Karnataka Budget 2024: ಸಿಎಂ ಸಿದ್ದರಾಮಯ್ಯ ಅವರಿಂದ ನಾಳೆ ದಾಖಲೆಯ ಬಜೆಟ್ ಮಂಡನೆ

ಸಿಎಂ ಸಿದ್ದರಾಮಯ್ಯ ನಾಳೆ ದಾಖಲೆಯ 14 ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಆ ಮೂಲಕ 13 ಬಾರಿ ಬಜೆಟ್ ಮಂಡನೆಯ ದಾಖಲೆಯನ್ನು ಹೊಂದಿದ್ದ ರಾಮಕೃಷ್ಣ ಹೆಗಡೆಯವರ ದಾಖಲೆಯನ್ನು ಮುರಿಯಲಿದ್ದಾರೆ.

Written by - RACHAPPA SUTTUR | Edited by - Manjunath N | Last Updated : Feb 15, 2024, 08:44 PM IST
  • ರಾಮಕೃಷ್ಣ ಹೆಗಡೆ ದಾಖಲೆ ಮುರಿಯಲಿರುವ ಸಿದ್ದರಾಮಯ್ಯ
  • 13 ಬಾರಿ ಬಜೆಟ್ ಮಂಡನೆ ಮಾಡಿದ್ದ ಹೆಗಡೆ
  • ಇದೀಗ 14 ನೇ ಬಜೆಟ್ ಮಂಡನೆ ಮಾಡಲಿರುವ ಸಿದ್ದರಾಮಯ್ಯ
Karnataka Budget 2024: ಸಿಎಂ ಸಿದ್ದರಾಮಯ್ಯ ಅವರಿಂದ ನಾಳೆ ದಾಖಲೆಯ ಬಜೆಟ್ ಮಂಡನೆ title=
file photo

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನಾಳೆ ದಾಖಲೆಯ 14 ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಆ ಮೂಲಕ 13 ಬಾರಿ ಬಜೆಟ್ ಮಂಡನೆಯ ದಾಖಲೆಯನ್ನು ಹೊಂದಿದ್ದ ರಾಮಕೃಷ್ಣ ಹೆಗಡೆಯವರ ದಾಖಲೆಯನ್ನು ಮುರಿಯಲಿದ್ದಾರೆ.

ನಾಳೆ ಮಂಡನೆಯಾಗಲಿರುವ ಬಜೆಟ್ನ ಮೊತ್ತ ಅಂದಾಜು  3.80 ಲಕ್ಷ ಕೋಟಿ ರೂ ಮೊತ್ತ ಎನ್ನಲಾಗಿದೆ.ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜನಪ್ರಿಯ ಯೋಜನೆ ಘೋಷಣೆಗಳು ಜೊತೆಗೆ ಹಣಕಾಸಿನ ಸಮತೋಲನ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ.ಬಜೆಟ್ ನಲ್ಲಿ ಅಂದಾಜು 90 ಸಾವಿರ ಕೋಟಿ ಸಾಲ ಪ್ರಸ್ತಾವನೆಯನ್ನು ಸಿಎಂ ಮಾಡಲಿದ್ದು, 5 ಗ್ಯಾರಂಟಿ ಯೋಜನೆಗಳಿಗೆ ಅಂದಾಜು 60 ರಿಂದ 65 ಸಾವಿರ ಕೋಟಿ ಮೀಸಲಿಡುವ ಸಾಧ್ಯತೆ ಇದೆ

ಪಂಚಗ್ಯಾರಂಟಿ ಯೋಜನೆಯಿಂದ ಬೊಕ್ಕಸಕ್ಕೆ ಹೊರೆಯಾಗುತ್ತಿದ್ದು,ಇದಕ್ಕಾಗಿ ಡೀಸೆಲ್ ಹಾಗೂ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆ ಹೆಚ್ಚಳ ಮಾಡಲಾಗುತ್ತಿದೆ, ಅದರಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 1 ರೂ ಹೆಚ್ಚಳ ಹಾಗೂ ಡೀಸೆಲ್ ಲೀಟರ್ ಗೆ 2 ರೂಪಾಯಿ ಏರಿಕೆಯಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಮುಂದ್ರಾಂಕ ಮತ್ತು ನೊಂದಣಿ ದರ ಹೆಚ್ಚಳವಾಗುವ ಸಾಧ್ಯತೆ ಇದೆ.

ಬೆಂಗಳೂರು ಸೇರಿದಂತೆ ಮೈಸೂರು,ಮಂಗಳೂರು, ತುಮಕೂರು, ಶಿವಮೊಗ್ಗ, ದಾವಣಗೆರೆ,ಕಲಬುರಗಿ, ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ವಿಜಾಪುರ ವಹಾನಗರ ಸೇರಿದಂತೆ ಎರಡು ಮತ್ತು ಮೂರನೇ ನಗರಗಳಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡಲಾಗುತ್ತಿದೆ.ಇನ್ನೊಂದೆಡೆಗೆ ಬೀಯರ್ ಮೇಲಿನ ದರವು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಜಾಕ್ ಪಾಟ್ ಪ್ರೇಮೋತ್ಸವ ವೇದಿಕೆಯಲ್ಲಿ ಸಂಗೀತ ಸುಧೆ!

ರೈತರ ಮಕ್ಕಳನ್ನು ವಿವಾಹವಾದರೆ,5 ಲಕ್ಷ ನಗದು ಹಣಕಾಸಿನ ನೆರವು ಸೇರಿದಂತೆ ರಾಜ್ಯದ 100 ಕಡೆ ಮುಜರಾಯಿ ಇಲಾಖೆಗೆ ವ್ಯಾಪ್ತಿಗೆ ಬರುವ ರಾಮಮಂದಿರ ದೇವಾಲಯಗಳ ಜೀರ್ಣೋದ್ದಾರೆ ೧೦೦ ಕೋಟಿ ರೂ ಹಣಕಾಸಿನ ನೆರವು ಘೋಷಿಸುವ ಸಾಧ್ಯತೆ ಇದೆ.ಇದಲ್ಲದೆ ಸರ್ಕಾರವು ಪೆಟ್ರೋಲ್, ಡೀಸೆಲ್, ಇಥೆನಾಲ್ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಳ ಪ್ರಸ್ತಾವನೆ ಇಡಲಿದೆ.ಅಲ್ಲದೇ ಸ್ಥಳೀಯ ಸಂಸ್ಥೆಗಳು ಸಂಗ್ರಹಿಸುತ್ತಿರುವ ಆಸ್ತಿ ತೆರಿಗೆಯಲ್ಲಿ ಮರು ವಿನಿಯೋಗದ ಮೂಲಕ ಸಂಪನ್ಮೂಲ ಕ್ರೋಢೀಕರಿಸಲು ಹೊರಟಿದೆ.

ಅಂದಾಜು 90 ಲಕ್ಷ ಅಸಂಘಟಿತ ಕಾರ್ಮಿಕರನ್ನು ಸಾಮಾಜಿಕ ಭದ್ರತಾ ಯೋಜನೆಗೆ ಒಳಪಡಿಸಲು ಮುಂದಾಗಿರುವ ಸರ್ಕಾರವು ಇದಕ್ಕಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಮೂಲಕ ಸಂಪನ್ಮೂಲ ಕ್ರೋಢೀಕರಿಸಲಿದೆ.ಕಾರ್ಮಿಕ ಇಲಾಖೆಯ ಹೊಸ ಯೋಜನೆಗಳ ಪಟ್ಟಿಯಲ್ಲಿ ಈ ಬಗ್ಗೆ ವಿಸ್ತ್ರತವಾಗಿ ಹೇಳಲಾಗಿದೆ.

ರಾಜ್ಯದಲ್ಲಿರುವ ಸುಮಾರು 90 ಲಕ್ಷ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗಾಗಿ ಕಾರ್ಮಿಕ ಇಲಾಖೆಯು ಹೊಸ ಯೋಜನೆ ರೂಪಿಸಿದೆ. ಈ ಯೋಜನೆ ಅನುಷ್ಠಾನದಿಂದ ರಾಜ್ಯದ ಮೇಲೆ ಯಾವುದೇ ಆರ್ಥಿಕ ಹೊರೆ ಉಂಟಾಗುವುದಿಲ್ಲ ಎಂದು ಕಾರ್ಮಿಕ ಇಲಾಖೆಯು ಹೊಸ ಯೋಜನೆ ಪಟ್ಟಿಯಲ್ಲಿ ಹೇಳಿದೆ. ಆದರೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಮೂಲಕ ಈ ಯೋಜನೆಗೆ ಸರಿದೂಗಿಸಲಿದೆ.

ತಗಲುವ ವೆಚ್ಚವನ್ನು ಕಾರ್ಮಿಕ ಇಲಾಖೆಯು ರೂಪಿಸಿರುವ ಈ ಯೋಜನೆಗೆ ಸಚಿವ ಸಂತೋಷ್ ಲಾಡ್ ಅವರು ಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು, ಮೋಟಾರು ಸಾರಿಗೆ ಹಾಗೂ ಕಾರ್ಮಿಕರನ್ನು ಹೊರತುಪಡಿಸಿ ರಾಜ್ಯದಲ್ಲಿ ಅಂದಾಜು 90 ಲಕ್ಷ ಅಸಂಘಟಿತ ಕಾರ್ಮಿಕರಿದ್ದಾರೆ. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ ಅಡಿಯಲ್ಲಿ ಅಪಘಾತ ಪರಿಹಾರ, ಶೈಕ್ಷಣಿಕ ಧನ ಸಹಾಯ, ಹೆರಿಗೆ ಸಹಾಯಧನ, ಶವ ಸಂಸ್ಕಾರ ಧನ ಸಹಾಯ ಒದಗಿಸಲು ಹೊಸ ಯೋಜನೆ ರೂಪಿಸುವ ಮೂಲಕ ಸಮಗ್ರ ಯೋಜನೆ ರೂಪಿಸಲು ಪ್ರಸ್ತಾಪಿಸಲಾಗಿದೆ.

ರಾಜ್ಯಾದ್ಯಂತ ಮಾರಾಟವಾಗುವ ಪೆಟ್ರೋಲ್‌, ಡೀಸೆಲ್,ಇಥೆನಾಲ್ ಸೇರಿ ಪೆಟ್ರೋಲಿಯಂ ಇನ್ನಿತರೆ ಉತ್ಪನ್ನಗಳ ಮೇಲೆ ಪ್ರತಿ ಲೀಟರ್‌ಗೆ 1 ರು.ನಷ್ಟು ಸೆಸ್ ವಿಧಿಸುವ ಮೂಲಕ ಸಂಪನ್ಮೂಲ ಕ್ರೋಢೀಕರಿಸಲು ಉದ್ದೇಶಿಸಿದೆ. ಆದ್ದರಿಂದ ಸರ್ಕಾರದ ಮೇಲೆ ಯಾವುದೇ ಆರ್ಥಿಕ ಹೊರೆ ಉಂಟಾಗುವುದಿಲ್ಲ ಎಂದು ಕಾರ್ಮಿಕ ಇಲಾಖೆಯು ಹೊಸ ಯೋಜನೆ ಪಟ್ಟಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಪೆಟ್ರೋಲಿಯಂ ಇನ್ನಿತರೆ ಉತ್ಪನ್ನಗಳ ಮೇಲೆ ಪ್ರತಿ ಲೀಟರ್‌ಗೆ 1 ರು.ನಷ್ಟು ಸೆಸ್ ವಿಧಿಸಿದರೆ ವರ್ಷಕ್ಕೆ ಸುಮಾರು 2,000 ಕೋಟಿ ಆದಾಯ ಕ್ರೋಢೀಕರಣವಾಗಲಿದೆ ಎಂದು ಅಧಿಕಾರಿಗಳು ಮೌಖಿಕವಾಗಿ ವಿವರಿಸಿದ್ದಾರೆ ಎಂದು ತಿಳಿದು ಬಂದಿದೆ.ಅದೇ ರೀತಿ ಇವೇ ಸೌಲಭ್ಯಗಳಿಗೆ ಹಣ ಹೊಂದಿಸಲು ಸ್ಥಳೀಯ ಸಂಸ್ಥೆಗಳು ಸಂಗ್ರಹಿಸುತ್ತಿರುವ ಆಸ್ತಿ ತೆರಿಗೆಗೂ ಸರ್ಕಾರವು ಕೈ ಹಾಕಿದೆ. ಸ್ಥಳೀಯ ಸಂಸ್ಥೆಗಳು ಈಗಾಗಲೇ ಸಂಗ್ರಹಿಸುತ್ತಿರುವ ಆಸ್ತಿ ತೆರಿಗೆಯನ್ನು ಮರು ವಿನಿಯೋಗ ಮಾಡುವ ಮೂಲಕ ಸಂಪನ್ಮೂಲ ಕ್ರೋಢೀಕರಣಕ್ಕೆ ದಾರಿ ಹುಡುಕಿಕೊಂಡಿದೆ.

ಇದನ್ನೂ ಓದಿ: ಕ್ರೈಂ ಕಂಟೆಂಟ್ ಜೊತೆಗೊಂದು ತ್ರಿಕೋನ‌ ಪ್ರೇಮಕಥೆ.. ʼಎವಿಡೆನ್ಸ್ʼ ಲಿರಿಕಲ್ ಸಾಂಗ್ ರಿಲೀಸ್!

2024 ಮೊದಲಾರ್ಧದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಕೇಂದ್ರ ಸರ್ಕಾರವು ಪ್ರತಿ ಲೀಟರ್‌ಗೆ 4 ರಿಂದ 6 ರೂಪಾಯಿಗಳವರೆಗೆ ಬೆಲೆ ಇಳಿಕೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ತೈಲ ಮಾರುಕಟ್ಟೆ ಕಂಪನಿಗಳೊಂದಿಗೆ ಮುಂದುವರೆಸಿದೆ. ಬೆಲೆ ಕಡಿತದ ಚರ್ಚೆ ಸಮಾನ ಹೊರೆಯನ್ನು ಸರ್ಕಾರ ಮತ್ತು ಒಎಂಸಿಗಳಿಗೆ ವಹಿಸುವ ಪ್ರಸ್ತಾವನೆಯೂ ಸಲ್ಲಿಕೆಯಾಗಿದೆ ಎಂದು ಗೊತ್ತಾಗಿದೆ.ಪ್ರತಿ ಲೀಟರ್‌ಗೆ 10 ರು.ವರೆಗೆ ಹೆಚ್ಚಿನ ಬೆಲೆ ಕಡಿತಗೊಳಿಸಬಹುದು ಎನ್ನಲಾಗಿದೆ.

ಇಂಧನ ಬೆಲೆ ಕಡಿತವು ಮೂರು ತಂಗಳ ಗರಿಷ್ಠ ಶೇ.5.55ಕ್ಕೆ ಏರಿದರೆ ಚಿಲ್ಲರೆ ಹಣದುಬ್ಬರವನ್ನು ತಗ್ಗಿಸುತ್ತದೆ.ಕಳೆದ ಮೂರು ತಿಂಗಳಿನಿಂದ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 70-80 ಡಾಲರ್‌ಗಳ ವ್ಯಾಪ್ತಿಯಲ್ಲಿ ತೂಗಾಡುತ್ತಿದೆ.ಹೀಗಾಗಿ ಕೇಂದ್ರ ಸರ್ಕಾರವು ಇಂಧನ ಬೆಲೆ ಕಡಿತದ ಪರವಾಗಿದೆ ಎಂದು ಹೇಳಲಾಗಿದೆ.ನವೆಂಬರ್ 2021 ಮತ್ತು ಮೇ 2022 ರಲ್ಲಿ ಎರಡು ಕಂತುಗಳಲ್ಲಿ ಕ್ರಮವಾಗಿ ಪೆಟ್ರೋಲ್‌ ಮತ್ತು ಡೀಸೆಲ್ ಮೇಲೆ ಪ್ರತಿ ಲೀಟರ್‌ಗೆ ಒಟ್ಟು 13 ರು ಮತ್ತು 16 ರು ನಷ್ಟು ಕಡಿಮೆ ಮಾಡಿತ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News