Online Fraud: ಆನ್ಲೈನ್ ನಲ್ಲಿ ಟೀ ಶರ್ಟ್ ಬುಕ್ ಮಾಡಿದ್ದ ಮಹಿಳೆ ಕಳೆದುಕೊಂಡಿದ್ದು ಬರೋಬ್ಬರಿ 10 ಲಕ್ಷ ರೂ..!

ಇಲ್ಲೇ ನೋಡಿ ಮಹಿಳೆ ಯಾಮಾರಿದ್ದು. ಮಹಿಳೆಯ ರಿಪ್ಲೈಗಾಗಿ ಕಾದು ಕುಳಿತ್ತಿದ್ದ ಆನ್ಕೈನ್ ವಂಚಕರು ಅಚ್ಚ ಕನ್ನಡದಲ್ಲಿ ಮಾತನಾಡಿ ಮಹಿಳೆಗೆ ಉಂಡೆನಾಮ ಹಾಕಿದ್ದಾರೆ. ನಿಮಗೆ ಲಾಟರಿ ಮೂಲಕ ಕಾರು ಬಹುಮಾನ ಬಂದಿದೆ. ನಿಮಗೆ ಕಾರು ಬೇಕೋ ಹಣ ಬೇಕೋ ಎಂದು ಕೇಳಿದ್ದಾರೆ. ಮೊದಲೇ ಆರ್ಥಿಕ ಸಮಸ್ಯೆಯಲ್ಲಿದ್ದ ಮಹಿಳೆ ಕಾರಿನ ಬದಲು ಹಣ ನೀಡಿ ಎಂದಿದ್ದರು.

Written by - Bhavishya Shetty | Last Updated : Jan 13, 2023, 11:56 AM IST
    • ಆನ್ಲೈನ್ ಆ್ಯಪ್ ನಲ್ಲಿ ಅರುಣಾ ಎಂಬುವವರು ಒಂದು ಟೀ ಶರ್ಟ್ ಬುಕ್ ಮಾಡಿದ್ದರು
    • ಯಲಹಂಕದ ವ್ಯಕ್ತಿಯೊಬ್ಬರಿಗೆ 80 ಸಾವಿರ ರೂಪಾಯಿ ವಂಚಿಸಿರುವ ಮಾಹಿತಿ ಸಹ ಲಭ್ಯ
    • ಈಶಾನ್ಯ ವಿಭಾಗ ಸಿಇಎನ್ ಠಾಣೆಯಲ್ಲಿ ದೂರು ದಾಖಲು
Online Fraud: ಆನ್ಲೈನ್ ನಲ್ಲಿ ಟೀ ಶರ್ಟ್ ಬುಕ್ ಮಾಡಿದ್ದ ಮಹಿಳೆ ಕಳೆದುಕೊಂಡಿದ್ದು ಬರೋಬ್ಬರಿ 10 ಲಕ್ಷ ರೂ..! title=
online fraud

Online Fraud in Bengaluru: ಬೆಂಗಳೂರು: ಅತಿಯಾಸೆಗೆ ಬಿದ್ರೆ ಏನೆಲ್ಲಾ ಆಗುತ್ತೆ ಎಂಬುದಕ್ಕೆ ಇಲ್ಲಿ ನಡೆದಿರುವ ಘಟನೆಯೇ ಸಾಕ್ಷಿಯಾಗಿದೆ. ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಿಶೋ ಎಂಬ ಆನ್ಲೈನ್ ಆ್ಯಪ್ ನಲ್ಲಿ ಅರುಣಾ ಎಂಬುವವರು ಒಂದು ಟೀ ಶರ್ಟ್ ಬುಕ್ ಮಾಡಿದ್ದರು. ಬುಕ್ ಮಾಡಿದ ಕೆಲ ದಿನಗಳಲ್ಲೇ ಟೀ ಶರ್ಟ್ ಜೊತೆಗೆ ಲೆಟರ್, ಸ್ಕ್ರಾಚ್ ಕಾರ್ಡ್ ಸಹ ಬಂದಿತ್ತು. ಲೆಟರ್ ಪರಿಶೀಲಿಸಿದಾಗ ಲಾಟರಿ ಮುಖಾಂತರವಾಗಿ ನಿಮಗೆ ಕಾರು ಬಂದಿದೆ ಎಂದು ಬರೆದಿತ್ತು. ಇದನ್ನು ಗಮನಿಸಿದ್ದ ಮಹಿಳೆ ಪತ್ರದಲ್ಲಿ ಇದ್ದ ವಾಟ್ಸ್ ಆ್ಯಪ್ ಸಂಖ್ಯೆಗೆ ಮೆಸೇಜ್ ಮಾಡಿದ್ದಾರೆ.

ಇದನ್ನೂ ಓದಿ: ʼಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿʼ.. ಯುವಶಕ್ತಿ ದೇಶದ ಶಕ್ತಿ

ಇಲ್ಲೇ ನೋಡಿ ಮಹಿಳೆ ಯಾಮಾರಿದ್ದು. ಮಹಿಳೆಯ ರಿಪ್ಲೈಗಾಗಿ ಕಾದು ಕುಳಿತ್ತಿದ್ದ ಆನ್ಕೈನ್ ವಂಚಕರು ಅಚ್ಚ ಕನ್ನಡದಲ್ಲಿ ಮಾತನಾಡಿ ಮಹಿಳೆಗೆ ಉಂಡೆನಾಮ ಹಾಕಿದ್ದಾರೆ. ನಿಮಗೆ ಲಾಟರಿ ಮೂಲಕ ಕಾರು ಬಹುಮಾನ ಬಂದಿದೆ. ನಿಮಗೆ ಕಾರು ಬೇಕೋ ಹಣ ಬೇಕೋ ಎಂದು ಕೇಳಿದ್ದಾರೆ. ಮೊದಲೇ ಆರ್ಥಿಕ ಸಮಸ್ಯೆಯಲ್ಲಿದ್ದ ಮಹಿಳೆ ಕಾರಿನ ಬದಲು ಹಣ ನೀಡಿ ಎಂದಿದ್ದರು. ಇದನ್ನೇ ಬಂಡವಾಳ‌ ಮಾಡಿಕೊಂಡ ಚೋರರು ಮೊದಲಿಗೆ ಪ್ರೊಸೆಸಿಂಗ್ ಫೀ ಎಂದು 14,800 ರೂ ಕಳುಹಿಸಲು ಹೇಳಿದ್ದರು. ಇವರ ಮಾತನ್ನು ನಂಬಿದ್ದ ಮಹಿಳೆ ಹಣ ಕಳುಹಿಸಿದ ನಂತರ ಮತ್ತೆ ಮತ್ತೆ ಕರೆ ಮಾಡಿ ನಿಮಗೆ ಇಂಟರ್ ನ್ಯಾಶನಲ್ ಬ್ಯಾಂಕ್ ನಿಂದ ಹಣ ಡಬ್ಬಲ್ ಆಗಿದೆ. ನಿಮ್ಮ ಅಕೌಂಟ್ ಗೆ 40 ಲಕ್ಷ ಹಣ ಬರುತ್ತದೆ. ಹೀಗಾಗಿ ಇತರೆ ಫೀಜ್ ಕಟ್ಟಿ ಎಂದು ಬರೋಬ್ಬರಿ 10 ಲಕ್ಷ ಹಣ ಹಾಕಿಸಿಕೊಂಡಿದ್ದಾರೆ. ಸದ್ಯ ಇಷ್ಟು ದಿನವಾದ್ರೂ ಹಣ ಬರದಿರುವುದರಿಂದ ಅನುಮಾನಗೊಂಡ ಮಹಿಳೆ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಆಗಾ ಇದು ಆನ್ ಲೈನ್ ವಂಚನೆ ಜಾಲ ಎಂಬುದು ಗೊತ್ತಾಗಿದ್ದು, ಮಹಿಳೆ ಸದ್ಯ ಕಂಗಾಲಾಗಿದ್ದಾರೆ.

ಸದ್ಯ ಇದೇ ರೀತಿ ಯಲಹಂಕದ ವ್ಯಕ್ತಿಯೊಬ್ಬರಿಗೆ 80 ಸಾವಿರ ರೂಪಾಯಿ ವಂಚಿಸಿರುವ ಮಾಹಿತಿ ಸಹ ಲಭ್ಯವಾಗಿದೆ.

ಇದನ್ನೂ ಓದಿ: ದೇಶದ ಮೊದಲ ಯೋಗ ಸಾಕ್ಷರತಾ ರಾಜ್ಯವಾಗುವತ್ತ ಕರ್ನಾಟಕದ ಹೆಜ್ಜೆ

ಈಗ ನೊಂದ ಮಹಿಳೆ ಈಶಾನ್ಯ ವಿಭಾಗ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News