ಹೊಸದಾಗಿ ಓಪೆನ್ ಆಗಿರುವ ಬ್ಯೂಟಿ ಪಾರ್ಲರ್‌ಗೆ ಹೋಗ್ತಾ ಇದ್ದೀರಾ? ಈ 5 ವಿಷಯಗಳನ್ನು ನೆನಪಿನಲ್ಲಿಡಿ

Beauty Parlour: ಮಹಿಳೆಯರು ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಪಾರ್ಲರ್‌ಗಳಿಗೆ ಹೋಗುತ್ತಾರೆ. ಆದರೆ, ಅಂದ ಹೆಚ್ಚಿಸಲೆಂದು ಹೋದ ಬ್ಯೂಟಿ ಪಾರ್ಲರ್‌ನಲ್ಲಿ ಕೆಲವು ವಿಚಾರಗಳ ಬಗ್ಗೆ ಸರಿಯಾದ ನಿಗಾ ವಹಿಸದಿದ್ದರೆ ಇದು ನಿಮ್ಮ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. 

Written by - Yashaswini V | Last Updated : Jul 4, 2024, 03:31 PM IST
  • ಕೆಲವರಿಗೆ ಪದೇ ಪದೇ ಬ್ಯೂಟಿ ಪಾರ್ಲರ್ ಬದಲಿಸುವುದು ಇಷ್ಟವಾಗುವುದಿಲ್ಲ.
  • ಇನ್ನೂ ಕೆಲವರಿಗೆ ಆಗಾಗ್ಗೆ ಹೊಸದೇನಿದೆ? ಎಲ್ಲಿ ಸರ್ವಿಸ್ ಚೆನ್ನಾಗಿರುತ್ತದೆ ಎಂಬುದನ್ನೂ ಆವಿಷ್ಕರಿಸುವ ಅಭ್ಯಾಸವಿರುತ್ತದೆ.
  • ಇದಕ್ಕಾಗಿ ಅವರು ಬೇರೆ ಬೇರೆ ಬ್ಯೂಟಿ ಪಾರ್ಲರ್‌ಗಳಿಗೆ ಭೇಟಿ ನೀಡಬಹುದು.
ಹೊಸದಾಗಿ ಓಪೆನ್ ಆಗಿರುವ ಬ್ಯೂಟಿ ಪಾರ್ಲರ್‌ಗೆ ಹೋಗ್ತಾ ಇದ್ದೀರಾ? ಈ 5 ವಿಷಯಗಳನ್ನು ನೆನಪಿನಲ್ಲಿಡಿ title=

Beauty Parlour Tips: ಸೌಂದರ್ಯಕ್ಕೆ ಮತ್ತೊಂದು ಹೆಸರೇ ಹೆಣ್ಣು. ಮೊದಲೆಲ್ಲಾ ಮಹಿಳೆಯರು ತಮ್ಮ ಮನೆಯಲ್ಲಿಯೇ ಹಾಲಿನ ಕೆನೆ ಹಚ್ಚುವುದು, ಗಂಧದ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚುವುದರ ಜೊತೆಗೆ ಅರಿಶಿನ, ಕಡಲೆಹಿಟ್ಟು, ಅಲೋವೆರಾದಂತಹ ಮನೆಯಲ್ಲಿ ಸುಲಭವಾಗಿ ಸಿಗುವ ಪದಾರ್ಥಗಳನ್ನು ಬಳಸಿ ತಮ್ಮ ಚರ್ಮದ ಆರೈಕೆ ಮಾಡುತ್ತಿದ್ದರೂ. ಬದಲಾದ ಜೀವನಶೈಲಿಯಲ್ಲಿ ಬ್ಯೂಟಿ ಪಾರ್ಲರ್‌ಗಳ ಆಗಮನದೊಂದಿಗೆ ಮಹಿಳೆಯರು ಸೌಂದರ್ಯವನ್ನು ಇಮ್ಮಡಿಗೊಳಿಸಲು ಅಲ್ಲಿಗೆ ಹೋಗುತ್ತಾರೆ.

ಕೆಲವರಿಗೆ ಪದೇ ಪದೇ ಬ್ಯೂಟಿ ಪಾರ್ಲರ್ ಬದಲಿಸುವುದು ಇಷ್ಟವಾಗುವುದಿಲ್ಲ. ಇನ್ನೂ ಕೆಲವರಿಗೆ ಆಗಾಗ್ಗೆ ಹೊಸದೇನಿದೆ? ಎಲ್ಲಿ ಸರ್ವಿಸ್ ಚೆನ್ನಾಗಿರುತ್ತದೆ ಎಂಬುದನ್ನೂ ಆವಿಷ್ಕರಿಸುವ ಅಭ್ಯಾಸವಿರುತ್ತದೆ. ಇದಕ್ಕಾಗಿ ಅವರು ಬೇರೆ ಬೇರೆ ಬ್ಯೂಟಿ ಪಾರ್ಲರ್‌ಗಳಿಗೆ ಭೇಟಿ ನೀಡಬಹುದು.  ಆದರೆ, ಬ್ಯೂಟಿ ಪಾರ್ಲರ್‌ಗಳಲ್ಲಿ ಕೆಲವು ವಿಷಯಗಳನ್ನು ನಿರ್ಲಕ್ಷಿಸುವುದರಿಂದ ಇದು ನಿಮ್ಮ ಚರ್ಮದ ಆರೋಗ್ಯದ ಮೇಲೆ, ಸೌಂದರ್ಯದ ಮೇಲೆ ಋಣಾತ್ಮಕ ಪರಿಣಾಮ ಉಂಟು ಮಾಡಬಹುದು. ಹಾಗಿದ್ದರೆ ಬ್ಯೂಟಿ ಪಾರ್ಲರ್‌ಗೆ ಹೋಗುವಾಗ ವಿಚಾರಗಳ ಬಗ್ಗೆ ವಿಶೇಷ ಗಮನ ಇರಬೇಕು ಎಂದು ತಿಳಿಯೋಣ... 

ಬ್ಯೂಟಿ ಪಾರ್ಲರ್‌ಗೆ ಹೋಗುವಾಗ ಈ ವಿಷಯಗಳ ಬಗ್ಗೆ ಇರಲಿ ವಿಶೇಷ ಗಮನ: 
* ಬ್ರ್ಯಾಂಡ್ ಸಲೂನ್: 

ಇತ್ತೀಚಿನ ದಿನಗಳಲ್ಲಿ ಬ್ರ್ಯಾಂಡ್ ಸಲೂನ್ ದೇಶಾದ್ಯಂತ ಹೆಚ್ಚು ಪ್ರಚಲಿತವಾಗಿದೆ. ಒಂದೇ ಬ್ರ್ಯಾಂಡ್‌ನ ಎಲ್ಲಾ ಸಲೂನ್‌ಗಳು ಒಂದೇ ರೀತಿಯ ಸೇವೆಯನ್ನು ಒದಗಿಸುತ್ತವೆ. ಇದರಲ್ಲಿ ಮೋಸ ಹೋಗುವುದನ್ನು ತಪ್ಪಿಸಲು ದೊಡ್ಡ ಬ್ರ್ಯಾಂಡ್ ಪಾರ್ಲರ್‌ಗೆ ಹೋದಾಗ ಈ ಬಗ್ಗೆ ಖಚಿತಪಡಿಸಿಕೊಳ್ಳುವುದನ್ನು ಮರೆಯಬೇಡಿ. ಇಲ್ಲದಿದ್ದರೆ, ನೀವು ಮೋಸ ಹೋಗುವ ಸಾಧ್ಯತೆ ಇರುತ್ತದೆ. 

ಇದನ್ನೂ ಓದಿ- Beauty Tips: ಮೊಡವೆ ಮುಕ್ತ, ಕಲೆರಹಿತ ತ್ವಚೆಗಾಗಿ ಒಂದೆರಡು ಹನಿ ರಸ ಸಾಕು!

* ರಿವ್ಯೂವ್: 
ನೀವು ಉತ್ತಮ ಬ್ಯೂಟಿ ಪಾರ್ಲರ್‌ಗೆ ಹೋಗಲು ಬಯಸಿದರೆ ಅದರ ರಿವ್ಯೂವ್ ಅನ್ನು ಕೇವಲ ಇಂಟರ್ನೆಟ್ ನಲ್ಲಿ ಹುಡುಕುವ ಬದಲಿಗೆ ನಿಮ್ಮ ಸ್ನೇಹಿತರು, ಪರಿಚಯಸ್ಥರಿಂದ ಪಾರ್ಲರ್‌ನ ಸಾಧಕ-ಬಾಧಕಗಳ ಬಗ್ಗೆ ವಿಚಾರಿಸಿ. ಇದರಿಂದ ನೀವು ಅಪೇಕ್ಷಿಸಿದಂತೆ ನಿಮಗೆ ಉತ್ತಮ ಸೇವೆ ಲಭ್ಯವಾಗುವ ಪಾರ್ಲರ್ ಆಯ್ಕೆ ಮಾಡಬಹುದು. 

* ನೈರ್ಮಲ್ಯ: 
ಯಾವುದೇ ಪಾರ್ಲರ್‌ಗೆ ಹೋಗುವಾಗ ಮೊದಲು ಅಲ್ಲಿನ ನೈರ್ಮಲ್ಯದ ಬಗ್ಗೆ ವಿಶೇಷ ಗಮನ ಹರಿಸಿ. ಏಕೆಂದರೆ, ಬ್ಯೂಟಿ ಪಾರ್ಲರ್ ಶುಚಿಯಾಗಿಲ್ಲದಿದ್ದರೆ, ಇಲ್ಲವೇ, ಅವರು ಪ್ರತಿ ಗ್ರಾಹಕರಿಗೂ ಬಳಸುವ ಪದಾರ್ಥಗಳಲ್ಲಿ ನೈರ್ಮಲ್ಯಕ್ಕೆ ಒತ್ತು ನೀಡದೆ ಇದ್ದರೆ ಇದು ನಿಮ್ಮ ಚರ್ಮದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಬಹುದು. 

* ವೃತ್ತಿಪರರು: 
ನೀವು ಯಾವುದೇ ಬ್ಯೂಟಿ ಪಾರ್ಲರ್‌ಗೆ ಹೋದಾಗ ಅಲ್ಲಿ ವೃತ್ತಿಪರರು ಲಭ್ಯವಿದ್ದಾರೆಯೇ? ಅಲ್ಲಿ ಬಳಸುವ ಯಂತ್ರಗಳು ಸರಿಯಾಗಿವೆಯೇ? ಇಲ್ಲ ದೋಷಪೂರಿತವಾಗಿದೆಯೇ ಎಂಬುದನ್ನೂ ಸೂಕ್ಷ್ಮವಾಗಿ ಗಮನಿಸಿದ ಬಳಿಕವಷ್ಟೇ ಅಲ್ಲಿ ಸರ್ವಿಸ್ ಪಡೆಯಿರಿ. 

ಇದನ್ನೂ ಓದಿ- Beauty Tips: ಸದಾ ಯಂಗ್ ಆಗಿ ಕಾಣಲು ಮಲಗುವ ಮುನ್ನ ಈ ಟಿಪ್ಸ್ ಅನುಸರಿಸಿ

* ನೆಚ್ಚಿನ ಪಾರ್ಲರ್: 
ಒಂದೊಮ್ಮೆ ನಿಮ್ಮ ಮನೆಯ ಸಮೀಪದಲ್ಲಿ ಉತ್ತಮ ಸೇವೆ ಒದಗಿಸುವ ಪಾರ್ಲರ್ ಕಂಡು ಕೊಂಡರೆ ಪದೇ ಪದೇ ಬೇರೆ ಬೇರೆ ಬ್ಯೂಟಿ ಪಾರ್ಲರ್‌ಗಾಗಿ ಹುಡುಕಾಡುವ ಬದಲಿಗೆ ನಿಮ್ಮ ನೆಚ್ಚಿನ ಪಾರ್ಲರ್‌ಗೆ ಸಂಪರ್ಕದಲ್ಲಿರಿ.

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News