Bharat Jodo Yatra: : ರಸ್ತೆಯಲ್ಲಿ ಯುವಕನ ಪೇ ಸಿಎಂ ಶರ್ಟ್ ಬಿಚ್ಚಿಸಿ, ಹೊಡೆದ ಪೊಲೀಸ್

ಭಾರತ್ ಜೋಡೋ ಯಾತ್ರೆಯಲ್ಲಿ ಪೇ ಸಿಎಂ‌ ಎಂದು ಟೀ ಶರ್ಟ್ , ಧ್ವಜ ಹಿಡಿದು ಓಡಾಡುತ್ತಿದ್ದ ಯುವಕನನ್ನು ಯಾತ್ರೆ ವೇಳೆ ಹಿಡಿದ ಪೊಲೀಸರು ನಡುರಸ್ತೆಯಲ್ಲೇ ಟೀ ಶರ್ಟ್ ಬಿಚ್ಚಿಸಿದರು.

Written by - Zee Kannada News Desk | Last Updated : Oct 1, 2022, 09:13 PM IST
  • ಟೀ ಶರ್ಟ್ ಬಿಚ್ಚುತ್ತಿರುವಾಗ ಪೊಲೀಸ್ ಸಿಬ್ಬಂದಿ ಒಬ್ಬರು ಆತನ ತಲೆಗೆ, ಬೆನ್ನಿಗೆ ಹೊಡೆಯುವುದು ವೀಡಿಯೋದಲ್ಲಿ ಸೆರೆಯಾಗಿದ್ದು,
  • ಸದ್ಯ ಅಕ್ಷಯ್ ನನ್ನು ಚಾಮರಾಜನಗರ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
Bharat Jodo Yatra: : ರಸ್ತೆಯಲ್ಲಿ ಯುವಕನ ಪೇ ಸಿಎಂ ಶರ್ಟ್ ಬಿಚ್ಚಿಸಿ, ಹೊಡೆದ ಪೊಲೀಸ್ title=

ಚಾಮರಾಜನಗರ: ಭಾರತ್ ಜೋಡೋ ಯಾತ್ರೆಯಲ್ಲಿ ಪೇ ಸಿಎಂ‌ ಎಂದು ಟೀ ಶರ್ಟ್ , ಧ್ವಜ ಹಿಡಿದು ಓಡಾಡುತ್ತಿದ್ದ ಯುವಕನನ್ನು ಯಾತ್ರೆ ವೇಳೆ ಹಿಡಿದ ಪೊಲೀಸರು ನಡುರಸ್ತೆಯಲ್ಲೇ ಟೀ ಶರ್ಟ್ ಬಿಚ್ಚಿಸಿದರು.

ಟೀ ಶರ್ಟ್ ಬಿಚ್ಚುತ್ತಿರುವಾಗ ಪೊಲೀಸ್ ಸಿಬ್ಬಂದಿ ಒಬ್ಬರು ಆತನ ತಲೆಗೆ, ಬೆನ್ನಿಗೆ ಹೊಡೆಯುವುದು ವೀಡಿಯೋದಲ್ಲಿ ಸೆರೆಯಾಗಿದ್ದು ಸದ್ಯ ಅಕ್ಷಯ್ ನನ್ನು ಚಾಮರಾಜನಗರ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಹುಲ್ ಯಾತ್ರೆಯಲ್ಲಿ ಈತ  ಪೇಸಿಎಂ ಟೀ ಶರ್ಟ್ ಧರಿಸಿ, ಪೇ ಸಿಎಂ ಎಂಬ ಬಾವುಟ ಹಿಡಿದು ಅಕ್ಷಯ್ ಕುಮಾರ್ ಹೆಜ್ಜೆ ಹಾಕುತ್ತಿದ್ದರ ಸಂಬಂಧ ಚಾಮರಾಜನಗರ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಯುವಕನನ್ನು ಕಂಡ ಕೂಡಲೇ ದಾಳಿ ಮಾಡಿದ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರ ಎದುರಲ್ಲೇ ಯುವಕನಿಗೆ ಥಳಿಸಿ ಪೇಸಿಎಂ ಬಾವುಟ ಕಿತ್ತುಕೊಂಡು ಟೀ ಶರ್ಟ್ ಬಿಚ್ಚಿಸಿದ್ದಾರೆ.

Thawar Chand Gehlot : ರಾಜ್ಯಪಾಲ ಗೆಹ್ಲೋಟ್‌ಗೆ ಕೊರೋನಾ ಸೋಂಕು ದೃಢ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News