ಬೆಂಗಳೂರು: ಹೌದು. ನಾನು ಲಕ್ಕಿಡಿಪ್ ಸಿಎಂ ಎಂದು ಹೇಳಿ ‘ಆಪರೇಷನ್ ಕಮಲ’ದ ವಿರುದ್ಧ ಗುಡುಗಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಬಿಜೆಪಿ ತಿರುಗೇಟು ನೀಡಿದೆ.
#LuckyDipCMHDK! ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಕುಮಾರಸ್ವಾಮಿ ಅವರೇ, You are so lucky! ಎರಡು ಬಾರಿ ನಿಮಗೆ ಅದೃಷ್ಟ ಚೀಟಿಯ ಮೂಲಕ ಸಿಎಂ ಆಗಿದ್ದೀರಿ. ಎರಡಂಕೆಯ ಶಾಸಕರನ್ನು ಹಿಡಿದುಕೊಂಡು ಎರಡೆರಡು ಬಾರಿ ಚೀಟಿಯ ಮೂಲಕ ಮುಖ್ಯಮಂತ್ರಿಯಾಗುವುದು ಅಪೂರ್ವ ಸಂಗತಿ, ನೀವು ಅದೃಷ್ಟವಂತರು!’ ಎಂದು ಟೀಕಿಸಿದೆ.
ಕುಮಾರಸ್ವಾಮಿ ಅವರೇ,
You are so lucky!ಎರಡು ಬಾರಿ ನಿಮಗೆ ಅದೃಷ್ಟ ಚೀಟಿಯ ಮೂಲಕ ಸಿಎಂ ಆಗಿದ್ದೀರಿ.
ಎರಡಂಕೆಯ ಶಾಸಕರನ್ನು ಹಿಡಿದುಕೊಂಡು ಎರಡೆರಡು ಬಾರಿ ಚೀಟಿಯ ಮೂಲಕ ಮುಖ್ಯಮಂತ್ರಿಯಾಗುವುದು ಅಪೂರ್ವ ಸಂಗತಿ, ನೀವು ಅದೃಷ್ಟವಂತರು!
— BJP Karnataka (@BJP4Karnataka) July 6, 2022
‘ಲಕ್ಕಿಡಿಪ್‌ನಲ್ಲಿ ಗೆದ್ದರೆ ಆಳುತ್ತೇನೆ, ಸೋತರೆ ಅಳುತ್ತೇನೆ. ಲಕ್ಕಿಡಿಪ್ ಸಿಎಂ ಎಂದು ಕರೆದರೆ ಉರಿದು ಬೀಳುತ್ತೇನೆ, ಮೈ ಪರಚಿಕೊಳ್ಳುತ್ತೇನೆ. ನಾನ್ಯಾರು ಬಲ್ಲಿರಾ!? ನಾನೇ #LuckyDipCMHDK!’ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಇದನ್ನೂ ಓದಿ: PSI Recruitment Scam: ಅಮೃತ್ ಪೌಲ್ ಬಂಧಿಸಿದ ಸಿಐಡಿ ತಂಡಕ್ಕೆ ಎಚ್‌ಡಿಕೆ ಅಭಿನಂದನೆ
ಸಿದ್ದು ಹಾಸ್ಯೋತ್ಸವ!
ಇದೇನು ಸಿದ್ದರಾಮೋತ್ಸವ ಸಮಿತಿಯೋ ಅಥವಾ ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿಯೋ?
ಬಹುಶಃ ಇದು ಬಂಡಾಯ ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿಯಾಗಿರುವ ಸಾಧ್ಯತೆ ಇದೆ.#ಸಿದ್ದುಹಾಸ್ಯೋತ್ಸವ
— BJP Karnataka (@BJP4Karnataka) July 6, 2022
ದಾವಣಗೆರೆಯಲ್ಲಿ ಆಗಸ್ಟ್ 3ರಂದು ನಡೆಯಲಿರುವ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ಸಂಭ್ರಮ ‘ಸಿದ್ದರಾಮೋತ್ಸವ’ಕ್ಕೆ ‘ಸಿದ್ದರಾಮಯ್ಯ-75 ಅಮೃತ ಮಹೋತ್ಸವ ಸಮಿತಿ' ಭರ್ಜರಿ ಸಿದ್ಧತೆ ನಡಸಿದೆ. ‘ಸಿದ್ದರಾಮೋತ್ಸವ’ ಸಮಾವೇಶಕ್ಕಾಗಿ ವಿವಿಧ ಸಮಿತಿಗಳ ರಚನೆ ಮಾಡಿರುವುದನ್ನು ಬಿಜೆಪಿ ಟೀಕಿಸಿದೆ.
‘ಇದೇನು ಸಿದ್ದರಾಮೋತ್ಸವ ಸಮಿತಿಯೋ ಅಥವಾ ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿಯೋ? ಬಹುಶಃ ಇದು ಬಂಡಾಯ ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿಯಾಗಿರುವ ಸಾಧ್ಯತೆ ಇದೆ. #ಸಿದ್ದುಹಾಸ್ಯೋತ್ಸವ’ ಎಂದು ಬಿಜೆಪಿ ಕುಟುಕಿದೆ.
‘ಸಿದ್ದರಾಮೋತ್ಸವ ಸಮಿತಿಯಲ್ಲಿ ಗೌರವಾಧ್ಯಕ್ಷರು ಸೇರಿ 62 ಸದಸ್ಯರಿದ್ದಾರೆ. ಇದೇನು ಕರ್ನಾಟದ #G23 ನಾಯಕರ ಪಟ್ಟಿಯೇ? ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ನೇರಾನೇರ ಬೆದರಿಸಲು ಗುಂಪು ಕಟ್ಟಿಕೊಂಡಂತಿದೆ!’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: PSI Recruitment Scam: ಸಿಎಂ ಬೊಮ್ಮಾಯಿ, ಗೃಹಸಚಿವ ಆರಗ ಜ್ಞಾನೇಂದ್ರ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ
‘ಬಾದಾಮಿ ಕ್ಷೇತ್ರಕ್ಕೆ ಓಡಾಡುವುದು ಸಿದ್ದರಾಮಯ್ಯ ಅವರಿಗೆ ಕಷ್ಟವಾಗುತ್ತದೆಯಂತೆ! ಕೋಲಾರಕ್ಕೆ ಬನ್ನಿ ಎಂಬುದು ರಮೇಶ್ ಕುಮಾರ್ ಬಳಗದ ಆಗ್ರಹವಂತೆ! ನಿದ್ದೆ ಮಾಡುವವನಿಗೆ ಹಾಸಿಗೆ ನೀಡಿದ ಹಾಗಿದೆ ಅಹ್ವಾನಗಳು!’ ಎಂದು ಬಿಜೆಪಿ ಟೀಕಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ