ಬೆಂಗಳೂರು: ಮತ್ತೆ ಚಾಮುಂಡೇಶ್ವರಿಯಲ್ಲಿ ಚುನಾವಣೆಗೆ ನಿಲ್ಲಲ್ಲವೆಂದು ಹೇಳಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟೀಕಾಪ್ರಹಾರ ನಡೆಸಿದೆ. #ಬುರುಡೆರಾಮಯ್ಯ ಹ್ಯಾಶ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಈಗ ಒಡೆದ ಮನೆಯಾಗಿದೆ ಎಂದು ಹೇಳಿದೆ.
‘ಸ್ಪರ್ಧಿಸಿ ಗೆಲ್ಲಲು ಸೂಕ್ತ ಕ್ಷೇತ್ರವಿಲ್ಲದ ವ್ಯಕ್ತಿಯೊಬ್ಬರು ಮತ್ತೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಚಾಮುಂಡೇಶ್ವರಿಯಲ್ಲಿ ನಿಲ್ಲಲ್ಲ, ಬಾದಾಮಿಯಲ್ಲಿ ಗೆಲ್ಲಲ್ಲ, ಚಾಮರಾಜಪೇಟೆ ದಕ್ಕಲ್ಲ! ಅಂಗಳ ಅಳೆಯಲು ಸಾಧ್ಯವಿಲ್ಲದ ವ್ಯಕ್ತಿಯಿಂದ ಆಕಾಶ ಅಳೆಸಲು ಹೊರಟಿರುವುದು ಹಾಸ್ಯಾಸ್ಪದವಲ್ಲವೇ?’ ಎಂದು ಕುಟುಕಿದೆ.
ಇದನ್ನೂ ಓದಿ: GST Rates Hike: ಬಡವರ ಹೊಟ್ಟೆಗೆ ಒದೆಯುವುದೇ ಪ್ರಧಾನಿ ಮೋದಿಯವರ ‘ಅಚ್ಚೇ ದಿನ್’- ಸಿದ್ದರಾಮಯ್ಯ
ನನಗೆ ಕೊಂಕು ನುಡಿಯನ್ನು ಕೇಳಿ ಸಾಕಾಗಿದೆ ಎಂದು ಡಿಕೆಶಿ ಆಪ್ತ ಮಾಜಿ ಶಾಸಕನ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಅಕ್ಷರಶಃ ವಿಭಜಿಸಿಯೇ #ವಲಸೆರಾಮಯ್ಯ ವಿರಮಿಸುವುದು ನಿಶ್ಚಿತ!#ಬುರುಡೆರಾಮಯ್ಯ pic.twitter.com/WkZA2QfqCR
— BJP Karnataka (@BJP4Karnataka) July 18, 2022
‘ನನಗೆ ಕೊಂಕು ನುಡಿಯನ್ನು ಕೇಳಿ ಸಾಕಾಗಿದೆ ಎಂದು ಡಿಕೆಶಿ ಆಪ್ತ ಮಾಜಿ ಶಾಸಕನ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಅಕ್ಷರಶಃ ವಿಭಜಿಸಿಯೇ #ವಲಸೆರಾಮಯ್ಯ ವಿರಮಿಸುವುದು ನಿಶ್ಚಿತ!’ವೆಂದು ಬಿಜೆಪಿ ಟೀಕಿಸಿದೆ.
‘ಇದೇ ನನ್ನ ಕೊನೆಯ ಚುನಾವಣೆ ಎಂದು ಸಿಎಂ ಕುರ್ಚಿ ಮೇಲೆ ಟವೆಲ್ ಎಸೆದಿರುವ ಸಿದ್ದರಾಮಯ್ಯ ಒಂದು ಕಡೆಯಾದರೆ, ಸಿಎಂ ಆಗಲು ಕಾಲ ಕೂಡಿ ಬಂದಿದೆ ಎನ್ನುವ ಡಿ.ಕೆ.ಶಿವಕುಮಾರ್ ಇನ್ನೊಂದು ಕಡೆ. ಈ ನಡುವೆ ಸತೀಶ್ ಜಾರಕಿಹೊಳಿ ಕೂಡ ಸಿಎಂ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ’ ಎಂದು ಬಿಜೆಪಿ ಕಾಂಗ್ರೆಸ್ ನಾಯಕರ ಕಾಲೆಳೆದಿದೆ.
ಇದನ್ನೂ ಓದಿ: ‘ಜೈ ಭೀಮ್ʼ ಮತ್ತು ‘ಜನ ಗಣ ಮನ’ ಸಿನಿಮಾಗಳು ನನ್ನ ಮನ ಕಲಕಿವೆ: ಎಚ್ಡಿಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.