ಹಿಂದುತ್ವದ ವಿರುದ್ಧ ನಿಂತವರಿಗೆ ಮಾತ್ರ ಕಾಂಗ್ರೆಸ್ ಪಕ್ಷದ ಪ್ರಮುಖ ಜವಾಬ್ದಾರಿ: ಬಿಜೆಪಿ ಆರೋಪ

'2018ರ ಚುನಾವಣಾ ಸಮಯದಲ್ಲಿ ವೀರಶೈವ-ಲಿಂಗಾಯಿತ ಪ್ರತ್ಯೇಕ ಧರ್ಮದ ರೂವಾರಿಯಾಗಿ ಸಮಾಜ ವಿಭಜನೆಯ ಮುಂದಾಳತ್ವ ವಹಿಸಿದ್ದ ಎಂ.ಬಿ.ಪಾಟೀಲ್ಗೆ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಲಾಗಿದೆ.

Written by - Zee Kannada News Desk | Last Updated : Mar 28, 2022, 04:32 PM IST
  • ಕಾಂಗ್ರೆಸ್ ಪಕ್ಷದ ಪ್ರಮುಖ ಜವಾಬ್ದಾರಿಗಳು ಹಿಂದುತ್ವದ ವಿರುದ್ಧ ನಿಂತವರಿಗೆ ಮಾತ್ರ!
  • ಎಂ.ಬಿ.ಪಾಟೀಲ್ ಗೆ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಿರುವುದು ಹಿಂದೂಗಳ ದೌರ್ಭಾಗ್ಯ
  • ವೀರಶೈವ - ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ
ಹಿಂದುತ್ವದ ವಿರುದ್ಧ ನಿಂತವರಿಗೆ ಮಾತ್ರ ಕಾಂಗ್ರೆಸ್ ಪಕ್ಷದ ಪ್ರಮುಖ ಜವಾಬ್ದಾರಿ: ಬಿಜೆಪಿ ಆರೋಪ title=
ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

ಬೆಂಗಳೂರು: ಹಿಂದುತ್ವದ ವಿರುದ್ಧ ನಿಂತವರಿಗೆ ಮಾತ್ರ ಕಾಂಗ್ರೆಸ್ ಪಕ್ಷ(Congress Party)ದ ಪ್ರಮುಖ ಜವಾಬ್ದಾರಿಗಳು ಎಂದು ಬಿಜೆಪಿ ಆರೋಪಿಸಿದೆ. #ಹಿಂದೂವಿರೋಧಿಕಾಂಗ್ರೆಸ್ ಹ್ಯಾಶ್ ಟ್ಯಾಗ್ ಬಳಸಿ ಸೋಮವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ವೀರಶೈವ - ಲಿಂಗಾಯತ ಪ್ರತ್ಯೇಕ ಧರ್ಮ(Lingayat vs Veerashaiva) ವಿಚಾರವಾಗಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

‘ಕಾಂಗ್ರೆಸ್ ಪಕ್ಷದ ಪ್ರಮುಖ ಜವಾಬ್ದಾರಿಗಳು ಹಿಂದುತ್ವದ ವಿರುದ್ಧ ನಿಂತವರಿಗೆ ಮಾತ್ರ! 2018ರ ಚುನಾವಣಾ ಸಮಯದಲ್ಲಿ ವೀರಶೈವ-ಲಿಂಗಾಯಿತ ಪ್ರತ್ಯೇಕ ಧರ್ಮ(Veerashaiva-Lingayat Issue)ದ ರೂವಾರಿಯಾಗಿ ಸಮಾಜ ವಿಭಜನೆಯ ಮುಂದಾಳತ್ವ ವಹಿಸಿದ್ದ ಎಂ.ಬಿ.ಪಾಟೀಲ್ ಅವರಿಗೆ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಹಿಂದೂಗಳ ದೌರ್ಭಾಗ್ಯವಿದು!’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: CET Exam: ಜೂನ್ ತಿಂಗಳಲ್ಲಿ ಸಿಇಟಿ ಪರೀಕ್ಷೆ

‘ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್(MB Patil)ಅವರೇ, ಒಂದು ವಿಚಾರ ಸ್ಪಷ್ಟಪಡಿಸುವಿರಾ? ಹಿಂದೂ ಸಮಾಜದ ವಿಭಜನೆಗಾಗಿ ನೀವು ನಡೆಸಿದ ವಿಫಲ ಯತ್ನದ ಬಗ್ಗೆ ನಾಡಿನ‌ ಜನತೆಯ ಕ್ಷಮೆ ಕೇಳುತ್ತೀರೋ ಅಥವಾ ನಿಮ್ಮ ಹಿಡನ್ ಅಜೆಂಡಾ ಜಾರಿಗಾಗಿ ಈ ಬಾರಿಯೂ ಯತ್ನಿಸುತ್ತೀರೋ? ಈ ಬಾರಿ ನಿಮ್ಮ ಪ್ರಚಾರದ ಸರಕೇನು?’ ಎಂದು ಬಿಜೆಪಿ ಪ್ರಶ್ನಿಸಿದೆ.

‘ವೀರಶೈವ - ಲಿಂಗಾಯತ ಪ್ರತ್ಯೇಕ ಧರ್ಮ ವಿಭಜನೆಯ ವಿಫಲ ಯತ್ನದ ಸಮಯದಲ್ಲಿ ಎಂ.ಬಿ.ಪಾಟೀಲ್ ನಾಡಿನ ಹಲವಾರು ಸ್ವಾಮೀಜಿಗಳ ಬಗ್ಗೆ ಅಗೌರವಯುತವಾಗಿ ನಡೆದುಕೊಂಡರು‌. ಅಂದು ಅವರ ಬೆನ್ನಿಗೆ‌ ನಿಂತಿದ್ದ ಸಿದ್ದರಾಮಯ್ಯ(Siddaramaiah)ಈಗ ಮಠಾಧೀಶರ ವಿರುದ್ಧ ಹೇಳಿಕೆ ನೀಡುತ್ತಲೇ ಎಂಬಿ ಪಾಟೀಲ್ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ’ ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: SSLC Exam: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದ ವೇಳೆ ಹೃದಯಾಘಾತ, ವಿದ್ಯಾರ್ಥಿನಿ ಸಾವು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News