Heart Attack: ತಿಂಡಿ ತಿನ್ನಲು ಬಂದಿದ್ದ ವಿದ್ಯಾರ್ಥಿ ಹೃದಯಾಘಾತದಿಂದ ಹೋಟೆಲ್​ನಲ್ಲೇ ಸಾವು!

ಹೋಟೆಲ್​ನಲ್ಲಿ ತಿಂಡಿ ತಿನ್ನುತ್ತಿರುವಾಗಲೇ ವಿದ್ಯಾರ್ಥಿಯೊಬ್ಬರಿಗೆ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರಿನಲ್ಲಿ ನಡೆದಿದೆ.

Written by - Prashobh Devanahalli | Edited by - Puttaraj K Alur | Last Updated : Feb 7, 2022, 07:56 PM IST
  • ಹೋಟೆಲ್​ಗೆ ತಿಂಡಿ ತಿನ್ನಲು ಬಂದಿದ್ದ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಸಾವು
  • ಹುಣಸೂರು ಪಟ್ಟಣದ ಹೋಟೆಲ್ ನಲ್ಲಿ ನಡೆದಿರುವ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ
  • ಟೇಬಲ್ ಕುಳಿತ್ತಿದ್ದ ನಿತಿನ್ ಎಂಬ ವಿದ್ಯಾರ್ಥಿಗೆ ಹಠಾತ್ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ
Heart Attack: ತಿಂಡಿ ತಿನ್ನಲು ಬಂದಿದ್ದ ವಿದ್ಯಾರ್ಥಿ ಹೃದಯಾಘಾತದಿಂದ ಹೋಟೆಲ್​ನಲ್ಲೇ ಸಾವು!  title=
ಹೃದಯಾಘಾತದಿಂದ ಹೋಟೆಲ್ ನಲ್ಲಿಯೇ ವಿದ್ಯಾರ್ಥಿ ಸಾವು

ಮೈಸೂರು: ಹೋಟೆಲ್​ಗೆ ತಿಂಡಿ ತಿನ್ನಲು ಬಂದಿದ್ದ ವಿದ್ಯಾರ್ಥಿಯೊಬ್ಬ ಹೃದಯಾಘಾತ(Heart Attack)ದಿಂದ ಸಾವನ್ನಪ್ಪಿರುವ ಘಟನೆ ಹುಣಸೂರು ಪಟ್ಟಣ(Hunsur City)ದಲ್ಲಿ ನಡೆದಿದೆ. ಈ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹುಣಸೂರು ತಾಲೂಕಿನ ನಂಜಾಪುರ ಗ್ರಾಮದ ನಟರಾಜ್ ಅವರ ಪುತ್ರ ನಿತಿನ್(25) ಸಾವನ್ನಪ್ಪಿದ ನತದೃಷ್ಟ. ಇವರಿಗೆ ತಂದೆ-ತಾಯಿ, ಒಬ್ಬರು ಸಹೋದರಿ ಇದ್ದಾರೆ.

ಇದನ್ನೂ ಓದಿ: ಸರ್ಕಾರಿ ನೌಕರರೇ ಗಮನಿಸಿ! ಇನ್ಮುಂದೆ ಕಚೇರಿಯಿಂದ ಹೊರಡುವಾಗ ನಿಮ್ಮ ಬಳಿಯಿರುವ ನಗದು ಘೋಷಿಸಬೇಕು!

ನಿತಿನ್(Law Student Dies) ತಿಂಡಿ ತಿನ್ನಲು ಸ್ನೇಹಿತನೊಂದಿಗೆ ಹುಣಸೂರು ಪಟ್ಟಣದ ಹೋಟೆಲ್(Hunsur Hotel) ತೆರಳಿದ್ದರು. ತಿಂಡಿಗೆ ಆಡ್೯ರ್ ಮಾಡಿದ್ದ ಅವರು ಸ್ನೇಹಿತನೊಂದಿಗೆ ಮಾತನಾಡುತ್ತಾ ಕುಳಿತಿದ್ದರು. ತಿಂಡಿ ಬರುವಷ್ಟರಲ್ಲೇ ಹೃದಯಾಘಾತದಿಂದ ನಿತಿನ್ ತಾವು ಕುಳಿತಿದ್ದ ಟೇಬಲ್​ ಮೇಲೆಯೇ ಹಠಾತ್​ ಕುಸಿದು ಬಿದ್ದಿದ್ದಾರೆ. ಇದ್ದಕ್ಕಿದ್ದಂತೆಯೇ ನಿತಿನ್ ಕುಸಿದುಬಿದ್ದಿದ್ದನ್ನು ಕಂಡ ಸ್ನೇಹಿತ ಹಾಗೂ ಹೋಟೆಲ್ ನವರು ಉಪಚರಿಸಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ಅಷ್ಟರಲ್ಲಾಗಲೇ ನಿತಿನ್ ಪ್ರಾಣಪಕ್ಷಿ ಹಾರಿಹೋಗಿತ್ತು. ಯುವಕ ಹೋಟೆಲ್ ನಲ್ಲಿದ್ದ ಕೊನೆ ಕ್ಷಣದ ದೃಶ್ಯವು ಸಿಸಿಟಿವಿ ಕ್ಯಾಮೆರಾ(CCTV Camare)ದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: DK Shivakumar : 'ಹಿಜಾಬ್ ವಿವಾದ ಇಡೀ ದೇಶಕ್ಕೆ ದೊಡ್ಡ ಅಪಮಾನ'

ನಿತಿನ್ ಮೈಸೂರಿನ ವಿದ್ಯಾವರ್ಧಕ ಕಾಲೇಜಿನ 4ನೇ ವರ್ಷದ ಎಲ್.ಎಲ್.ಬಿ ವಿದ್ಯಾರ್ಥಿ(LLB Student)ಯಾಗಿದ್ದ. ಹೃದಯಾಘಾತದಿಂದ ಮೃತಪಟ್ಟ ವಿದ್ಯಾರ್ಥಿಯ ಶವದ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಅವರ ಶವವನ್ನು ಸ್ವಗ್ರಾಮ ನಂಜಾಪುರಕ್ಕೆ ಕೊಂಡೊಯ್ದು ಅಂತ್ಯಕ್ರಿಯೆ ನಡೆಸಲಾಯಿತು. ಈ ಘಟನೆ ಕುರಿತು ಹುಣಸೂರು ಪೊಲೀಸ್​ ಠಾಣೆ(Hunsur Police Station)ಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News