪಣ್ಣ
ಜೆಡಿಎಸ್-ಭೀಮನಗೊಂಡಾ ಬಸನಗೊಂಡಾ ಪಾಟೀಲ್ 
ಆಪ್- ಬಸಲಿಂಗಪ್ಪಾ ಇಂಗಳಗಿ
ಬಿಎಸ್ಪಿ- ರಾಜು ಮಾದರ್ (ಗುಬ್ಬೆವಾಡ್)

3. ಬಸವನ ಬಾಗೆವಾಡಿ
ಕ್ಷೇತ್ರದ ಮಾಹಿತಿ

ಮತದಾರರ ಸಂಖ್ಯೆ- 1,96,571
ಪುರುಷ ಮತದಾರರ ಸಂಖ್ಯೆ- 1,01,526
ಮಹಿಳಾ ಮತದಾರರ ಸಂಖ್ಯೆ- 95,027

2018ರ ವಿಧಾನಸಭೆ ಚುನಾವಣಾ ಫಲಿತಾಂಶ
INC- ಶಿವಾನಂದ ಪಾಟೀಲ- 58,647 ಅಂತರ: 3186 (39.79%)
JDS- ಸೋಮನಗೌಡ(ಅಪ್ಪುಗೌಡ) ಬಿ ಪಾಟೀಲ್(ಮನಗೂಳಿ) -55,461 (37.63%)    
BJP- ಸಂಗರಾಜ್ ದೇಸಾಯಿ - 25,501 (17.30%)

2023ರ ವಿಧಾನಸಭೆ ಚುನಾವಣೆಯ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ಬೆಳ್ಳುಬ್ಬಿ ಸಂಗಪ್ಪ ಕಲ್ಲಪ್ಪ
ಕಾಂಗ್ರೆಸ್- ಶಿವಾನಂದ್ ಪಾಟೀಲ್
ಜೆಡಿಎಸ್- ಅಲಗೌಡಾ ಉರ್ಫ್  ಸೋಮನಗೌಡಾ ಬಸಗೌಡಾ ಪಾಟೀಲ್
ಬಿಎಸ್ಪಿ- ಗುರುಪಾದಪ್ಪ ಬಸಪ್ಪ ಧವಳಗಿ    

4. ಬಬಲೇಶ್ವರ್
ಕ್ಷೇತ್ರದ ಮಾಹಿತಿ

ಮತದಾರರ ಸಂಖ್ಯೆ-2,09,117
ಪುರುಷ ಮತದಾರರ ಸಂಖ್ಯೆ-1,06,470
ಮಹಿಳಾ ಮತದಾರರ ಸಂಖ್ಯೆ- 1,02,636

2018ರ ವಿಧಾನಸಭೆ ಚುನಾವಣಾ ಫಲಿತಾಂಶ
INC- ಮಲ್ಲನಗೌಡ ಬಸನಗೌಡ ಪಾಟೀಲ - 98,339- ಅಂತರ: 29715(57.29%)
BJP- ವಿಜಯಕುಮಾರ ಸಿದ್ರಾಮಗೌಡ ಪಾಟೀಲ- 68,624 (39.98%)    

2023ರ ವಿಧಾನಸಭೆ ಚುನಾವಣೆಯ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ವಿಜಯ್ ಕುಮಾರ್ ಉರ್ಫ್ ವಿಜಯಗೌಡಾ ಪಾಟೀಲ್
ಕಾಂಗ್ರೆಸ್- ಎಂಬಿ ಪಾಟೀಲ್
ಜೆಡಿಎಸ್- ಬಸವರಾಜ್ ಹೊನವಾಡ್
ಆಪ್-ಗಂಗನಲ್ಲಿ ಕಾಮಣ್ಣ ಸಿದ್ಧಪ್ಪ
ಬಿಎಸ್ಪಿ- ವಿಜಯಕುಮಾರ್ ಉರ್ಫ್ ವಿಜಯಗೌಡಾ ಪಾಟೀಲ್

5. ವಿಜಯಪುರ ನಗರ
ಕ್ಷೇತ್ರದ ಮಾಹಿತಿ

ಮತದಾರರ ಸಂಖ್ಯೆ-2,41,682
ಪುರುಷ ಮತದಾರರ ಸಂಖ್ಯೆ-1,21,799
ಮಹಿಳಾ ಮತದಾರರ ಸಂಖ್ಯೆ-1,19,829

2018ರ ವಿಧಾನಸಭೆ ಚುನಾವಣಾ ಫಲಿತಾಂಶ
BJP- ಬಸನಗೌಡ ಪಾಟೀಲ್ (ಯತ್ನಾಳ್) - 76,308- ಅಂತರ: 6413(50.30%)
INC- ಅಬ್ದುಲ್ ಹಮೀದ್ ಮುಶ್ರೀಫ್ 69,895 (46.07%)    
JDS- ಬೆಳ್ಳುಬ್ಬಿ ಸಂಗಪ್ಪ ಕಲ್ಲಪ್ಪ- 2,083 (1.37%)    

2023ರ ವಿಧಾನಸಭೆ ಚುನಾವಣೆಯ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ಬಸನಗೌಡಾ ಪಾಟೀಲ್ ಯತ್ನಾಳ್
ಕಾಂಗ್ರೆಸ್- ಅಬ್ದುಲ್ ಹಮೀದ್ ಖಾಜಾಸಾಬ್ ಮುಶ್ರಿಫ್
ಜೆಡಿಎಸ್- ಬಂದೆನವಾಜ್ ಹುಸೇನ್ ಸಾಬ್ ಮಹಾಬರಿ
ಆಪ್-ಹಾಸೀಮ್ ಪೀರ್ ವಾಲಿಕಾರ್
ಬಿಎಸ್ಪಿ- ಕೆಂಗನಾಳ್ ಮಲ್ಲಿಕಾರ್ಜುನ್ ಭೀಮಪ್ಪಾ

6. ನಾಗಠಾಣಾ
ಕ್ಷೇತ್ರದ ಮಾಹಿತಿ

ಮತದಾರರ ಸಂಖ್ಯೆ-2,56,881
ಪುರುಷ ಮತದಾರರ ಸಂಖ್ಯೆ-1,32,596
ಮಹಿಳಾ ಮತದಾರರ ಸಂಖ್ಯೆ-1,24,258

2018ರ ವಿಧಾನಸಭೆ ಚುನಾವಣಾ ಫಲಿತಾಂಶ
JDS- ದೇವಾನಂದ್ ಫುಲಾಸಿಂಗ್ ಚವಾಣ್- 59,709 ಅಂತರ: 5601(34.00%)
INC- ಕಟಕದೊಂಡ್ ವಿಟ್ಟಲ್ ದೊಂಡಿಬಾ - 54,108(30.81%)
BJP- ಗೋಪಾಲ್ ಗೋವಿಂದ್ ಕಾರಜೋಳ- 53,562(30.50%)

2023ರ ವಿಧಾನಸಭೆ ಚುನಾವಣೆಯ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ-ಸಂಜೀವ್ ಮಲಸಿದ್ದಪ್ಪ ಐಹೊಳೆ
ಕಾಂಗ್ರೆಸ್- ಕಟಕಧೋಂಡ್ ವಿಠ್ಠಲ ದೊಂಡಿಬಾ
ಜೆಡಿಎಸ್- ದೇವಾನಂದ್ ಫುಲ್ಸಿಂಗ್ ಚೌಹಾಣ್
ಆಪ್- ಗುರು ಮುನ್ನು ಚವಾಣ್ 
ಬಿಎಸ್ಪಿ- ಕಲ್ಲಪ್ಪ ತೊರವಿ    

ಇದನ್ನೂ ಓದಿ-Karnataka Election Result 2023: ಚುನಾವಣೆ ನಂತರದ ಲೆಕ್ಕಾಚಾರದಲ್ಲಿ ಉತ್ತರ ಕನ್ನಡದಲ್ಲಿ ಗೆಲುವು ಯಾರದ್ದು? ಕುತೂಹಲಕಾರಿ ಫಲಿತಾಂಶ

7. ಇಂಡಿ
ಕ್ಷೇತ್ರದ ಮಾಹಿತಿ

ಮತದಾರರ ಸಂಖ್ಯೆ-2,28,742
ಪುರುಷ ಮತದಾರರ ಸಂಖ್ಯೆ-1,18,922
ಮಹಿಳಾ ಮತದಾರರ ಸಂಖ್ಯೆ-1,09,796

2018ರ ವಿಧಾನಸಭೆ ಚುನಾವಣಾ ಫಲಿತಾಂಶ
INC- ಯಶವಂತರಾಯಗೌಡ ವಿಟ್ಟಲಗೌಡ ಪಾಟೀಲ- 50,401- ಅಂತರ: 9938(29.98%)
JDS- ಬಿ ಡಿ ಪಾಟೀಲ್ (ಹಂಜಗಿ)- 40,463(24.07%)    
BJP- ದಯಾಸಾಗರ ಬಾಪುರಯ್ಯ ಪಾಟೀಲ್- 38,941(23.16%)
IND- ರವಿಕಾಂತ ಶಂಕ್ರೆಪ್ಪ ಪಾಟೀಲ್- 31,425 (18.69%)    

2023ರ ವಿಧಾನಸಭೆ ಚುನಾವಣೆಯ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ಕಸುಗೌಡಾ ಈರಪ್ಪಾಗೌಡಾ ಬಿರಾದಾರ್ 
ಕಾಂಗ್ರೆಸ್-ಯಶವಂತರಾಯಗೌಡಾ ವಿಠ್ಠಲಗೌಡಾ ಪಾಟೀಲ್
ಜೆಡಿಎಸ್- ಬಿ.ಡಿ ಪಾಟೀಲ್ (ಹಂಜಗಿ)
ಆಪ್- ಗೋಪಾಲ್ ಆರ್. ಪಾಟೀಲ್
ಬಿಎಸ್ಪಿ- ನಾಗೇಶ್ ಶಿವಶರಣ್

ಇದನ್ನೂ ಓದಿ-ಹುಬ್ಬಳ್ಳಿ-ಧಾರವಾಡದ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ಪಕ್ಷಕ್ಕೆ ಹೆಚ್ಚು ಸ್ಥಾನ!

8. ಸಿಂಧಗಿ
ಕ್ಷೇತ್ರದ ಮಾಹಿತಿ

ಮೀಸಲಾತಿ-ಪರಿಶಿಷ್ಟ ಜಾತಿ
ಮತದಾರರ ಸಂಖ್ಯೆ-2,23,160
ಪುರುಷ ಮತದಾರರ ಸಂಖ್ಯೆ-1,15,556
ಮಹಿಳಾ ಮತದಾರರ ಸಂಖ್ಯೆ-1,07,576

2018ರ ವಿಧಾನಸಭಾ ಚುನಾವಣಾ ಫಲಿತಾಂಶ
JDS- ಮನಗೂಳಿ ಮಲ್ಲಪ್ಪ ಚನ್ನವೀರಪ್ಪ- 70,865- ಅಂತರ : 9305 (44.15%)
BJP- ಭೂಸನೂರು ರಮೇಶ್ ಬಾಳಪ್ಪ- 61,560    (38.36%)    
INC-ಸಾಲಿ ಮಲ್ಲಣ್ಣ ನಿಂಗಪ್ಪ - 22,818    (14.22%)    

2023ರ ವಿಧಾನಸಭೆ ಚುನಾವಣೆಯ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ಭೂಸುನೂರ್ ರಮೇಶ್ ಮಲ್ಲಪ್ಪ
ಕಾಂಗ್ರೆಸ್- ಅಶೋಕ್ ಮಲ್ಲಪ್ಪ ಮನಗೂಳಿ
ಜೆಡಿಎಸ್- ವಿಶಾಲಾಕ್ಷಿ ಶಿವಾನಂದ್ ಪಾಟೀಲ್
ಆಪ್- ಮುರುಗೆಪ್ಪಗೌಡಾ ಎಸ್ ರಡ್ಡೆವಾಡಗಿ
ಬಿಎಸ್ಪಿ-ಡಾ. ದಸ್ತಗೀರ್ ಮುಲ್ಲಾ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News