ಕೊಪ್ಪಳ: ವಯೋ ಕಾರಣಕ್ಕೆ ಹಾಗೂ ಇನ್ನಿತರ ಕಾರಣಗಳಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರನ್ನು ಕೆಳಗಿಳಿಸುತ್ತಾರೆ ಎಂಬ ಚರ್ಚೆ ನಿಧಾನವಾಗಿ ಮುನ್ನಲೆಗೆ ಬರುತ್ತಿದ್ದಂತೆ ಅವರ ಬೆಂಬಲಿಗ ಸಚಿವರು ಯಡಿಯೂರಪ್ಪ ಪರ ಬ್ಯಾಟ್ ಬೀಸಲು ಆರಂಭಿಸಿದ್ದಾರೆ.
ಇಂದು ಕೊಪ್ಪಳದಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್ (BC Patil), ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದು, ಅವರ ನಾಯಕತ್ವದಲ್ಲಿ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸುಭದ್ರವಾಗಿದೆ ಎಂದು ಹೇಳಿದ್ದಾರೆ.
ಸಚಿವ ಎಸ್.ಟಿ. ಸೋಮಶೇಖರ್ ಕಾರ್ಯವೈಖರಿ ಬಗ್ಗೆ ಸಿಎಂ ಯಡಿಯೂರಪ್ಪ ಮೆಚ್ಚುಗೆ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ. ಪಾಟೀಲ್, ಸರ್ಕಾರ ಸುಭದ್ರವಾಗಿದೆ. ಪೂರ್ಣ ಅವಧಿಯನ್ನು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮುಗಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ (BJP Government) ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿದೆ. ಒಂದು ವರ್ಷದಲ್ಲಿ ಬಂದಂತಹ ಸಂಕಷ್ಟಗಳು ಇತಿಹಾಸದಲ್ಲಿ ಎಂದಿಗೂ ಬಂದಿರುವುದಿಲ್ಲ. ಅತಿವೃಷ್ಟಿ, ಬರ ಪರಿಸ್ಥಿತಿಯಂತಹ ಪರಿಸ್ಥಿತಿಯನ್ನು ಆರಂಭದಲ್ಲಿ ಯಡಿಯೂರಪ್ಪ ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದು ಸಚಿವರು ತಿಳಿಸಿದರು.
ವರ್ಷದ ಸಾಧನೆಗಳ ಕಿರುಹೊತ್ತಿಗೆ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ
24 ದಿನಗಳ ಕಾಲ ಅತಿವೃಷ್ಟಿಯನ್ನು ಯಡಿಯೂರಪ್ಪ ಒಬ್ಬರೇ ಸಮರ್ಥವಾಗಿ ನಿಭಾಯಿಸಿದ್ದಾರೆ. ಅತಿವೃಷ್ಟಿಗೆ ,1869 ಕೋಟಿ ರೂ. ಕೇಂದ್ರದಿಂದ ಹಾಗೂ 6,108 ಕೋಟಿ ರೂ. ರಾಜ್ಯ ಸರ್ಕಾರದಿಂದ ಸೇರಿದಂತೆ ಒಟ್ಟು 7,977 ಕೋಟಿ ರೂ.ಹಣವನ್ನು ನೆರೆಹಾವಳಿಯಲ್ಲಿ ರಾಜ್ಯ ಸರ್ಕಾರ ಉಪಯೋಗಿಸಿದೆ. 5 ಲಕ್ಷ ರೂ.ತತಕ್ಷಣ ಮೊದಲನೆ ಕಂತನ್ನು ಮನೆ ಕಳೆದುಕೊಂಡವರಿಗೆ ನೀಡಿದ್ದಾರೆ.
ಕಿಸಾನ್ ಸಮ್ಮಾನ್ ಯೋಜನೆ 50 ಲಕ್ಷಕ್ಕೂಹೆಚ್ಚು ರೈತರು ಪ್ರಧಾನಿ ನಿಧಿಯಿಂದ 6ಸಾವಿರ ರೂ. ಕರ್ನಾಟಕದಿಂದ 4 ಸಾವಿರ ದಂತೆ ಒಟ್ಟು 10 ಸಾವಿರ ರೂ. ನೀಡಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸುವ ಮೂಲಕ ಯಡಿಯೂರಪ್ಪ ಸರ್ಕಾರಕ್ಕೆ ಜನರು ಶಹಬ್ಬಾಸ್ ಗಿರಿಯನ್ನು ನೀಡಿದ್ದಾರೆ.
ಕೋವಿಡ್-19 (Covid 19) ನಿಂದ ಕರ್ನಾಟಕವನ್ನು ಸುರಕ್ಷಿತವಾಗಿ ಇರಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ರಾಜ್ಯ ತುರ್ತು ಕಾರ್ಯಕ್ರಮಗಳ ನಿಧಿಯ ಮೊತ್ತವನ್ನು 80 ಕೋಟಿಯಿಂದ 2200 ಕೋಟಿ ರೂ. ಹೆಚ್ಚಿಸಿ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಯಡಿಯೂರಪ್ಪ ರೈತರಿಗೆ (Farmers) ನೆರವು ನೀಡಿದ್ದಾರೆ. ನೆರೆ ಕೋವಿಡ್ ಬರಗಳೊಂದಿಗೆ ಮುಳ್ಳಿನ ಹಾಸಿಗೆಯ ಒಂದು ವರ್ಷದ ಹಾದಿಯನ್ನು ಯಡಿಯೂರಪ್ಪ ಬಹಳ ಸೂಕ್ಷ್ಮವಾಗಿ ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದರು.