close

News WrapGet Handpicked Stories from our editors directly to your mailbox

ಅಪ್ಪ-ಮಕ್ಕಳು ಕಾಂಗ್ರೆಸ್​​ ಹೆಸರಿಲ್ಲದಂತೆ ಮಾಡ್ತಾರೆ; ಯಡಿಯೂರಪ್ಪ ವಿಡಿಯೋ ವೈರಲ್

ವರ್ಷದ ಹಿಂದೆ ವಿಧಾನಸಭೆಯಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರಿಗೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದ್ದ ಕಿವಿಮಾತು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Yashaswini V Yashaswini V | Updated: May 24, 2019 , 09:27 AM IST
ಅಪ್ಪ-ಮಕ್ಕಳು ಕಾಂಗ್ರೆಸ್​​ ಹೆಸರಿಲ್ಲದಂತೆ ಮಾಡ್ತಾರೆ; ಯಡಿಯೂರಪ್ಪ ವಿಡಿಯೋ ವೈರಲ್
File Image

ಬೆಂಗಳೂರು: 2018ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅಧಿಕಾರದ ಗದ್ದುಗೆ ಹಿಡಿಯಲು ವಿಫಲವಾಯಿತು. ಕಾಂಗ್ರೆಸ್-ಜೆಡಿಎಸ್ ಮೈತ್ರಿಯೊಂದಿಗೆ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಬಳಿಕ ನಡೆದ ವಿಧಾನಸಭಾ ಅಧಿವೇಶನದಲ್ಲಿ ಬಿ.ಎಸ್. ಯಡಿಯೂರಪ್ಪ ನುಡಿದಿದ್ದ ಭವಿಷ್ಯ ಇಂದು ನಿಜವಾಗಿದೆ.

ವರ್ಷದ ಹಿಂದೆ ವಿಧಾನಸಭೆಯಲ್ಲಿ ಬಿ.ಎಸ್. ಯದಿಯೂರಪ್ಪ ಮಾತನಾಡುತ್ತ, "ನಾನೇನು ಹೇಳುವುದಿಲ್ಲ, ಅಲ್ಲಾ ಸ್ವಾಮಿ... ಕೇಳಿ ಶಿವಕುಮಾರ್ ಅವರೇ, ನಿಮ್ಮನ್ನ ಇನ್ನು ಕೆಲವೇ ತಿಂಗಳುಗಳಲ್ಲಿ ಕಾಂಗ್ರೆಸ್ ಅನ್ನೋ ಹೆಸರನ್ನ ಇಲ್ಲದಂತೆ ಅಪ್ಪ-ಮಕ್ಕಳು ಸೇರಿ ಮಾಡದಿದ್ದರೆ, ನನ್ನ ಹೆಸರನ್ನು ಯಡಿಯೂರಪ್ಪ ಎಂದು ನೀವು ಕರೆಯಬೇಡಿ" ಎಂದಿದ್ದರು.

ನಿನ್ನೆ ಹೊರಬಿದ್ದ ಲೋಕಸಭಾ ಚುನಾವಣೆ 2019ರ ಫಲಿತಾಂಶದಲ್ಲಿ ಬೆಂಗಳೂರು ಗ್ರಾಮಾಂತರ ಹೊರತು ಪಡಿಸಿ ರಾಜ್ಯದ ಇನ್ನಾವ ಭಾಗದಲ್ಲೂ ಕಾಂಗ್ರೆಸ್​ಗೆ ಸಾಧ್ಯವಾಗಿಲ್ಲ. ರಾಜಕೀಯ ಪ್ರವೇಶಿಸಿದ ದಿನದಿಂದ ಇಂದಿನವರೆಗೂ ಒಂದೇ ಒಂದು ಸೋಲನ್ನೂ ಕಾಣದೆ ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದಿದ್ದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೂ ಕೂಡ ಈ ಬಾರಿ ಸೋತಿದ್ದಾರೆ.  ಯಡಿಯೂರಪ್ಪ ನುಡಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಹೆಸರಿಲ್ಲದಂತಾಗಿದೆ. ಇದೀಗ ಯಡಿಯೂರಪ್ಪ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ನೀವೂ ಒಮ್ಮೆ ಆ ವಿಡಿಯೋವನ್ನು ನೋಡಿ...