ಬಡ್ತಿ‌ ಮೀಸಲಾತಿ ವಿಚಾರ: ಮತ್ತೆ ಕಾಲಾವಕಾಶ ಕೇಳಿದ ರಾಜ್ಯ ಸರ್ಕಾರ

ಸದರಿ ವಿಚಾರವಾಗಿ ಸರ್ಕಾರ ರಾಜ್ಯ ವಿಧಾನಸಭೆಯ ಉಭಯ ಮಂಡಳಗಳಲ್ಲಿ‌ ವಿಧೇಯಕ ಮಂಡಿಸಿದೆ.

Last Updated : Jan 16, 2018, 07:21 PM IST
ಬಡ್ತಿ‌ ಮೀಸಲಾತಿ ವಿಚಾರ: ಮತ್ತೆ ಕಾಲಾವಕಾಶ ಕೇಳಿದ ರಾಜ್ಯ ಸರ್ಕಾರ title=

ನವದೆಹಲಿ: ಬಡ್ತಿ‌ ನೀಡುವ ಸಂದರ್ಭದಲ್ಲೂ ಮೀಸಲಾತಿ ಅನ್ವಯಿಸುವ ಕುರಿತು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿದ್ದು, ಮತ್ತೆ ಮೂರು ತಿಂಗಳ ಕಾಲಾವಕಾಶ ಕೇಳಿದೆ.

ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ  ಪ್ರಮಾಣಪತ್ರದಲ್ಲಿ ಬಡ್ತಿ‌ ಮೀಸಲಾತಿ ವಿಚಾರವಾಗಿ ರಾಜ್ಯ ಸರ್ಕಾರವು ತೆಗೆದುಕೊಂಡ‌ ಕ್ರಮಗಳ ಬಗ್ಗೆ ತಿಳಿಸಿದೆ‌. ಸದರಿ ವಿಚಾರವಾಗಿ ಸರ್ಕಾರ ರಾಜ್ಯ ವಿಧಾನಸಭೆಯ ಉಭಯ ಮಂಡಳಗಳಲ್ಲಿ‌ ವಿಧೇಯಕ ಮಂಡಿಸಿದೆ. ವಿಧೇಯಕ ಸದನದ ಉಭಯ ಸದನಗಳಲ್ಲೂ ಪಾಸಾಗಿದೆ. ಆನಂತರ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿದೆ. ರಾಜ್ಯಪಾಲರು ರಾಷ್ಟ್ರಪತಿಗೆ ಕಳುಹಿಸಿಕೊಟ್ಟಿದ್ದಾರೆ ಎಂಬುದನ್ನು ತಿಳಿಸಲಾಗಿದೆ.

ಈ ನಡುವೆ ರಾಜ್ಯ ಸರ್ಕಾರ ಪರಿಷ್ಕೃತ ಜೇಷ್ಠತಾ ಪಟ್ಟಿ ತಯಾರಿಸುತ್ತಿದೆ. ಅಲ್ಲದೆ ಈಗಾಗಲೇ ಬಡ್ತಿ‌ ಪಡೆದಿದ್ದವರಿಗೆ ಹಿಂಭಡ್ತಿ ಮಾಡದಿರಲು ನಿರ್ಧರಿಸಿದೆ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.

Trending News