ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಲ್. ಸಂತೋಷ್ ನೇಮಕ

ಭಾನುವಾರದಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಪಕ್ಷದ ಜಂಟಿ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.ಇನ್ನೊಂದೆಡೆಗೆ ಈ ಸ್ಥಾನದಲ್ಲಿದ್ದ ರಾಮ್‌ಲಾಲ್ ಅವರನ್ನು ಮತ್ತೆ ಆರ್‌ಎಸ್‌ಎಸ್‌ಗೆ ಸ್ಥಳಾಂತರಿಸಲಾಗಿದೆ.

Last Updated : Jul 14, 2019, 07:17 PM IST
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಲ್. ಸಂತೋಷ್ ನೇಮಕ  title=
Photo courtesy: DNA

ನವದೆಹಲಿ: ಭಾನುವಾರದಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಪಕ್ಷದ ಜಂಟಿ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಇನ್ನೊಂದೆಡೆಗೆ ಈ ಸ್ಥಾನದಲ್ಲಿದ್ದ ರಾಮ್‌ಲಾಲ್ ಅವರನ್ನು ಮತ್ತೆ ಆರ್‌ಎಸ್‌ಎಸ್‌ಗೆ ಸ್ಥಳಾಂತರಿಸಲಾಗಿದೆ.

ವಿಶೇಷವಾಗಿ ಕರ್ನಾಟಕದಲ್ಲಿ ಚುನಾವಣಾ ರಾಜಕೀಯದ ಅನುಭವ ಹೊಂದಿರುವ ಸಂತೋಷ್ ಆರ್ಎಸ್ಎಸ್ ಪ್ರಚರಕರಾಗಿರುವುದಲ್ಲದೆ ಚುನಾವಣಾ ರಾಜಕೀಯದ ಆಳವನ್ನು ಬಲ್ಲವರಾಗಿದ್ದಾರೆ. ಈ ಹಿನ್ನಲೆಯಲ್ಲಿ ಕೇಂದ್ರ ಬಿಜೆಪಿ ಅವರಿಗೆ ಮಣೆ ಹಾಕಿದೆ ಎನ್ನಲಾಗಿದೆ.ಅವರ ನೇಮಕಾತಿ ತಕ್ಷಣದಿಂದ ಜಾರಿಗೆ ಬರುತ್ತದೆ ಎಂದು ಬಿಜೆಪಿ ಹೇಳಿಕೆಯಲ್ಲಿ ತಿಳಿಸಿದೆ.

ಬಿ.ಎಲ್ ಸಂತೋಷ್ ಅವರು 2014 ರಲ್ಲಿ ದಕ್ಷಿಣ ರಾಜ್ಯಗಳ ರಾಷ್ಟ್ರೀಯ ಉಸ್ತುವಾರಿ ವಹಿಸುವ ಮೊದಲು, ಕರ್ನಾಟಕದಲ್ಲಿ ಎಂಟು ವರ್ಷಗಳ ಕಾಲ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ (ಸಂಘಟನೆ) ಕಾರ್ಯನಿರ್ವಹಿಸಿದ್ದರು.

 

Trending News