KKRTC ಸಿಬ್ಬಂದಿಗೆ ಪ್ರೀಮಿಯಂ ರಹಿತ 1.20 ಕೋಟಿ ರೂ. ಅಪಘಾತ ಪರಿಹಾರ ವಿಮೆ

Insurance without premium: ದೇಶದ ಸಾರಿಗೆ ನಿಗಮಗಳಲ್ಲಿ ಮೊದಲ ಬಾರಿಗೆ 1.20 ಕೋಟಿ ರೂ.ಗಳ ಅಪಘಾತ ವಿಮೆ ಸಾರಿಗೆ ನೌಕರರಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಜಾರಿಗೆ ತರಲಾಗಿದೆ. 

Written by - Puttaraj K Alur | Last Updated : Dec 22, 2023, 07:52 PM IST
  • KKRTC ಸಿಬ್ಬಂದಿಗೆ ಪ್ರೀಮಿಯಂ ರಹಿತ 1.20 ಕೋಟಿ ರೂ. ಅಪಘಾತ ಪರಿಹಾರ ವಿಮೆ ಜಾರಿ
  • ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆಗೆ ರಾಜ್ಯ ಸರ್ಕಾರದ ಯೋಜನೆಯ ಒಡಂಬಡಿಕೆ
  • ಸಾರಿಗೆ ಸಂಸ್ಥೆ ನೌಕರ ಮರಣದ ಸಂದರ್ಭ ಅವಲಂಬಿತರಿಗೆ ಆರ್ಥಿಕ ಬೆಂಬಲ ನೀಡಲಿರುವ ಯೋಜನೆ
KKRTC ಸಿಬ್ಬಂದಿಗೆ ಪ್ರೀಮಿಯಂ ರಹಿತ 1.20 ಕೋಟಿ ರೂ. ಅಪಘಾತ ಪರಿಹಾರ ವಿಮೆ title=
1.20 ಕೋಟಿ ರೂ. ಅಪಘಾತ ಪರಿಹಾರ ವಿಮೆ

ಬೆಂಗಳೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ(KKRTC)ವು ತನ್ನ ಸಿಬ್ಬಂದಿಗಳಿಗೆ ಪ್ರೀಮಿಯಂ ರಹಿತ 1.20 ಕೋಟಿ ರೂ. ಅಪಘಾತ ಪರಿಹಾರ‌ ವಿಮಾ ಯೋಜನೆಯನ್ನು ಜಾರಿಗೊಳಿಸಿದೆ.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಗುರುವಾರ ಕಲ್ಯಾಣ ಕರ್ನಾಟಕ ಸಾರಿಗೆ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕರ್ನಾಟಕ ವಲಯದ ಮುಖ್ಯಸ್ಥ ನವನೀತ್ ಕುಮಾರ್ ಅವರೊಂದಿಗೆ ಈ ವಿಮಾ ಯೋಜನೆಯ ಒಡಂಬಡಿಕೆ ವಿನಿಮಯ ಮಾಡಿಕೊಂಡರು.

ಈ ವಿಮಾ ಯೋಜನೆಯು ಕರ್ತವ್ಯದಲ್ಲಿರುವ ಅಥವಾ ಕರ್ತವ್ಯದಲ್ಲಿರದಂತಹ ಸಾರಿಗೆ ಸಂಸ್ಥೆಯ ನೌಕರ ಮರಣದ ಸಂದರ್ಭದಲ್ಲಿ ಅವಲಂಬಿತರಿಗೆ ಆರ್ಥಿಕ ಬೆಂಬಲ ನೀಡಲಿದೆ. ಈ ಯೋಜನೆ ಮೂಲಕ ಸಂತ್ರಸ್ತ ಕುಟುಂಬಸ್ಥರಿಗೆ ಸುರಕ್ಷತೆ  ಒದಗಿಸಲು, ಫಲಾನುಭವಿಗಳಿಗೆ ದೊಡ್ಡ ಮೊತ್ತವನ್ನು ಒದಗಿಸಲಾಗುವುದು.

ಇದನ್ನೂ ಓದಿ: ಕಂಪ್ಯೂಟರ್‌ ಆಪರೇಟರ್‌ ಮೂಲಕ ದಂದೆಗಿಳಿದ್ರಾ ಪಿಡಿಓ..?

ಇದಲ್ಲದೆ ಯೂನಿಯನ್ ಸೂಪರ್ ಸ್ಯಾಲರಿ ಅಕೌಂಟ್(USSA)ಯೋಜನೆಯು ಶಾಶ್ವತ ಅಥವಾ ಭಾಗಶಃ ಶಾಶ್ವತ ಅಂಗವೈಕಲ್ಯ ಎದುರಿಸುತ್ತಿರುವ ಉದ್ಯೋಗಿಗಳಿಗೆ 1 ಕೋಟಿ ರೂ. ಪ್ರಯೋಜನ ನೀಡುತ್ತದೆ. ಡೆಬಿಟ್ ಕಾರ್ಡ್‌ಗಳ ಮೇಲೆ 15 ಲಕ್ಷ ರೂ. ಕವರೇಜ್ ಒಳಗೊಂಡಿರುವ ಪ್ರತ್ಯೇಕ ಅಪಘಾತ ವಿಮೆಯನ್ನು ಸಹ ಒದಗಿಸಲಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ರಾಮಲಿಂಗಾರೆಡ್ಡಿಯವರು, ‘ಕಲ್ಯಾಣ‌ ಕರ್ನಾಟಕ‌ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗಳಿಗೆ ಪ್ರೀಮಿಯಂ ರಹಿತ 1.20 ಕೋಟಿ ರೂ. ವಿಮಾ ಯೋಜನೆಗೆ ಚಾಲನೆ ನೀಡಲಾಗಿದೆ. ಸಾರಿಗೆ ನಿಗಮದ ಸಿಬ್ಬಂದಿಗೆ ಇತ್ತೀಚಿನ ದಿನಗಳಲ್ಲಿ ಅಪಘಾತದಿಂದ ಆಗುತ್ತಿರುವ ಸಾವು-ನೋವಿನ ಪ್ರಮಾಣ ಗಮನಿಸಿ, ನಿಗಮವು ನೌಕರರು ವೈಯಕ್ತಿಕ / ಕರ್ತವ್ಯ ನಿರತ ಸಮಯದಲ್ಲಿ ಅಪಘಾತದಿಂದ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ, ಅಂಗನ್ಯೂನ್ಯತೆಗೆ ಒಳಗಾದಲ್ಲಿ ಸಿಬ್ಬಂದಿಗಳಿಗೆ ದೊಡ್ಡ ಮೊತ್ತದಷ್ಟು ಹಣ ದೊರೆಯುವಂತೆ ಮಾಡುವ ಉದ್ದೇಶದಿಂದ ಯೂನಿಯನ್ ಬ್ಯಾಕ್ ಆಫ್ ಇಂಡಿಯಾ ರವರೊಂದಿಗೆ Union Super Salary Account (USSA) ಯೋಜನೆಯ ಸೌಲಭ್ಯ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಲಾಗಿದೆ.

ದೇಶದ ಸಾರಿಗೆ ನಿಗಮಗಳಲ್ಲಿ ಮೊದಲ ಬಾರಿಗೆ 1.20 ಕೋಟಿ ರೂ.ಗಳ ಅಪಘಾತ ವಿಮೆ ಸಾರಿಗೆ ನೌಕರರಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಜಾರಿಗೆ ತರಲಾಗಿದೆ. 

ಇದನ್ನೂ ಓದಿ: ಚಿಕ್ಕನಾಯಕನಹಳ್ಳಿ ತಾಲೂಕು ದಂಡಾಧಿಕಾರಿ ಗೀತಾ ಗರಂ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News