ಸ್ಟಾಲಿನ್ ನಾಡಿಗೆ ಕಳ್ಳತನದಿಂದ ನೀರು ಬಿಟ್ಟ ಕಾಂಗ್ರೆಸ್ ಸರ್ಕಾರದಿಂದ ರೈತರಿಗೆ ಮಹಾದ್ರೋಹ!: ಬಿಜೆಪಿ

Cauvery Water Sharing Dispute: ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ನಾಡಿಗೆ ಕಳ್ಳತನದಿಂದ ಬೇಕಾಬಿಟ್ಟಿಯಾಗಿ ನೀರು ಬಿಟ್ಟು, ರಾಜ್ಯದ ರೈತರಿಗೆ ದ್ರೋಹ ಬಗೆದದ್ದು ಮಾತ್ರವಲ್ಲದೆ, ರೈತರಿಗೆ ಭತ್ತ ಬೆಳೆಯಬೇಡಿ ಎಂದು ಕೃಷಿ ಸಚಿವರು ಬೆದರಿಕೆ ಹಾಕಿ ಕರ್ನಾಟಕವನ್ನು ದುಸ್ಥಿತಿಗೆ ತಳ್ಳಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.

Written by - Puttaraj K Alur | Last Updated : Sep 28, 2023, 03:57 PM IST
  • ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಆಹಾರ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ
  • ಅಸಮರ್ಪಕ ಬರ ನಿರ್ವಹಣೆ ಮತ್ತು ರೈತ ವಿರೋಧಿ ನೀತಿಗಳಿಂದ ಆಹಾರ ಕ್ಷಾಮ ಉಂಟಾಗಿದೆ
  • ಭತ್ತ ಬೆಳೆಯಬೇಡಿ ಎಂದು ರೈತರಿಗೆ ಬೆದರಿಕೆ ಹಾಕಿ ಕೃಷಿ ಸಚಿವರು ಕರ್ನಾಟಕವನ್ನು ದುಸ್ಥಿತಿಗೆ ತಳ್ಳಿದ್ದಾರೆ
ಸ್ಟಾಲಿನ್ ನಾಡಿಗೆ ಕಳ್ಳತನದಿಂದ ನೀರು ಬಿಟ್ಟ ಕಾಂಗ್ರೆಸ್ ಸರ್ಕಾರದಿಂದ ರೈತರಿಗೆ ಮಹಾದ್ರೋಹ!: ಬಿಜೆಪಿ  title=
ರಾಜ್ಯದಲ್ಲಿ ಆಹಾರ ಕ್ಷಾಮ!

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಅಸಮರ್ಪಕ ಬರ ನಿರ್ವಹಣೆ ಮತ್ತು ರೈತ ವಿರೋಧಿ ನೀತಿಗಳಿಂದ ಆಹಾರ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕುಸಿದು ಆಹಾರ ಕ್ಷಾಮ ಉಂಟಾಗಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಗುರುವಾರ ಟ್ವೀಟ್ ಮಾಡಿರುವ ಬಿಜೆಪಿ, ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ವಿಚಾರವಾಗಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ.  

ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ನಾಡಿಗೆ ಕಳ್ಳತನದಿಂದ ಬೇಕಾಬಿಟ್ಟಿಯಾಗಿ ನೀರು ಬಿಟ್ಟು, ರಾಜ್ಯದ ರೈತರಿಗೆ ದ್ರೋಹ ಬಗೆದದ್ದು ಮಾತ್ರವಲ್ಲದೆ, ರೈತರಿಗೆ ಭತ್ತ ಬೆಳೆಯಬೇಡಿ ಎಂದು ಕೃಷಿ ಸಚಿವರು ಬೆದರಿಕೆ ಹಾಕಿ ಕರ್ನಾಟಕವನ್ನು ದುಸ್ಥಿತಿಗೆ ತಳ್ಳಿದ್ದಾರೆ. ಹನಿ ನೀರಿಗೂ ಆರಂಭವಾಗಿರುವ ತತ್ವಾರ, ತುತ್ತು ಅನ್ನಕ್ಕೂ ವ್ಯಾಪಿಸಲು ಬಹಳ ದಿನಗಳು ಬೇಕಿಲ್ಲ. ಸಿದ್ದರಾಮಯ್ಯರ ಸರ್ಕಾರದ ಜೋಭದ್ರತನದಿಂದ ರಾಜ್ಯ ಕಂಡು ಕೇಳರಿಯದಂತಹ ಸಂಕಷ್ಟವನ್ನು ನಮ್ಮ ರಾಜ್ಯದ ಜನರು ಅನುಭವಿಸಬೇಕಾಗಿದೆ’ ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ಜೆಡಿಎಸ್ ಯಾರ ಜೊತೆಗೆ ಮೈತ್ರಿ ಮಾಡಿಕೊಂಡರೂ ನಮ್ಮ ತಕರಾರಿಲ್ಲ: ಸಿಎಂ ಸಿದ್ದರಾಮಯ್ಯ

ಪ್ರಧಾನಿ ಮೋದಿಯವರ ಯೋಜನೆಗೆ ‘ಕೈ’ ಅಡ್ಡಗಾಲು!

‘ತಾನೇ ಘೋಷಿಸಿದ ಯಾವುದೇ ಗ್ಯಾರಂಟಿಗಳನ್ನೂ ಸರಿಯಾಗಿ ಅನುಷ್ಠಾನ ಮಾಡದಿರುವುದಲ್ಲದೆ, ಪ್ರಧಾನಿ ಮೋದಿಯವರ ಸರ್ಕಾರ‌ ನೀಡಿದ ಜನಪರ ಯೋಜನೆಗಳನ್ನೂ ನಿಲ್ಲಿಸಿ, ಆ ಯೋಜನೆಗಳನ್ನು ಕಿತ್ತುಕೊಂಡು ಕನ್ನಡಿಗರಿಗೆ ದ್ರೋಹ‌ ಬಗೆಯುವುದೊಂದೆ ಕಾಂಗ್ರೆಸ್ ಪಕ್ಷದ ಗುರಿ. ಬಡರೋಗಿಗಳ ಬವಣೆ ನಿವಾರಣೆಗಾಗಿ ಪ್ರಧಾನಿ ಮೋದಿ ಸರ್ಕಾರ ಆರಂಭಿಸಿದ್ದ ಡಯಾಲಿಸಿಸ್‌ ಕೇಂದ್ರಗಳನ್ನು ಸಿದ್ದರಾಮಯ್ಯರ ಸರ್ಕಾರ ನಿರ್ವಹಣೆ ಮಾಡಲಾಗದೆ ರಾಜ್ಯದ ಬಡ ರೋಗಿಗಳ ಪ್ರಾಣಕ್ಕೆ ಕುತ್ತು ತಂದು ಚೆಲ್ಲಾಟವಾಡುತ್ತಿದೆ. ಮಾತೆತ್ತಿದರೆ ಕೇಂದ್ರ ಕೊಡಬೇಕು, ಪ್ರಧಾನಿಗಳು ಮಧ್ಯಪ್ರವೇಶ ಮಾಡಬೇಕೆಂದು ಹೇಳುವ ಸಿದ್ದರಾಮಯ್ಯನವರೇ, ಕೇಂದ್ರ ಕೊಟ್ಟ ಯೋಜನೆಗಳನ್ನು ಕನ್ನಡಿಗರಿಗೆ ಕನಿಷ್ಠ ಪಕ್ಷ ತಲುಪಿಸಿ’ ಎಂದು ಕುಟುಕಿದೆ.

ಕಾಂಗ್ರೆಸ್ಸಿನ ಕತ್ತಲು ರಾಜ್ಯದ ಗ್ಯಾರಂಟಿ..!

ಬಿಜಿಪಿ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ "ಪವರ್ ಸರ್‌ಪ್ಲಸ್ ಸ್ಟೇಟ್" ಸಾಧನೆ ಮಾಡಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕರ್ನಾಟಕದ ಎಲ್ಲಾ ಘನತೆಗಳನ್ನು ಕಳೆದು ಹಾಳುಮಾಡಿ ರಾಜ್ಯವನ್ನು ಕತ್ತಲಿಗೆ ದೂಡಿದೆ. ಉಚಿತ ವಿದ್ಯುತ್ ಕೊಡುತ್ತೇವೆಂದು ಕಿವಿಮೇಲೆ ಹೂವಿಟ್ಟ ಕಾಂಗ್ರೆಸ್ ಇದೀಗ ಹಣ ಕೊಡುತ್ತೇವೆಂದರೂ ವಿದ್ಯುತ್ ಪೂರೈಕೆ ಮಾಡದಷ್ಟು ನಿಶಕ್ತವಾಗಿದೆ. ಸಿದ್ದರಾಮಯ್ಯರ ಅಸಮರ್ಥ ಆಡಳಿತದಿಂದಾಗಿ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಸಂಪೂರ್ಣ ಕುಂಠಿತವಾಗಿದೆ. ಹೊರ ರಾಜ್ಯಗಳಿಂದಲೂ ವಿದ್ಯುತ್ ಖರೀದಿ ಮಾಡಲು ಕೂಡ ಸಿದ್ದರಾಮಯ್ಯರ ಸರ್ಕಾರಕ್ಕೆ ಯೋಗ್ಯತೆ ಇಲ್ಲ. ಈಗಾಗಲೇ ವಿದ್ಯುತ್ ದರ ಏರಿಕೆಯಿಂದ ಕಂಗೆಟ್ಟಿದ್ದ ಕೃಷಿ, ಕೈಗಾರಿಕೆಗಳು ವಿದ್ಯುತ್ ಅಭಾವದಿಂದ ಮತ್ತಷ್ಟು ಕುಗ್ಗಿ ಹೋಗಿವೆ. ಇದರ ನಡುವೆ ರಾಜ್ಯಕ್ಕೆ ಲೋಡ್ ಶೆಡ್ಡಿಂಗ್ ಭೂತ ಆಗಲೇ ಆವರಿಸಿದೆ. ಇದೇ ಕಾಂಗ್ರೆಸ್ಸಿನ ಕತ್ತಲು ರಾಜ್ಯದ ಗ್ಯಾರಂಟಿ..!’ ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: KRSನಿಂದ ಒಂದು ಹನಿ ನೀರು ಬಿಡಲ್ಲ, ಮತ್ತೆ ಬಂದ್ ಬೇಡ: ಡಿಸಿಎಂ ಡಿ.ಕೆ.ಶಿವಕುಮಾರ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News