RR ನಗರದ್ಲಲಿ ‘ಭರ್ಜರಿ ಗೆಲುವು’ ಸಾಧಿಸಿದ ಬಿಜೆಪಿ  

RR ನಗರದ್ಲಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಭರ್ಜರಿ ಗೆಲುವು

Last Updated : Nov 10, 2020, 02:10 PM IST
  • RR ನಗರದ್ಲಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಭರ್ಜರಿ ಗೆಲುವು
  • 40 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಮುನಿರತ್ನ ಗೆಲುವು
  • ಚುನಾವಣಾ ಆಯೋಗ ಅಧಿಕೃತವಾಗಿ ಘೋಷಣೆ ಬಾಕಿ
RR ನಗರದ್ಲಲಿ ‘ಭರ್ಜರಿ ಗೆಲುವು’ ಸಾಧಿಸಿದ ಬಿಜೆಪಿ   title=
Image Courtesy-Munirathna twitter

ಬೆಂಗಳೂರು: ನವೆಂಬರ್ 3ರಂದು ದಲ್ಲಿ ನಡೆದಂತ ಶಿರಾ ಹಾಗೂ RR. ನಗರ ಕ್ಷೇತ್ರಗಳ ಉಪಚುನಾವಣೆಯ ಮತಏಣಿಕ ಕಾರ್ಯ ಇಂದು ನಡೆಯುತ್ತಿದೆ. ಇದೀಗ ಬಂದಿರುವ ಮಾಹಿತಿಯ ಪ್ರಕಾರ ರಾಜರಾಜೇಶ್ವರಿನಗರ(RR) ಕ್ಷೇತ್ರ44,548 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಭರ್ಜರಿ ಗೆಲುವುನ್ನು ಸಾಧಿಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಅಧಿಕೃತವಾಗಿ ಘೋಷಿಸಬೇಕಿದೆ.

RR ನಗರದ್ಲಲಿ ಕುಸುಮಾಗೆ ಶುರುವಾಯ್ತಾ ಸೋಲಿನ ಭಯ?: ನಿನ್ನೆ ಹೇಳಿದ ಮಾತಿನಂತೆ ನಡೆಯದ ಕೈ​ ಅಭ್ಯರ್ಥಿ

ರಾಜರಾಜೇಶ್ವರಿನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಯ್ಡು ಹ್ಯಾಟ್ರಿಕ್ ಗೆಲುವನ್ನು ಸಾಧಿಸಿದ್ದಾರೆ. ಮುನಿರತ್ನ 1,03,291 ಮತಗಳನ್ನು ಗಳಿಸಿದ್ದರೇ, ಕಾಂಗ್ರೆಸ್ ನ ಹೆಚ್ ಕುಸುಮಾ 58,743 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ನ ಕೃಷ್ಣ ಮೂರ್ತಿ 6,381 ಗಳಿಸಿದ್ದಾರೆ. ಬಿಜೆಪಿಯ ಅಭ್ಯರ್ಥಿ ಮುನಿರತ್ನ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 44,548 ಮತಗಳ ಅಂತರದಿಂದ ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ. ಆದ್ರೇ ಅಧಿಕೃತವಾಗಿ ಚುನಾವಣಾ ಆಯೋಗದಿಂದ ಗೆಲವನ್ನು ಘೋಷಣೆ ಮಾಡುವುದು ಬಾಕಿ ಇದೆ.

ಬೈಎಲೆಕ್ಷನ್ ರಿಸಲ್ಟ್: RR.ನಗರ, ಶಿರಾ ಎರಡೂ ಕ್ಷೇತ್ರದಲ್ಲೂ ಬಿಜೆಪಿಗೆ ಭಾರಿ ಮುನ್ನಡೆ; ಕಾಂಗ್ರೆಸ್, ಜೆಡಿಎಸ್ ಹಿನ್ನಡೆ

RR ನಗರದಲ್ಲಿ ಮುನಿರತ್ನಗೆ ಹ್ಯಾಟ್ರಿಕ್ ಗೆಲುವು: ಅಂದಹಾಗೇ ಮುನಿರತ್ನ 2013ರ ಚುನಾವಣೆಯಲ್ಲಿ 71,064 ಮತಗಳನ್ನು ಗಳಿಸಿದ್ದ ಅವರು, 18,813 ಮತಗಳ ಅಂತರದಿಂದ ಗೆದ್ದಿದ್ದರು. 2018ರ ಚುನಾವಣೆಯಲ್ಲಿ ಮುನಿರತ್ನ 1,08,064 ಮತಗಳನ್ನು ಗಳಿಸಿ, 25,492 ಮತಗಳ ಅಂತರದಿಂದ ಗೆದ್ದಿದ್ದರು. ಇದೀಗ 2020ರ ಉಪ ಚುನಾವಣೆಯಲ್ಲಿ 1,03,291 ಮತಗಳನ್ನು ಗಳಿಸಿದ್ದು, 44,548ಕ್ಕೂ ಹೆಚ್ಚು ಮತಗಳಿಂದ ಭರ್ಜರಿ ಹ್ಯಾಟ್ರಿಕ್ ಗೆಲುವನ್ನು ಸಾಧಿಸಿದ್ದಾರೆ. ಚುನಾವಣಾ ಆಯೋಗದಿಂದ ಮುನಿರತ್ನ ಗೆಲುವನ್ನು ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.

 

 

Trending News