"ಕೈ" ಟಿಕೆಟ್ ತಪ್ಪಿದ್ದಕ್ಕೆ ಬಿಜೆಪಿಯಿಂದ ನಾಮಪತ್ರ : ಅಚ್ಚರಿಯ ರಾಜಕೀಯ ಬೆಳವಣಿಗೆ

ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಬಳಿಕ ಅವರು ಬಿಜೆಪಿಯಿಂದ ಟಿಕೆಟ್ ಪಡೆದುಕೊಳ್ಳುವ ಅಂತಿಮ ಹಂತದ ಪ್ರಯತ್ನಕ್ಕೆ ಮುಂದಾದರು. ಒಂದು ವೇಳೆ ಅವಕಾಶ ಆದರೂ ಆಗಬಹುದೆಂಬ ನಂಬಿಕೆಯೊಂದಿಗೆ ಬಿಜೆಪಿಯ ಅಭ್ಯರ್ಥಿ ಎಂಬುದಾಗಿ ನಮೂದು ಮಾಡಿದ ಮತ್ತೊಂದು ನಾಮಪತ್ರವನ್ನು ಕೊನೆ ಘಳಿಗೆಯಲ್ಲಿ ಸಲ್ಲಿಸಿದರು. ಈ ಬೆಳವಣಿಗೆಯ ನಂತರ ಕೃಷ್ಣೇಗೌಡ ಅವರಿಗೆ ಬಿಜೆಪಿ ಬಿ ಫಾರಂ ನೀಡಿದೆ ಎಂಬ ಸುದ್ದಿಯು ಹರಿದಾಡಿತು. 

Written by - Yashaswini V | Last Updated : Apr 21, 2023, 07:41 AM IST
  • ಕಳೆದ ಆರು ತಿಂಗಳಿನಿಂದಲೂ ಕೃಷ್ಣೇಗೌಡ ಅವರು ಕಾಂಗ್ರೆಸ್‌ನಿಂದ ಸ್ಪರ್ಧೆಗೆ ಕಸರತ್ತು ನಡೆಸಿದ್ದರು.
  • ಸಿದ್ದರಾಮಯ್ಯ ಅವರು ತಮಗೆ ಅವಕಾಶ ಕಲ್ಪಿಸಿಕೊಡಲಿದ್ದಾರೆಂಬ ನಂಬಿಕೆಯನ್ನು ಇಟ್ಟುಕೊಂಡು ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸಿದ್ದರು.
  • ಬುಧವಾರ ರಾತ್ರಿಯ ತನಕವೂ ತಮಗೆ ಅನುಕೂಲ ಆಗಲಿದೆ ಎಂಬ ವಿಶ್ವಾಸದಲ್ಲಿ ಇದ್ದರು.
"ಕೈ" ಟಿಕೆಟ್ ತಪ್ಪಿದ್ದಕ್ಕೆ ಬಿಜೆಪಿಯಿಂದ ನಾಮಪತ್ರ : ಅಚ್ಚರಿಯ ರಾಜಕೀಯ ಬೆಳವಣಿಗೆ title=

ಅರಕಲಗೂಡು : ಕಾಂಗ್ರೆಸ್ ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡೆಸಿ ಅವಕಾಶ ಸಿಗದೆ ನಿರಾಸೆಗೊಂಡ ಉದ್ಯಮಿ ಕೃಷ್ಣೇಗೌಡ ಅವರು ಕೊನೆ ಘಳಿಗೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ, ಅಲ್ಲದೆ ಬಿಜೆಪಿ ಅಭ್ಯರ್ಥಿಯಾಗಿಯೂ ನಾಮಪತ್ರದಲ್ಲಿ ನಮೂದಿಸುವ ಮೂಲಕ ಅಚ್ಚರಿ ಉಂಟು ಮಾಡಿದ್ದಾರೆ.

ಕಳೆದ ಆರು ತಿಂಗಳಿನಿಂದಲೂ ಕೃಷ್ಣೇಗೌಡ ಅವರು ಕಾಂಗ್ರೆಸ್‌ನಿಂದ ಸ್ಪರ್ಧೆಗೆ ಕಸರತ್ತು ನಡೆಸಿದ್ದರು. ಸಿದ್ದರಾಮಯ್ಯ ಅವರು ತಮಗೆ ಅವಕಾಶ ಕಲ್ಪಿಸಿಕೊಡಲಿದ್ದಾರೆಂಬ ನಂಬಿಕೆಯನ್ನು ಇಟ್ಟುಕೊಂಡು ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸಿದ್ದರು. ಬುಧವಾರ ರಾತ್ರಿಯ ತನಕವೂ ತಮಗೆ ಅನುಕೂಲ ಆಗಲಿದೆ ಎಂಬ ವಿಶ್ವಾಸದಲ್ಲಿ ಇದ್ದರು. ಆದರೆ, ಗುರುವಾರ ಬೆಳಗಾಗುವುದರೊಳಗೆ ಶ್ರೀಧರ್‌ಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ಖಾತ್ರಿಯಾದ ಬಳಿಕ ಮಧ್ಯಾಹ್ನ 12.45ರ ಸಮಯದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಇದನ್ನೂ ಓದಿ- ಚಾಮರಾಜನಗರ: 51 ಲಕ್ಷ ಮೌಲ್ಯದ ವಿಸ್ಕಿ- 12 ಲಕ್ಷ ಮೌಲ್ಯದ ಬಿಯರ್ ಜಪ್ತಿ

ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಬಳಿಕ ಅವರು ಬಿಜೆಪಿಯಿಂದ ಟಿಕೆಟ್ ಪಡೆದುಕೊಳ್ಳುವ ಅಂತಿಮ ಹಂತದ ಪ್ರಯತ್ನಕ್ಕೆ ಮುಂದಾದರು. ಒಂದು ವೇಳೆ ಅವಕಾಶ ಆದರೂ ಆಗಬಹುದೆಂಬ ನಂಬಿಕೆಯೊಂದಿಗೆ ಬಿಜೆಪಿಯ ಅಭ್ಯರ್ಥಿ ಎಂಬುದಾಗಿ ನಮೂದು ಮಾಡಿದ ಮತ್ತೊಂದು ನಾಮಪತ್ರವನ್ನು ಕೊನೆ ಘಳಿಗೆಯಲ್ಲಿ ಸಲ್ಲಿಸಿದರು. ಈ ಬೆಳವಣಿಗೆಯ ನಂತರ ಕೃಷ್ಣೇಗೌಡ ಅವರಿಗೆ ಬಿಜೆಪಿ ಬಿ ಫಾರಂ ನೀಡಿದೆ ಎಂಬ ಸುದ್ದಿಯು ಹರಿದಾಡಿತು. ಆದರೆ, ಚುನಾವಣಾ ಆಯೋಗದ ನಿಯಮದ ಅನ್ವಯ ಯಾವುದೇ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಕೊನೆಯ ಹಂತದ ಒಳಗಾಗಿ ಬಿ ಫಾರಂ ಸಲ್ಲಿಸಬೇಕು. ಒಂದು ವೇಳೆ ಒಂದೇ ಪಕ್ಷದಿಂದ ಇಬ್ಬರು ಬಿ ಫಾರಂ ಸಲ್ಲಿಸಿದ ಪ್ರಕರಣಗಳಲ್ಲಿ ಆ ಪಕ್ಷವು ನಾಮಪತ್ರ ಹಿಂಪಡೆಯುವ ವೇಳೆಗೆ ಅಥವಾ ನಾಮಪತ್ರ ಪರಿಶೀಲನೆ ಹಂತದಲ್ಲಿ ಯಾರಿಗೆ ಸಿ ಫಾರಂ ನೀಡುತ್ತದೆಯೋ ಅವರು ಪಕ್ಷದ ಅಧಿಕೃತ ಅಭ್ಯರ್ಥಿ ಆಗಲಿದ್ದಾರೆಂಬ ಮಾಹಿತಿಗಳಿವೆ.

ಇದನ್ನೂ ಓದಿ- ʼಲಿಂಗಾಯತ ಸಿಎಂʼ ಘೋಷಣೆ ಬಗ್ಗೆ ಯಾವುದೇ ನಿರ್ಣಯ ಆಗಿಲ್ಲ : ಸಿಎಂ ಸ್ಪಷ್ಟನೆ

ಕೃಷ್ಣೇಗೌಡ ಅವರು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಭೌತಿಕವಾಗಿ ನಾಮಪತ್ರದೊಂದಿಗೆ ಬಿ ಫಾರಂ ಸಲ್ಲಿಸದ ಕಾರಣ ಪರಿಗಣಿಸಲು ತಾಂತ್ರಿಕ ತೊಡಕು ಎದುರಾಗಲಿದೆ ಎಂದು ಹೇಳಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News